ಜೊಯಿಡಾ: ತಾಲೂಕಿನ ಫಣಸೋಲಿ ಕಾಳಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ವಿಶ್ವ ಪರಸರ ದಿನಾಚರಣೆ ಅಂಗವಾಗಿ ಬೀಜ ಬಿತ್ತೋತ್ಸವ ಕಾರ್ಯಕ್ರಮವನ್ನು ಫಣಸೋಲಿ ವಲಯ ಅರಣ್ಯಾಧಿಕಾರಿ ರಶ್ಮಿ ದೇಸಾಯಿ ಗಿಡನೆಟ್ಟು ಬೀಜಬಿತ್ತುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ವರ್ಷವೂ ನಮ್ಮ ಅರಣ್ಯ ಇಲಾಖೆ ವತಿಯಿಂದ ವಿಶ್ವ ಪರಿಸರ ದಿನಾಚರಣೆಯಂದು ಬೀಜಬಿತ್ತೋತ್ಸವ ಕಾರ್ಯಕ್ರಮವನ್ನು ಮಾಡಲಾಗುತ್ತದೆ. ಬೀಜದ ಉಂಡೆಗಳನ್ನು ಮಾಡುವ ಮುಖ್ಯ ಉದ್ದೇಶ ಸಸಿಗಳು ಸಾಯದೆ ಚನ್ನಾಗಿ ಬೆಳೆಯಲಿ ಎಂಬುದಾಗಿದೆ. ಸರಿಯಾದ ಸಮಯದಲ್ಲಿ ಮಳೆ, ಬೆಳೆಗಳಾಗಲು ಅರಣ್ಯ ತುಂಬಾ ಮುಖ್ಯ. ಅರಣ್ಯ ಇಲ್ಲವಾದರೆ ಮಳೆಯಾಗದೆ ಭೂಮಿ ಬರಡಾಗುತ್ತದೆ. ನಾವು ಕಾಡು ಉಳಿಸದಿದ್ದರೆ ನಮ್ಮ ಮುಂದಿನ ಪೀಳಿಗೆಯ ಜನರಿಗೆ ಸಮಸ್ಯೆ ಉಂಟಾಗುವುದು ಖಚಿತ. ಹೀಗಾಗಿ ಎಲ್ಲರೂ ವಿಶ್ವ ಪರಿಸರ ದಿನದಂದು ಒಂದಾದರು ಗಿಡಗಳನ್ನು ನೆಟ್ಟು ಪೋಷಿಸಿ ಎಂದರು.
ಈ ಸಂದರ್ಭದಲ್ಲಿ ಅರಣ್ಯ ಇಲಾಕೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.