• Slide
    Slide
    Slide
    previous arrow
    next arrow
  • ಎಂಎಂ ಮಹಾವಿದ್ಯಾಲಯದ ಉದ್ಯೋಗ ಮೇಳ ಉದ್ಯೋಗಾಕಾಂಕ್ಷಿಗಳಿಗೆ ಸಹಕಾರಿ: ಎಸ್.ಕೆ.ಭಾಗ್ವತ್

    300x250 AD

    ಶಿರಸಿ: ಉದ್ಯೋಗ ಆಕಾಂಕ್ಷಿಗಳಿಗೆ ಉದ್ಯೋಗವನ್ನು ಒದಗಿಸುವ ಕೆಲಸವನ್ನು ನಮ್ಮ ಸಂಸ್ಥೆ ಇಂದು ಮಾಡುತ್ತಿದೆ. ವಿವಿಧ ಕಂಪನಿ ಹಾಗೂ ಇನ್ಸ್ಟಿಟ್ಯೂಟ್ ಗಳಿಗೆ ಸಂಪರ್ಕಿಸಿ ಇನ್ನು ಹೆಚ್ಚಿನ ಉದ್ಯೋಗ  ಆಕಾಂಕ್ಷಿಗಳಿಗೆ ಸಹಕಾರಿ ಆಗುವಂತೆ ಮಾಡಿದೆ. ಎಂದು ಕಾಲೇಜು ಉಪ ಸಮಿತಿಯ ಅಧ್ಯಕ್ಷ ಎಸ್.ಕೆ.ಭಾಗವತ್ ಹೇಳಿದರು. 

    ಅವರು ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ಲೇಸ್ಮೆಂಟ್ ಸೆಲ್ ಹಾಗೂ ಐಸಿಐಸಿಐ ಬ್ಯಾಂಕ್ ಸಹಯೋಗದಲ್ಲಿ ಕಾಲೇಜಿನಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು. 

    ಉತ್ತರ ಕರ್ನಾಟಕದ ಯಾವುದೇ ಕಂಪನಿ ಹಾಗೂ ಯಾವುದೇ ಶಿಕ್ಷಣ ಸಂಸ್ಥೆಗಳಲ್ಲಿ ನಮ್ಮ ಭಾಗದ ಜನರೇ ಅಧಿಕವಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದು ಇದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಇದಕ್ಕೆ ಕಾರಣ ಅವರ ಭೌತಿಕ ಸ್ಥಿತಿ ಹಾಗೂ ಕೆಲಸದ ಬಗೆಗೆ ಅವರಿಗಿರುವ ಬದ್ಧತೆಯಾಗಿದೆ. ತಮ್ಮ ತಮ್ಮ ಉದ್ಯೋಗದಲ್ಲಿ ಬಹಳ ನಿಷ್ಠೆಯನ್ನು ಹೊಂದಿರುತ್ತಾರೆ. ಅದನ್ನು ಉಳಿಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿ.  ಇಂದು ಯುವ ಜನರಿಗೆ ಉದ್ಯೋಗವನ್ನು ಒದಗಿಸುವುದು ಬಹು ದೊಡ್ಡ ಸವಾಲಾಗಿದೆ ಅನೇಕ ಪದವೀಧರರು ನಿರುದ್ಯೋಗಿಗಳಾಗಿದ್ದಾರೆ ಅವರ  ವಿದ್ಯಾರ್ಹತೆಗೆ ತಕ್ಕನಾದ ಉದ್ಯೋಗ ದೊರೆಯುತ್ತಿಲ್ಲ ಸಮಾಜದಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡುವಲ್ಲಿ ಯುವಜನರ ಪಾತ್ರ ದೊಡ್ಡದು ಇಂದು ಆ ಯುವಜನರೆಲ್ಲರೂ ಸೇರಿ ಉತ್ತಮ ಸಮಾಜದ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.       

        ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್. ಹಳೆಮನೆ ಮಾತನಾಡಿ ನಮ್ಮ ಜಿಲ್ಲೆಯಲ್ಲಿ ಬುದ್ಧಿವಂತರಿಗೆ ಬರವಿಲ್ಲ ಕರಾವಳಿಯ ಜಿಲ್ಲೆಗಳಲ್ಲಿ ಪ್ರತಿಭೆಗಳು ಅಧಿಕವಾಗಿವೆ. ಇವತ್ತಿನ ಕಾಲದಲ್ಲಿ ಪದವಿ ಒಂದೇ ಇದ್ದರೆ ಸಾಲದು ಜೊತೆಗೆ ಕೌಶಲ್ಯ  ಬೇಕು ಒಂದು ಮಗುವಿನ ಶಿಕ್ಷಣ ಆರಂಭವಾದಾಗ ಆ ಮಗು ಮುಂದೆ ಏನು ಮಾಡಬೇಕು ಎಂದು ಅದರ ಪಾಲಕರು ಯೋಚಿಸುವರು. 

    300x250 AD

    ಇಂದು ಬಹುತೇಕ ಉದ್ಯೋಗ ಸಂಸ್ಥೆಗಳು ಪದವಿಯ ಜೊತೆ ಜೊತೆಗೆ ಕೌಶಲ್ಯ ಕೇಳುತ್ತವೆ. ಆಗ ಮಾತ್ರ ಉದ್ಯೋಗವನ್ನು ಗಿಟ್ಟಿಸಿಕೊಳ್ಳಲು ಸಾಧ್ಯ. ಈ ಉದ್ದೇಶದಿಂದಲೇ ನಾವು ನಮ್ಮ ಸಂಸ್ಥೆಯಲ್ಲಿ ಟೈಲರಿಂಗ್ ಹಾಗೂ ಎಂಬ್ರಾಯ್ಡರಿ  ಡಿಪ್ಲೋಮಾ ತರಬೇತಿ ಕೋರ್ಸ ಅನ್ನು  ಆರಂಭಿಸಿದ್ದೇವೆ. ಶ್ರಮವನ್ನು ಪಡುವುದರ ಮೂಲಕ ಉತ್ತಮ ಜೀವನವನ್ನು ನಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದರು.

     ಐಸಿಐಸಿಐ ಬ್ಯಾಂಕ್ ನ ಹುಬ್ಬಳ್ಳಿ ವಲಯ ಪ್ರಭಂದಕ ಗೋಪಾಲ್ ಗಡಗಿ ಹಾಗೂ ಪ್ರೊ.ಕೆ.ಎನ್. ರೆಡ್ಡಿ  ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಕಡೆಗಳಿಂದ ಬಂದ ನೂರಾರು ಉದ್ಯೋಗ ಆಕಾಂಕ್ಷಿಗಳು ಸಂದರ್ಶನದಲ್ಲಿ ಪಾಲ್ಗೊಂಡರು.

    Share This
    300x250 AD
    300x250 AD
    300x250 AD
    Leaderboard Ad
    Back to top