eUK ವಿಶೇಷ: ಮಾನವೀಯ ಶಾಂತಿ, ಪ್ರೀತಿ, ಸ್ವಾತಂತ್ರ್ಯ ನಾಗರಿಕ ಮೌಲ್ಯವಾದರೂ ಪೈಶಾಚಿಕ ಮನಸ್ಸಿನವರ ಆಕಾಂಕ್ಷೆಗಳು ಬೇರೆಯದೇ ಆಗಿರುತ್ತವೆ. ಇಲ್ಲಿ ಎಸಗುವ ಕರಾಳತೆ ಮತ್ತು ನಕಾರಾತ್ಮಕ ಪ್ರಕ್ರಿಯೆಗಳು ಪರಿಗಣನೆಗೆ ಬರುತ್ತವೆ.
ದೀಪ್ತಿ ಮಾರ್ಲಾ ಕೊಡಗಿನ ಹುಡುಗಿ. ದೇರಳಕಟ್ಟೆಯಲ್ಲಿ ದಂತ ವೈದ್ಯಕೀಯ ಓದುವ ವಿದ್ಯಾರ್ಥಿನಿ. ಅಲ್ಲಿ ಅನಾಸ್ ಎಂಬುವವನ ಪರಿಚಯವಾಗುತ್ತದೆ. ಪ್ರೀತಿ ಮೂಡಿ ಮದುವೆಯೂ ಆಗುತ್ತದೆ. ಆಕೆ ಮರಿಯಾಂ ಎಂಬ ಹೆಸರಿನವಳಾಗಿ ಇಸ್ಲಾಮಿಗೆ ಮತಾಂತರ ಆಗುತ್ತಾಳೆ. ಈ ಅನಾಸ್ ಅಬ್ದುಲ್ ರೆಹಮಾನ್, ಬಿಎಂ ಬಾಷಾನ ಮಗ. ಈ ಬಿಎಂ ಬಾಷಾ ಉಳ್ಳಾಲದ ಎಂಎಲ್ಎ ಆಗಿದ್ದ ದಿವಂಗತ ಬಿ.ಎಂ.ಇದಿನಬ್ಬನ ಮಗ.
2021ರಲ್ಲಿ ರಾಷ್ಟ್ರೀಯ ತನಿಖಾ ದಳ ಬಿಎಂ ಬಾಷಾನ ಮನೆ ಮೇಲೆ ದಾಳಿ ಮಾಡುತ್ತದೆ. ಅವನ ಸೊಸೆಗೆ ಐಎಸೈ ನಂಟಿರುವ ಶಂಕೆ ಕಾರಣ.ಆ ಯುವತಿ ಐಎಸ್ಐಗೆ ಜನರನ್ನು ನೇಮಿಸಿಕೊಳ್ಳುವ ಕೆಲಸ ಮಾಡುತ್ತಿದ್ದಳೆಂಬ ಆರೋಪ ಇತ್ತು. ಹಿಂದು ಹುಡುಗಿಯೊಬ್ಬಳು ಮತಾಂತರವಾಗಿ ಐಎಸ್ಐಗೆ ಜನರನ್ನು ಸೇರಿಸುವುದು ಎಂತ ವಿಪರ್ಯಾಸ ನೋಡಿ. ಐ ಎಸ್ ಐ ಇಸ್ಲಾಮಿಕ್ ರಾಷ್ಟ್ರದ ಕನಸು ಹೊತ್ತ ಜಾಗತಿಕ ಆತಂಕವಾದಿ ಭಯೋತ್ಪಾದಕ ಸಂಘಟನೆ.
ಈ ಸಂದರ್ಭದಲ್ಲಿ ನೆನಪಿಗೆ ಬರುವ ಚಿತ್ರ ದಿ ಕೇರಳ ಸ್ಟೋರಿ. ಕಾಲೇಜಿಗೆ ಸೇರಿದ. ಮೂವರು ಹಿಂದು ಹುಡುಗಿ ಹೇಗೆ ಮತಾಂತರವಾಗಿ, ಮಾನವ ಕಳ್ಳಸಾಗಣೆಯಾಗುತ್ತದೆ, ಏನೆಲ್ಲ ಆಗುತ್ತದೆ ಎಂಬ ಸಂಗತಿ ಇದೆ.
ಇಂಗ್ಲೆಂಡ್ ನಲ್ಲಿ ಸಹ ಪಾಕಿಸ್ತಾನಿ ಹುಡುಗರ ದಂಡು ಅನ್ಯ ಮತೀಯ, ಹಿಂದು ಹುಡುಗಿಯರನ್ನು ಗುರಿಯಾಗಿರಿಸಿಕೊಂಡು ಲೈಂಗಿಕವಾಗಿ ಬಳಸಿಕೊಳ್ಳುವ ಮತಾಂತರಿಸುವ ಬೆದರಿಸುವ ಯತ್ನ ಮಾಡಿದ್ದು ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಡಾ.ಎಲಾ ಹಿಲ್ಸ್ ಅವರ ಸಂದರ್ಶನ ಬೆಚ್ಚ ಬೀಳಿಸುವಂತಿದೆ. ಗ್ರೂಮಿಂಗ್ ಗ್ಯಾಂಗಿನಿಂದ ನಲವತ್ತು ವರ್ಷಗಳಲ್ಲಿ ಐವತ್ತು ಲಕ್ಷ ಜನ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರದಿಂದ ತೊಂದರೆಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಸಾಕ್ಷಿ ಇದ್ದರೂ ಸಹ ಅವರ ಕೂಗು , ಮನವಿ ಅರಣ್ಯ ರೋದನವಾಗಿದೆ. ಇದು ಮಹಿಳಾವಾದಿ, ಸ್ತ್ರೀಪರ ಹೋರಾಟಗಾರರ ಕಣ್ಣಿಗೆ ಬೀಳುವುದಿಲ್ಲ.
ಇಂಗ್ಲೆಂಡಿನಲ್ಲಿ ಇದೇ ಮೊದಲ ಬಾರಿಗೆ 2023ರಲ್ಲಿ ಗ್ರೂಮಿಂಗ್ ಗ್ಯಾಂಗ್ ಮೇಲೆ ಕಣ್ಣಿಡಲಾಗಿದೆ. ಪಾಕಿಸ್ತಾನಿ ಮುಸ್ಲಿಮರು ಈ ಕೃತ್ಯ ನಡೆಸುವುದು ಎಲ್ಲರಿಗೂ ಗೊತ್ತೇ ಇದೆ. ಆ ದೇಶಗಳಲ್ಲಿ ಪಾಕಿಸ್ತಾನಿಗಳ ಮೇಲುಗೈ ಇರುವುದು ಕಂಡುಬರುತ್ತದೆ. 2009ರಲ್ಲಿ ಕೇರಳ ಪೋಲೀಸರು ನಡೆಸಿದ ವಿಚಾರಣೆ ಒಂದರಲ್ಲಿ ಪಾಕಿಸ್ತಾನಿ ಸಂಘಟನೆಗಳು ಕಾಲೇಜು ಹುಡುಗಿಯರನ್ನು ಬುಟ್ಟಿಗೆ ಹಾಕಿಕೊಳ್ಳಲು , ಆಕರ್ಷಿಸಲು ಯೋಜನೆ, ಬೆಂಬಲ ಹಣಕಾಸು ನೆರವು ನಿಡುವುನ್ನು ಪತ್ತೆಹಚ್ಚಲಾಗಿದೆ.
2021ರಲ್ಲಿ ರಿಪ್ರೀವ್ ಎಂಬ ಎನ್ಜಿಒ ಬ್ರಿಟಿಷ್ ಹೆಣ್ಣುಮಕ್ಕಳು ಮಹಿಳಾ ಸಾಗಣೆ ಮತ್ತು ದೌರ್ಜನ್ಯಕ್ಕೊಳಗಾಗಿದ್ದನ್ನು ಬಹಿರಂಗಪಡಿಸಿತ್ತು. ಸಿರಿಯಾದ ಪುರುಷ ಸಹವರ್ತಿಗಳಿಂದ ದೌರ್ಜನ್ಯಕ್ಕೆ ಸಿಲುಕಿ ಆ ಜಾಲದಿಂದ ಹೊರಬರಲೂ ಆಗದೆ ನ್ಯಾಯವೂ ಸಿಗದೆ ಪರಿತಪಿಸಿದ ನಿದರ್ಶನವಿದೆ.
ಇದು ಬಲವಂತದ, ಒತ್ತಡದ, ಆತಂಕವಾದದ, ಲೈಂಗಿಕ ದೌರ್ಜನ್ಯದ ಸಂಕೀರ್ಣ ಜಾಲವಾಗಿದೆ.
ಸ್ಟಾಕ್ ಹೋಮ್ ಸಿಂಡ್ರೋಮ್ ಸಂಗತಿ ಎನ್ನುವುದಿದೆ. ಇದರಲ್ಲಿ ಸಂತ್ರಸ್ತರು ಮಾನಸಿಕವಾಗಿ, ಭಾವನಾತ್ಮಕವಾಗಿ ನಿಯಂತ್ರಿಸುವವರ ವಶಕ್ಕೆ ಒಳಗಾಗುತ್ತಾರೆ. ನಮ್ಮಲ್ಲಿ ವಶೀಕರಣಕ್ಕೊಳಗಾಗಿದ್ದಾರೆ ಎನ್ನುತ್ತಾರಲ್ಲ ಹಾಗೆ. ಗ್ರೂಮಿಂಗ್ ಕೂಡ ಹಾಗೆ ವಶಪಡಿಸಿಕೊಳ್ಳುವ ಹುನ್ನಾರ.
ಡಾ. ಜೂಲಿಚ್ ಹೇಳುವಂತೆ ಸ್ಟಾಕ್ಹೋಮ್ ಸಿಂಡ್ರೋಮ್ ಒಂದು ಉಪಯುಕ್ತ ವಾದವಾಗಿದ್ದು
ಖೈದಿಗಳ ಶಿಬಿರ, ಗುಂಪುಗಳ ಸದಸ್ಯರು , ಯುದ್ಧದಲ್ಲುಳಿದವರು ಇವರೆಲ್ಲರನ್ನು ಬಳಸಿಕೊಳ್ಳುಕುತ್ತಾರೆ. ಇದರಲ್ಲಿ ಕಂಡುಕೊಂಡ ಸಾಮಾನ್ಯ ಅಂಶವಿಲ್ಲಿದೆ.
1. ಒಡ್ಡಿದ ಬೆದರಿಕೆ ನೇರವೇರಿಸುವ ಆತಂಕ
2. ಬಂಧಿಸಿವರಿಂದ ಕರುಣೆಯ ನಿರೀಕ್ಷೆ
3. ದೃಷ್ಟಿಕೋನ ಬೇರ್ಪಡಿಸುವಿಕೆ
4. ತಪ್ಪಿಸಿಕೊಳ್ಳಲು ಸಾಮರ್ಥ್ಯ ಇಲ್ಲವೆಂಬ ನಂಬಿಕೆ
ಬ್ರಾಡ್ಫೋರ್ಡಿನ ಯುವತಿಯೋರ್ವಳನ್ನು ಯೆಮೆನ್ ಯುವಕ ಮದುವೆಯಾಗಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ.
ಕರುಣೆಯ ದೃಷ್ಟಿಕೋನ
ತನಿಷ್ಕ್ ಜಾಹಿರಾತು ಕೂಡಾ ಇದೇ ತರಹ ಮೇಲ್ನೋಟಕ್ಜೆ ಎಷ್ಟು ಒಳ್ಳೆಯವರೆಂದು ಬಿಂಬಿಸಿದರೂ ಹಿಂದಿನ ಮರ್ಮ ಬೇರೆಯದಾಗಿದೆ. ಇದೊಂದು ಅನ್ಯರ ರೀತಿ ರಿವಾಜನ್ನು ಅಳಿಸುವ ಸುಂದರ ಹಿಂಸಾಚಾರ ಎಂದು ಸಾಮಾನ್ಯರ ಕಣ್ಣಿಗೆ ಅನಿಸುವುದಿಲ್ಲ.
ಸೈಕೋಪಾತ್’ ಗಳು ಯಾವುದೇ ಭಾವನೆ ಇಟ್ಟುಕೊಂಡಿರುವುದಿಲ್ಲ. ಮಾನವೀಯತೆ ಎಂಬುದಿಲ್ಲ. ಮನುಷ್ಯ ಎಂಬುದು ಅವರ ಪಾಲಿಗೆ ಆಸೆ ತೀರಿಸಿಕೊಳ್ಳುವ ಒಂದು ವಸ್ತು ಅಷ್ಟೇ ಅದು ಧರ್ಮದ ಸಾಧನವಷ್ಟೇ. ಯಾವಾಗ ನಿಮ್ಮ ಸಂಬಂಧದ ಬುನಾದಿ ಅಥವಾ ಪ್ರೀತಿ ಸುಳ್ಳು, ಮೋಸ, ಅತ್ಯಾಚಾರ ಮೇಲೆ ನಿಂತಿರುತ್ತದೋ ಅದು ಕ್ಷೇಮಕರವಾಗಲು ಸಾಧ್ಯವೇ?
ದನದ ಮಾಂಸ ತಿನ್ನಲು ಒತ್ತಡ ಹೇರುವುದು ಇಸ್ಲಾಮೀಕರಣದ ಒಂದು ಭಾಗ. ಹಿಂದಿನ ಧರ್ಮದ ಕುರುಹನ್ನು ಆಚರಣೆಯನ್ನು ಅಳಿಸಿ ಮತಾಂತರಿಸುವ ಕೆಲಸದ ಭಾಗ. ತಜ್ಞರು ಸಾಮಾನ್ಯವಾದ ಗುರುತು ಮತ್ತು ನಿರ್ದಿಷ್ಟ ತಂತ್ರಗಳನ್ನು ಗುರುತಿಸಿದ್ದಾರೆ: ರೊಮ್ಯಾಂಟಿಕ್ ರಿಲೇಶನ್ಶಿಪ್, ನೋಡಲು ಸುಂದರವಾಗಿ ಕಾಣಿಸಿಕೊಳ್ಳುವುದು, ಪ್ರೀತಿ ವ್ಯಕ್ತಪಡಿಸುವುದು, ಹೊಗಳುವುದು, ಇದು ಲವ್ ಬಾಂಬಿಂಗ್, ಗ್ರೂಮಿಂಗ್ ಜಿಹಾದ್ನ ಒಂದು ತಂತ್ರವೇ ಆಗಿದೆ.
ಸಾಧ್ಯವಾದಷ್ಟೂ ಹೆಚ್ಚು ಸಮಯ ಕಳೆಯುವುದು,ನಿರಂತರವಾಗಿ ಸಂಪರ್ಕದಲ್ಲಿ ಇರುವಿಕೆ,ಬಾಡಿ ಲ್ಯಾಂಗ್ವೇಜ್ ಮತ್ತು ಮಾತಿನ ಅನುಕರಣೆ ಹೀಗೆ ಮುಂದುವರಿಸಿ ಪ್ರಭಾವ ಬೀರುವುದು. ಹೀಗೆಲ್ಲ ಮಾಡಲಾಗುತ್ತದೆ.
ಎರಡನೇಯದಾಗಿ: ಡಿವ್ಯಾಲ್ಯುಯೇಷನ್
ಬಲಿಪಶು ಸಿಕ್ಕ ನಂತರ ನಿಯಂತ್ರಣ ಸಾಧಿಸಲು ಮುಂದಾಗುವುದು, ಇಲ್ಲಿ ನಿಜರೂಪ ಬಯಲಾಗುತ್ತದೆ. ಹಿಂಸೆ, ಅವಮಾನ , ಅಣಕಿಸುವುದು ಸುಳ್ಳು ಹೇಳುವುದು, ಬೇಕೆಂದೆ ನೋವು ನೀಡುವುದು, ಕೈಗೆ ಸಿಗದೆ ನಾಪತ್ತೆ ಆಗುವುದು ಇತ್ಯಾದಿ. ಕೋವರ್ಟ್ ಅಪೀಲ್ಸ್- ಡಬಲ್ ಮೀನಿಂಗ್, ಮೈಂಡ್ಗೇಮ್ಗಳು, ಮೆಟಾ ಕಮ್ಯುನಿಕೇಷನ್ಸ್, ಇತ್ಯಾದಿ ಈ ಹಂತದಲ್ಲಿ ಆಗುವುದು.
ಮೂರನೇಯದು : ಡಿಸ್ಕಾರ್ಡಿಂಗ್
ಅಸ್ತಿತ್ವವನ್ನೇ ಇಲ್ಲವಾಗಿಸುವ ತಂತ್ರ ಅನುಸರಿಸುತ್ತಾರೆ. ಬಿಟ್ಟು ಹೋಗುವುದು ಕೋಲ್ಡ್ ಮೆಸೇಜ್, ಇಲ್ಲಿ ಯಾವುದೇ ಮುಚ್ಚುಮರೆ ಇರುವುದಿಲ್ಲ ಏಕೆಂದರೆ ಆ ವೇಳೆಗೆ ಎಲ್ಲಾ ಮುಗಿದಿರುತ್ತದೆ.
ಸರಳವಾಗಿ ಹೇಳಬೇಕೆಂದರೆ ಮೊದಲು ಬೇಕಾದಂತೆ ನಟಿಸಿ ನಂತರ ಹಾಳು ಮಾಡಿ ನಂತರ ಉಂಡ ಎಲೆ ಬಿಸಾಡಿದಂತೆ ಬಿಟ್ಟು ಹೋಗುವುದು ಇದು ಸೈಕೋಪಾತ್ಗಳ ಕೆಲಸದ ಮಾದರಿ.
ಈ ರೀತಿಯ ಸೈಕೋಪಾತ್ಗಳು ಸಾಲು ಸಾಲಾಗಿ ಹುಟ್ಟಿಕೊಂಡರೆ ಏನಾಗಬಹುದು ಊಹಿಸಲೂ ಅಸಾಧ್ಯ.
2017ರಲ್ಲಿ ಇಂಡಿಯಾ ಟುಡೇ ನಡೆಸಿದ ಸಂದರ್ಶನವೊಂದು ಪ್ರಸಾರವಾಯಿತು. ಅದರಲ್ಲಿ ಕೇರಳದ ಪಿಎಫ್ಐ ಮುಖ್ಯಸ್ಥರು ಹೇಳುವುದನ್ನು ಕೇಳಿದರೆ ನೀವು ಬೆರಗಾಗುತ್ತೀರಿ. ಮತಾಂತರ ಮಾಡುವ ಬಗೆಯನ್ನು ವಿವರಿಸುತ್ತಾರೆ. ಮತಾಂತರ ಮಾಡುವ ಸಂಘಟನೆಯನ್ನು ಮತಾಂತರ ಕೇಂದ್ರ ಎನ್ನದೇ ಶಿಕ್ಷಣ ಸಂಸ್ಥೆ ಎಂದು ಕರೆದು ಬಿಡುವುದು. ಒಂದು ಹದಿನೈದು ಸದಸ್ಯರುಗಳ ಸೇರಿಸಿಕೊಂಡು ಟ್ರಸ್ಟ್ ಎಂದು ನೋಂದಾಯಿಸಿಬಿಡುವುದು. ನಂತರ ಅದೇ ಹೆಸರಿನಲ್ಲಿ ಮತಾಂತರದ ದಂಧೆ ಶುರು. ಕೌನ್ಸೆಲಿಂಗ್ ಸಹಾಯದ ಹೆಸರು ಇಸ್ಲಾಮಿಕ್ ಸ್ಟೇಟ್ ಇವರ ಅಜೆಂಡಾ. ಬರೀ ಭಾರತವನ್ನಲ್ಲ ಇಡೀ ಜಗತ್ತನ್ನು ಇಸ್ಲಾಮೀಕರಣಗೊಳಿಸುವುದು ಇವರ ಗುರಿ. ಮೊದಲು ಭಾರತ ನಂತರ ಇತರ ದೇಶ ಎನ್ನುತ್ತಾರೆ.ಈ ಕೆಲಸ ನಿರ್ವಾತದಲ್ಲಿ ಆಗುವುದಿಲ್ಲ. ಅಪಾರವಾದ ಹಣದ ನೆರವು ಬೇಕು. ಪಿಎಫ್ಐಗೆ ಕಾನೂನು ಬಾಹಿರ ಹವಾಲಾ ದಂಧೆಯಿಂದ ಹಣ ಬರುತ್ತದೆ. ಈ ಕೆಲಸ ಬಹಳ ಹುಶಾರಾಗಿ ಪೋಲೀಸರ ತನಿಖೆಗೂ ಸಿಗದಂತೆ ಸಾಕ್ಷಿ ಕೂಡ ಸಿಗದ ಹಾಗೆ ನಿರ್ವಹಿಸುತ್ತಾರೆ.
ಈ ಕೆಲಸವನ್ನು ಫ್ಯಾಕ್ಟರಿಗಳಂತೆ ನಡೆಸುತ್ತಾರೆ. ಕೇರಳದಲ್ಲಿ ಇದು ದಟ್ಟವಾಗಿ ಕಂಡುಬರುತ್ತದೆ. ಕೇರಳವನ್ನು ಉತ್ತರ ಭಾಗ ಮಲಬಾರ್, ದಕ್ಷಿಣ ಭಾಗ ಕೊಚಿನ್ ಟ್ರಾವಂಕೂರು ಎಂದು ವಿಂಗಡಿಸಿ ನೋಡಬಹುದು. ಉತ್ತರದಲ್ಲಿ ಮುಸ್ಲಿಮರ ಪ್ರಾಬಲ್ಯ ಇದ್ದರೆ ದಕ್ಷಿಣದಲ್ಲಿ ಕ್ರಿಶ್ಚಿಯನ್ನರು. 2010ರಲ್ಲಿ ಕೇರಳದ ಡೆಮಾಗ್ರಫಿ ಬಗ್ಗೆ ಆಗಿನ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ವಿವರಿಸಿದ್ದಾರೆ. ಮುಸ್ಲಿಂ ಮೂಲಭೂತವಾದಿಗಳು ಮತಾಂತರ ಪ್ರಯತ್ನ ನಡೆಸಿದ್ದನ್ನು ಬಿಚ್ಚಿಡುತ್ತಾರೆ. ಅದಕ್ಕಾಗಿ ಹಣದ ಹೊಳೆ ಹರಿಸುತ್ತಾರೆ, ಯುವಕರನ್ನು ಸೆಳೆಯುತ್ತಾರೆ. ಆಯುಧ ಪೂರೈಸುತ್ತಾರೆ. ಮತ್ತು ಹಿಂದು ಯುವತಿಯರನ್ನು ಮದುವೆಯಾಗಲು ಪುಸಲಾಯಿಸುತ್ತಾರೆ. ಇದರ ಬಗ್ಗೆ ಸಾಕ್ಷಿಗಳಿವೆ. ಜನರೂ ದನಿ ಎತ್ತಿದ್ದಾರೆ.
ಈ ಸಂಗತಿಯನ್ನು ಪ್ರಕರಣ ಒಂದರಲ್ಲಿ ಕೇರಳದ ನ್ಯಾಯಮೂರ್ತಿ ಸಂಕರನ್ ಉಲ್ಲೇಖಿಸಿದ್ದಾರೆ. ಇದನ್ನು ಇತರ ವ್ಯಕ್ತಿಗಳು ಪದೇ ಪದೇ ಉಚ್ಚರಿಸಿದ್ದಾರೆ. ಕೇರಳದ ಬಿಷಪ್ ಕೂಡ ಲವ್ ಜಿಹಾದ್, ನಾರ್ಕೊಟಿಕ್ ಜಿಹಾದ್ ಮೂಲಕ ಮುಸ್ಲಿಮೇತರರನ್ನು ಕೊನೆಗಾಣಿಸುವ ಪ್ರಯತ್ನ ನಡೆದಿದೆ ಎನ್ನುತ್ತಾರೆ. ಎರ್ನಾಕುಲಂನ ಯುವತಿಯೊಬ್ಬಳು ಹೀಗೆ ಜಿಹಾದಿನ ಬಲೆಗೆ ಬಿದ್ದು ಹಿಂಸೆಗೆ ಗುರಿಯಾದಳು. ಸಿರಿಯಾ ಸೇರಿದಳು. ಅಲ್ಲಿ ಅವಳನ್ನು ಐಸಿಸ್ ಕೃತ್ಯಕ್ಕೆ ಬಳಸಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಫಯಸ್ ಮತ್ತು ಸಯಾಜ್ ರನ್ನು ಪೋಲಿಸರು ಬಂಧಿಸುತ್ತಾರೆ. ಈ ಪ್ರಕರಣ ಎನ್ಐಎಗೆ ವಹಿಸಲಾಗುತ್ತದೆ.
ಇಂಗ್ಲೆಂಡ್ ನಂತೆ ಇಲ್ಲೂ ಸಹ ಇದೊಂದು ನಾಗರಿಕ ಯುದ್ಧವಾಗಿದೆ. ಮಹಿಳಾ ಸಾಗಣೆ ದೊಡ್ಡಪ್ರಮಾಣದಲ್ಲಿ ಆಗುತ್ತಿದೆ. ಬೇರೆ ಬೇರೆ ರೀತಿಯಲ್ಲಿ ಮಹಿಳೆಯರ ಮೇಲೆ ಅಪರಾಧ ಎಸಗಲಾಗುತ್ತದೆ. ಇದು ಅಲ್ಲಿ ಇಲ್ಲಿ ಆದ ಒಂದೊಂದು ಪ್ರಕರಣಗಳಲ್ಲ. ಸಾವಿರಗಟ್ಟಲೆ ಇದೆ . ಇದೆಲ್ಲದರ ಗುರಿ ಒಂದೇ ಇಸ್ಲಾಮೀಕರಣ. ಕಾನೂನಿನ ಲೋಪ, ರಾಜಕೀಯದ ಲಾಭ, ಮತಬ್ಯಾಂಕಿನ ಪ್ರಯೋಜನ, ಭಯೋತ್ಪಾದನೆ, ಜಾಗತಿಕ ಕೂಟ ಸಂರಚನೆ ಇವೆಲ್ಲದರ ಮೂಲಕ ಸೈಕೋಪಾತ್ಗಳು ಲವ್ ಜಿಹಾದ್ ಅಥವ ಗ್ರೂಮಿಂಗ್ ಜಿಹಾದನ್ನು ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ.