• Slide
    Slide
    Slide
    previous arrow
    next arrow
  • ಮಕ್ಕಳು ಹಣದ ಹಿಂದೆ ಹೋಗದೇ ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳಲಿ- ಹಬ್ಬು

    300x250 AD

    ಶಿರಸಿ: ವಾರ್ಷಿಕವಾಗಿ ಕನ್ನಡದಲ್ಲಿ 6500ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗುತ್ತಿದೆ. ಮೋಹನ್ ಹಬ್ಬು ಅವರ ಮುಸ್ಸಂಜೆಯ ಆಲಾಪ ಕೃತಿ ನೆನಪಿನ ಹಂದರದ ಪುಸ್ತಕವಾಗಿದೆ. ವರ್ತಮಾನಕ್ಕೆ ಈ ಕೃತಿ ಮಹತ್ವದ್ದಾಗಿ ಕಾಣಿಸದಿದ್ದರೂ ಬರುವ ದಿನಗಳಲ್ಲಿ ಮಹತ್ವ ಪಡೆಯಲಿದೆ. ಹಬ್ಬು ಕುಟುಂಬದ 5 ಜನ ಲೇಖಕರು ಆತ್ಮಕಥನ ಬರೆದಿರುವುದೊಂದು ವಿಶೇಷವಾಗಿದೆ ಎಂದು ಕೆವಿಜಿ ಬ್ಯಾಂಕಿನ ನಿವೃತ್ತ ಎಜಿಎಂ ನಾರಾಯಣ ಯಾಜಿ ಹೇಳಿದರು.

    ಅವರು ಇಲ್ಲಿನ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಅಂಕೋಲಾದ ಮೋಹನ್ ಹಬ್ಬು ಅವರ ಆತ್ಮ ಕಥನ, ಮುಸ್ಸಂಜೆಯ ಆಲಾಪ ಕೃತಿ ಪರಾಮರ್ಶೆ ಕಾರ್ಯಕ್ರಮ ನಗರದ ಆರಾಧನಾ ಸಭಾಂಗಣದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಹಿತಿ, ವಿಶ್ರಾಂತ ಪ್ರಾಚಾರ್ಯ ಆರ್.ಜಿ. ಹೆಗಡೆ ಮಾತನಾಡಿ, ಮೋಹನ್ ಹಬ್ಬು ತಮ್ಮ ಆತ್ಮ ಚರಿತ್ರೆಯಲ್ಲಿ ತಮ್ಮನ್ನು ಸಮರ್ಥನೆ ಮಾಡಿಕೊಂಡು ಬರೆದಿಲ್ಲ. ನಿರ್ಭಾವ ನಡೆ ಇವರ ಕೃತಿಯಲ್ಲಿದೆ. ಕನ್ನಡದ ಶ್ರೇಷ್ಠ ಆತ್ಮಕಥೆ ಈ ಕೃತಿ ಎನ್ನಬಹುದು. ತಮ್ಮ 80ನೇ ವಯಸ್ಸಿನಲ್ಲೂ ಮೋಹನ್ ಹಬ್ಬು ಬೌದ್ಧಿಕ ಶ್ರಮ ಹಾಕಿದ್ದಾರೆ ಎಂದರು.

    ಇನ್ನೋರ್ವ ಅತಿಥಿ, ಪತ್ರಕರ್ತ ಅಶೋಕ ಹಾಸ್ಯಗಾರ ಮಾತನಾಡಿ, ಚರಿತ್ರೆ ಇತಿಹಾಸ ಹೇಳುತ್ತದೆ. ಆತ್ಮಕಥನದಲ್ಲಿ ಆಯಾ ಕಾಲಘಟ್ಟದ ಸತ್ಯಗಳನ್ನು ಹೇಳಲು ಪ್ರಯತ್ನಿಸುತ್ತದೆ. ಆತ್ಮಕಥೆ ಕೃತಿಗೂ ಪರಿಷತ್ತು ಗೌರವ ನೀಡಬೇಕೆಂದರು.
    ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕೃತಿಕಾರ ಮೋಹನ್ ಹಬ್ಬು ಮಾತನಾಡಿ, ಪಲ್ಲಟ ಸ್ಥಿತಿಯಲ್ಲಿ ಸಮಾಜವಿದೆ. ಮಕ್ಕಳು ಕೇವಲ ಹಣದ ಹಿಂದೆ ಹೋಗದಂತೆ ನೋಡಿಕೊಂಡು ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳುವಂತಾಗಬೇಕು ಎಂದರು.

    300x250 AD

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿರಸಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಸುಬ್ರಾಯ ಭಟ್ ಮಾತನಾಡಿ, ಹಬ್ಬು ಕುಟುಂಬದಲ್ಲಿ 5 ಆತ್ಮಕಥನಗಳು ಬಂದಿವೆ. ಪಿಎಚ್‌ಡಿ ಅಧ್ಯಯನ ಮಾಡುವವರು ಹಬ್ಬು ಕುಟುಂಬದ ಜೀವಯಾನವನ್ನೇ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಒಂದು ಒಳ್ಳೆಯ ಕೃತಿ ಕನ್ನಡ ಸಾಹಿತ್ಯಕ್ಕೆ ಸಿಕ್ಕಿದೆ. ವಿಮರ್ಶೆ ರಾಜ್ಯಮಟ್ಟದಲ್ಲಾಗಲಿ ಎಂದರು.
    ಈ ಸಂದರ್ಭದಲ್ಲಿ ಶಿರಸಿ ಕಸಾಪದಿಂದ ಮೋಹನ್ ಹಬ್ಬು ಅವರನ್ನು ಗೌರವಿಸಲಾಯಿತು. ಮೋಹನ್ ಹಬ್ಬು ರಚಿತ ಕವನವನ್ನು ಜಿ.ವಿ. ಕೊಪ್ಪಲತೋಟ ಹಾಡಿದರು. ಸಾಹಿತ್ಯ ಪರಿಷತ್ ಕಮಿಟಿ ಸದಸ್ಯ ಕೃಷ್ಣ ಪದಕಿ ಸ್ವಾಗತಿಸಿದರು. ಸಾವಿತ್ರಿ ಶಾಸ್ತ್ರಿ ವಂದಿಸಿದರು. ಲೇಖಕ ಜಯಪ್ರಕಾಶ ಹಬ್ಬು ಕಾರ್ಯಕ್ರಮ ನಿರ್ವಹಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top