• Slide
    Slide
    Slide
    previous arrow
    next arrow
  • ಎಂಇಎಸ್’ನಲ್ಲಿ ಗ್ರಂಥ ಮಿತ್ರ ಕಾರ್ಯಕ್ರಮ ಯಶಸ್ವಿ

    300x250 AD

    ಶಿರಸಿ: ಒಬ್ಬ ವ್ಯಕ್ತಿಗೆ ನಾಯಕತ್ವದ ಗುಣ ಬರಬೇಕಾದರೆ ಅವನಿಗೆ ತಾಳ್ಮೆ, ಸಹಭಾಗಿತ್ವ ಅತ್ಯಂತ ಪ್ರಮುಖವಾದ ಅಂಶ. ಅದನ್ನು ಎನ್ಎಸ್ಎಸ್ ನೀಡುತ್ತದೆ. ಡಿಜಿಟಲ್ ತಂತ್ರಜ್ಞಾನಗಳ ಮೂಲಕ ಹಳ್ಳಿಗಳಲ್ಲಿ ಕಲಿಕೆ ಮುಂದುವರಿಸುವ ಕುರಿತಾದ ಮಾಹಿತಿಯನ್ನು ನೀಡುವ ಕಾರ್ಯ ಈ ಮೂಲಕ ಜಾರಿಗೆ ಬರಲಿದೆ ಎಂದು ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಟಿ.ಎಸ್. ಹಳೇಮನೆ ಹೇಳಿದರು.

    ಅವರು ಪಂಚಾಯತ್ ರಾಜ್ ಇಲಾಖೆ, ಎನ್ಎಸ್ಎಸ್ ವಿಭಾಗ ಮತ್ತು ಆಕಾಂಕ್ಷ ಫೌಂಡೇಶನ್ ಪುತ್ತೂರು ಇವರ ಸಹಯೋಗದಲ್ಲಿ ಎನ್ಎಸ್ಎಸ್ ಸ್ವಯಂಸೇವಕರಿಗೆ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ‘ಗ್ರಂಥ ಮಿತ್ರ’ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಹಳ್ಳಿಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕುರಿತಾಗಿ ನಮ್ಮ ಈ ಆಕಾಂಕ್ಷಾ ಎಂಬ ಸಂಘ ಪ್ರಾರಂಭ ಮಾಡಲಾಗಿದೆ. ಪ್ರತಿ ಪಂಚಾಯತ್ ಮಿತಿಯಲ್ಲಿ ಗ್ರಂಥಾಲಯದ  ಬಳಕೆಯ ಪ್ರಮಾಣ ಕಡಿಮೆ ಇದೆ. ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಮೂಲಕ ಗ್ರಂಥಾಲಯದ ಬಳಕೆಯನ್ನು ಹೆಚ್ಚಿಸುವ ಪ್ರಯತ್ನ ಇದಾಗಿದೆ ಎಂದು ಆಕಾಂಕ್ಷಾ ಫೌಂಡೇಶನ್ ಮ್ಯಾನೇಜ್  ಡಾ. ಶ್ರೀಶ ಭಟ್ ಹೇಳಿದರು.

    300x250 AD

    ಐಎಎಸ್ ಅಧಿಕಾರಿ  ಉಮಾ ಮಹದೇವನ್ 12:30ಕ್ಕೆ ಆನ್ಲೈನ್ ವಿಡಿಯೋ ಕಾಲ್ ಮೂಲಕ ತರಬೇತಿಗೆ ಸೇರಿಕೊಂಡು ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

    ಎನ್ಎಸ್ಎಸ್ ಜಿಲ್ಲಾ ನೋಡಲ್ ಅಧಿಕಾರಿ ಪ್ರೊ. ಜಿ‌.ಟಿ. ಭಟ್ ಸ್ವಾಗತಿಸಿ, ಪ್ರಾಸ್ತಾವಿಸಿ ಎನ್ಎಸ್ಎಸ್ ಮತ್ತು ಪಂಚಾಯತ್ ರಾಜ್ ಇಲಾಖೆ ಕಳೆದ ಐದು ವರ್ಷಗಳಿಂದ ಜೊತೆಗೂಡಿ ಕೆಲವು ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದೆ. ಅದರ ಅಂಗವಾಗಿ ಈ ಕಾರ್ಯಕ್ರಮವನ್ನು ಯುವಜನರಿಗೆ ಪ್ರಯೋಜನ ಸಿಗಲಿ ಎಂದು ಸಂಘಟಿಸುತ್ತಿದ್ದೇವೆ. ಗ್ರಂಥಾಲಯದ ಬಳಕೆ ಮತ್ತು ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಲು ಪುತ್ತೂರಿನ ಆಕಾಂಕ್ಷಾ ಟ್ರಸ್ಟ್ ಜೊತೆಗೂಡಿದೆ ಎಂದರು. ಕಾರ್ಯಕ್ರಮದಲ್ಲಿ   ಜಿಲ್ಲಾ ಪಂಚಾಯತದ ಜೆ.ಆರ್.ಭಟ್, ಶಿರಸಿ ತಾಲೂಕು ಪಂಚಾಯತಿಯ  ಎಸ್.ವಿ.ಭಟ್, ಎನ್ಎಸ್ಎಸ್ ಅಧಿಕಾರಿ ಆರ್. ಆರ್. ಹೆಗಡೆ ಮತ್ತು ಶಿರಸಿ, ಸಿದ್ದಾಪುರ, ಯಲ್ಲಾಪುರ ಮುಂಡಗೋಡ ತಾಲೂಕಿನ ಪದವಿ ಕಾಲೇಜುಗಳ ಎನ್ಎಸ್ಎಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top