Slide
Slide
Slide
previous arrow
next arrow

ದ್ವಿಚಕ್ರ ವಾಹನ ಸ್ಕಿಡ್; ಸವಾರರಿಗೆ ಗಾಯ

300x250 AD

ದಾಂಡೇಲಿ: ಪ್ರವಾಸಕ್ಕೆಂದು ನಗರಕ್ಕೆ ಬಂದಿದ್ದ ದಂಪತಿಗಳಿಬ್ಬರು ಬಾಡಿಗೆ ದ್ವಿಚಕ್ರ ವಾಹನದಲ್ಲಿ ಜೊಯಿಡಾ ತಾಲ್ಲೂಕಿನ ಗಣೇಶಗುಡಿಗೆ ಹೋಗಿ ಹಿಂದಿರುಗಿ ಬರುತ್ತಿದ್ದಾಗ ತಾಲ್ಲೂಕಿನ ಬರ್ಚಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್ ಆಗಿ ಬಿದ್ದು, ಇಬ್ಬರೂ ಗಾಯಗೊಂಡಿದ್ದಾರೆ.

ರಾಯಚೂರಿನ ಬಸವರಾಜ ಸಾಹುಕಾರ್ ಮತ್ತು ಅವರ ಪತ್ನಿ ಅಕ್ಷತಾ ಬಸವರಾಜ ಗಾಯಗೊಂಡವರಾಗಿದ್ದಾರೆ. ಇವರು ನಗರದ ರೆಂಟಲ್ ದ್ವಿಚಕ್ರ ವಾಹನವನ್ನು ಬಾಡಿಗೆಗೆ ಪಡೆದು ಗಣೇಶಗುಡಿಗೆ ಹೋಗಿ ಹಿಂದುರುಗಿ ಬರುತ್ತಿದ್ದಾಗ ಈ ಘಟನೆ ನಡೆದಿದೆ. ಗಾಯಗೊಂಡ ಇಬ್ಬರಿಗೂ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆ ತರಲಾಗಿದ್ದು, ಬಸವರಾಜ ಸಾಹುಕಾರ್ ಎಂಬವರಿಗೆ ಕಾಲಿಗೆ ಗಾಯವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.

300x250 AD
Share This
300x250 AD
300x250 AD
300x250 AD
Back to top