Slide
Slide
Slide
previous arrow
next arrow

ನಂಬಿ ನಾರಾಯಣನ್ ಜೈಲು ಪಾಲಾಗಿದ್ದರಿಂದ ಹಿಂದಕ್ಕುಳಿಯಿತು ಭಾರತದ ರಾಕೆಟ್‌ ಕ್ಷೇತ್ರ: ಮಾಧವನ್

300x250 AD

ಮಾಧವನ್ ಮಾತು…
ಆರ್. ಮಾಧವನ್ ಚಿತ್ರೋದ್ಯಮದ ಪರಿಚಿತ ಹೆಸರು. ಬಾಲಿವುಡ್ ಬ್ಲಾಕ್ ಬಸ್ಟರ್ ಚಿತ್ರವಾದ ರಾಕೆಟ್ರಿಯಲ್ಲಿ ಅಂತರಿಕ್ಷ ವಿಜ್ಞಾನಿ ನಂಬಿ ನಾರಾಯಣನ್ ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡವರು. ಇದರ ಬಗ್ಗೆ ಮಾಧವನ್ ಮಾತುಗಳು ಇಲ್ಲಿದೆ.

ಚಿತ್ರ ರಂಗದಲ್ಲಿ ಕೇವಲ 6-7% ಚಿತ್ರ ಮಾತ್ರ ಹಿಟ್ ಎನಿಸಿಕೊಳ್ಳುತ್ತವೆ. ಹಿಟ್ ಚಿತ್ರ ಕೊಡುವ ಉದ್ದೇಶದಿಂದ ಚಿತ್ರ ಮಾಡುವುದಿಲ್ಲ. ರಾಕೆಟ್ರಿ ಚಿತ್ರ ಕುರಿತು ಬಂದಾಗ, ಚಿತ್ರ ನಟನೆಗಾಗಿ ನಂಬಿ ನಾರಾಯಣನ್ ಅವರನ್ನು ಭೇಟಿಯಾದಾಗ ಅದ್ಭುತ ಎನಿಸಿತು. ಅಂತಹ ದೇಶ ಭಕ್ತರನ್ನು ತಪ್ಪಾಗಿ ಬಿಂಬಿಸಿ ಶಿಕ್ಷೆಗೊಳಗಾಗಿಸಿದ್ದು ಈ ಪಾತ್ರ ಮಾಡಲು ಪ್ರೇರಣೆ. ಅವರ ಜೀವನದ ಬೇರೆ ಬೇರೆ ಆಯಾಮ ಸಂಗತಿಗಳು ಅರಿವಿಗೆ ಬಂತು. ಜನರಿಗದು ಗೊತ್ತಿಲ್ಲ. ಅವರ ಮೇಲೆ ಆಪಾದನೆ ಹೊರಿಸಿ ಜೈಲಿಗಟ್ಟಿದರು. ಅದರಿಂದಾಗಿ ಭಾರತದ ರಾಕೆಟ್‌ ಕ್ಷೇತ್ರ ಇಪ್ಪತ್ತು ವರ್ಷ ಹಿಂದಕ್ಕೆ ಉಳಿಯುವಂತಾಯಿತು. ಅವರ ಸಾಧನೆ ಗೊತ್ತಾಯಿತು. ಅವರು ತಯಾರಿಸಿದ ವಿಕಾಸ್ ಇಂಜಿನ್ ಯಾವತ್ತಿಗೂ ವಿಫಲಾಗಿಲ್ಲ. ಇದು ಇಸ್ರೊಕ್ಕೆ, ದೇಶಕ್ಕೆ ಒಂದು ಕೊಡುಗೆ.

ಇನ್ನೊಂದು ವಿಷಯವೆಂದರೆ, ಅಮೇರಿಕಾದವರು ಹಾಲಿವುಡ್ ಅನ್ನು ವೈಭವೀಕರಿಸುತ್ತಾರೆ. ಅವರದೇ ಶ್ರೇಷ್ಠ ಎಂದುಕೊಳ್ಳುತ್ತಾರೆ‌. ಅನ್ಯಗ್ರಹ ಜೀವಿಗಳಿದ್ದರೆ ಅಮೇರಿಕದವರೇ ರಕ್ಷಕರೆಂದು ತೋರಿಸುತ್ತಾರೆ. ಯಾವುದೇ ತೊಂದರೆಗೂ ಅಮೇರಿಕಾ ಸೈನ್ಯ ಪರಿಹಾರ. ಅಮೇರಿಕಾದ ನೇವಿಯ ಲೊಗೊವೇ ಅತ್ಯುತ್ತಮ ಎಂದು ಜಗತ್ತಿಗೆ ಹಾಲಿವುಡ್ ಚಿತ್ರದ ಮೂಲಕ ನಂಬಿಸಲಾಗುತ್ತದೆ. ಇದರಿಂದ ಅಮೇರಿಕ ತಾನೋರ್ವ ಸೂಪರ್ ಪವರ್ ಎಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತದೆ. ಇದೊಂದು ಮಾರ್ಕೆಟಿಂಗ್ ತಂತ್ರ.

ಆದರೆ ಭಾರತೀಯರೇನು ಕಡಿಮೆ ಇಲ್ಲ. ಮಿತವಾದ ಸಂಪನ್ಮೂಲಗಳಿದ್ದರೂ ಸಹ ಭಾರತ ಉತ್ತಮವಾಗಿದೆ. ಉತ್ತಮ ದಾರಿಯಲ್ಲೇ ಸಾಗುತ್ತಿದೆ. ಉತ್ಕೃಷ್ಟ ವಿಜ್ಞಾನಿಗಳು ಇದ್ದಾರೆ. ಜಾಗತಿವಾಗಿ ಭಾರತೀಯರ ಸ್ಥಾನಮಾನ ನೋಡಿದಾಗ ಇದು ಅರಿವಾಗುತ್ತದೆ. ಕಂಪನಿಗಳಲ್ಲೂ ಕೂಡ ಭಾರತೀಯರು ಮುಂಚೂಣಿಯಲ್ಲಿ ಇದ್ದಾರೆ. ಇದನ್ನು ಭಾರತೀಯ ಚಿತ್ರರಂಗ ಅರ್ಥ ಮಾಡಿಕೊಳ್ಳಬೇಕು.

ನಂಬಿ ನಾರಾಯಣ ಯಾರೆಂದು ಜನಕ್ಕೆ ಗೊತ್ತಿರಲಿಲ್ಲ. ಭಾರತೀಯ ಚಿತ್ರರಂಗದಲ್ಲಿ ಸಹ ಅಂತ ಚಿತ್ರ ಮೂಡಿಬಂದಿಲ್ಲ. ಇದು ಮೊದಲ ಹೆಜ್ಜೆ. ಕೇರಳಿಗರನ್ನು ಬಿಟ್ಟು ಮತ್ತೆ ಯಾರಿಗೂ ಅವರ ಪರಿಚಯ ಇರಲಿಲ್ಲ. ಈ ಚಿತ್ರ ಆರಂಭಿಸಿದಾಗ ಕೋರ್ಟಿನಲ್ಲಿ ಅವರ ಪ್ರಕರಣ ಗೆಲುವು ಪಡೆಯಿತು. ಪದ್ಮವಿಭೂಷಣ ಸಹ ಬಂತು. ಚಿತ್ರ ಬಿಡುಗಡೆ ನಂತರ ನಂಬಿ ನಾರಾಯಣನ್ ಅವರಿಗೆ ಎಲ್ಲ ಕಡೆ ಮೆಚ್ಚುಗೆ ಸ್ವಾಗತ ದೊರೆಯಿತು. ಅಂತರಿಕ್ಷ ಕ್ಷೇತ್ರದ ಸಂಶೋಧನೆ ರಾಕೆಟ್, ಮಿಸೈಲಿಗಷ್ಟೇ ಅಷ್ಟಕ್ಕೇ ಸಿಮೀತವಲ್ಲ. ಅಂತರಿಕ್ಷಯಾನಕ್ಕೆ ತಯಾರಿಸಿದ ಎಲ್ಲವೂ ನಂತರದ ದಿನಗಳಲ್ಲಿ ಜನರಿಗೆ ಉಪಯುಕ್ತ. ರಸ್ತೆ ಸುರಕ್ಷತೆ, ಮೈಕ್ರೋ ಸರ್ಜರಿ, ಗಡಿ ಭದ್ರತೆ, ರಿಮೊಟ್ ಸೆನ್ಸಿಂಗ್…ಹೀಗೆ ಇಸ್ರೋದ ಪರಿಕ್ರಮಗಳು ಜನೋಪಕಾರಿಯಾಗಿವೆ.

ವರ್ಸಟೈಲ್ ಆಕ್ಟರ್ ಆಗಿ ಮಾಧವನ್ ಪಾತ್ರ ನಿರ್ವಹಿಸಿದ್ದಾರೆ, ಈಗ ನಂಬಿಯಂತಹ ವಿಜ್ಞಾನಿ ಪಾತ್ರ ನಿರ್ವಹಿಸಿದ್ದಾರೆ. ಆರ್ಮಿಯ ಪಾತ್ರ ಸಿಕ್ಕರೆ ಮಾಡುತ್ತೀರಾ? ಎಂದು ಕೇಳಿದ ಪ್ರಶ್ನೆಗೆ ಮಾಧವನ್ ಉತ್ತರಿಸುತ್ತಾ, ನಟರಾದವರಿಗೆ ನಾನಾ ತರದ ಚಿತ್ರ ಪಾತ್ರಗಳು ಬರುತ್ತವೆ. ಯಾವ ಪಾತ್ರ ಕಥೆ ಮನಸ್ಸಿಗೆ ಬರುತ್ತದೋ ಅದಕ್ಕೆ ಹೂಂ ಎನ್ನಬೇಕಾಗುತ್ತದೆ. ಭಾರತೀಯ ಸೇನೆಯನ್ನು ಸಂಪೂರ್ಣವಾಗಿ ಚಿತ್ರಿಸಿಲ್ಲ. ಅವರ ಧೈರ್ಯ ಶೌರ್ಯ ಚಿತ್ರಿಸುವಂತಹ ಅಂತಹ ಕಥೆ ಬೇಕು. ಈಗಿನ ಸಮಯದಲ್ಲಿ ಭಾರತಕ್ಕೆ ಸಮರ್ಥ ವಿದೇಶಾಂಗ ಸಚಿವ ಸಹ ದೊರಕಿದ್ದು ಭಾರತ ಶತ್ರು ರಾಷ್ಟ್ರಗಳ ಎದುರಿಗೆ ಸಮರ್ಥವಾಗಿ ಎದುರು ನಿಲ್ಲಬಲ್ಲದು‌. ಚಿತ್ರಂಗವೂ ಈ ಪೂರಕ ಅಂಶಗಳಿಗೆ ಬೆಂಬಲವಾಗಬೇಕು. ವೈವಿಧ್ಯಮಯವಾಗಿರುವ ಭಾರತ, ಭಾರತವೆಂದರೇನು? ಇತಿಹಾಸ ಕಲೆಯೆಂದರೇನೆಂದು ಜಗಕ್ಕೆ ಹೇಳುವ ಅವಶ್ಯಕತೆ ಇದೆ. ಜಗತ್ತು ಭಾರತದ ಬಗ್ಗೆ ತಿಳಿದದ್ದನ್ನು ಬದಲಿಸಿ ಸರಿಯಾದ ವಿಷಯ ತಿಳಿಸಬೇಕು.

ಹಿಂದೆ ಕೇರಳದಲ್ಲಿನ ರಾಜಕೀಯ ಪಕ್ಷಗಳಿಗೆ ನಂಬಿಯವರ ಕೊಡುಗೆ ಬಗ್ಗೆ ಗೊತ್ತಿರಲಿಲ್ಲ.ಅವರನ್ನು ಅನುಚಿತವಾಗಿ ನಡೆಸಿಕೊಂಡರು. ಇವರಂತೇ ಬಹಳ ವಿಜ್ಞಾನಿಗಳು ಸಹ ಕಷ್ಟ ಅನುಭವಿಸಿದ್ದಾರೆ. ಈ ಚಿತ್ರದನಂತಹ ಪರಿಸ್ಥಿತಿ ಕೊಂಚ ಬದಲಾಗಿದೆ. ಜನರೂ ಗಮನ ಹರಿಸುತ್ತಿದ್ದಾರೆ. ಇಂತಹ ವಿಜ್ಞಾನಿಗಳು ವಿದೇಶಕ್ಕೆ ಹೋದರೆ ಕೋಟ್ಯಂತರ ಹಣ ಗಳಿಸಬಹುದು. ಇಸ್ರೋ ಮತ್ತು ರಾಕೆಟ್‌ ವಿಜ್ಞಾನ ಕಡಿಮೆ ವೆಚ್ಚದಲ್ಲಿ ಸಾಧಿಸಿರುವುದು ಜಗತ್ತಿಗೇ ಮಾದರಿ. ಇದು ಮನುಕುಲಕ್ಕೆ ಕೊಡುಗೆ ‌ ಸ್ಪೇಸ್ ಟ್ರಾವೆಲ್ ಇನ್ನು ಅನಿವಾರ್ಯವಾಗಲಿದೆ ಆಗ ಇದೆಲ್ಲದರ ಮಹತ್ವ ಅರಿವಿಗೆ ಬರುತ್ತದೆ.

ಮಾಧವನ್ ಮುಂಬೈಲ್ಲಿ ಶಿಕ್ಷಕರಾಗಿದ್ದರು‌. ಟಿವಿಯಲ್ಲಿ ಮೊದಲಿಗೆ ಧಾರಾವಾಹಿಯೊಂದರಲ್ಲಿ ನಟಿಸಲು ಅವಕಾಶ ಸಿಕ್ಕಿತು. ವಿವೇಕ್ ಬೆಹ್ಹಲ್ ಎನ್ನುವರು ಬಣ್ಣ ಹಚ್ಚಿಸಿದರು. ಮೊದಲ ಪಾತ್ರ ಆಪಾದಿತನದ್ದಾಗಿತ್ಥು. ಆಗ ಹದಿನೇಳು ವರ್ಷ. ಮೊದಲ ಚಿತ್ರ ಮಣಿರತ್ನಂ ನಿರ್ದೇಶನದ ಅಲೈ ಪಾಯುದೇ. ಹಿಂದಿಯಲ್ಲಿ ಸಾಥಿಯಾ . ಖ್ಯಾತನಾಮರ, ಹಿರಿಯ ನಟರ ಜೊತೆ ಸಹ ನಟಿಸುವ ಅವಕಾಶ ದೊರೆಯಿತು. ರಂಗದಲ್ಲಿ 23ವರ್ಷದ ಬಳಿಕ ಈಗಲೂ ಮಾಧವನ್ ಚಾಲ್ತಿಯಲ್ಲಿದ್ದಾರೆ.

ದಕ್ಷಿಣ ಭಾರತದ ಹುಡುಗ ಗೆದ್ದದ್ದು ಹೇಗೆ?
ಅನಂತ್ ಮಹಾದೇವನ್, ಸತಿಶ್ ರಾಜ್ ಅವರಂತಹ ಚಿತ್ರರಂಗದ ಮಹಾರಥಿಗಳೊಂದಿಗೆ, ಅಂತಹ ತಂಡಗಳೊಂದಿಗೆ ಕೆಲಸ ನಿರ್ವಹಿಸಿದ್ದು ಆ ಮಟ್ಟದಲ್ಲಿ ಬೆಳೆಸಿದೆ. ಸುಲಭವಾಗಿ ನಗಿಸುವುದು, ಓವರ್ ಆಕ್ಟಿಂಗ್ ಮಾಡದೆ ಸಹಜವಾಗಿ ನಟನೆ,ನೈಜವಾಗಿರುವುದು ಇವೆಲ್ಲದರ ಅಭ್ಯಾಸವಿತ್ತು. ಅವರೊಂದಿಗಿನ ಒಡನಾಟ ಬಹಳ ಅನುಕೂಲವಾಯಿತು.

300x250 AD

ಮಣಿರತ್ನಂ ಪಾತ್ರಗಳಲ್ಲಿ ಆಳವಾಗಿ ಇಳಿದ ಬಗೆ…
ನಟಿಸುವಾಗ ಅಂತರ್ ದೃಷ್ಟಿ ಇರಬೇಕು. ನಾನು ಮಾಡುವುದು ಸರಿಯಾಗಿದೆಯಾ ಎಂಬ ಅಳುಕು ಇರುತ್ತದೆ. ಸಹಜವಾದ ಮಾತುಗಳನ್ನು ನಮ್ಮ ಮಾತುಗಳಾಗಿ ಹೇಳಬೇಕಾಗುತ್ತದೆ. ಅದರಲ್ಲೂ ಮಣಿರತ್ನಂ ಚಿತ್ರಗಳ ಪಾತ್ರ ಮಾಡಲು ಗುಂಡಿಗೆ ಇರಬೇಕು. ಮಣಿರತ್ನಂ ಜಾಗತಿಕ ಮಟ್ಟದ ನಿರ್ದೇಶಕರು. ಅವರಿಗೆ ಸಾಟಿಯಿಲ್ಲ. ಅವರ ಆಲೋಚನೆ ಅದ್ಭುತ. ನಾನು ನಟನಾ ಶಾಲೆಗೆ ಹೋಗಿಲ್ಲ, ಲೆನ್ಸ್ ಗಳ ಬಗ್ಗೆಯೂ ಗೊತ್ತಿಲ್ಲ. ಸಹಜವಾಗಿ ನಟನೆ ಮಾಡಿದೆ. ಎಡಿಟಿಂಗ್ ಗೊತ್ತಿಲ್ಲ. ಆದರೂ ಈ ಮಟ್ಟಕ್ಕೆ ನಿರ್ವಹಿಸುತ್ತ ಬಂದಿದ್ದೇನೆ. ಜನರು ಸ್ವೀಕರಿಸಿದರು.

ಸಮಾಜದಲ್ಲಿ ಪ್ರತಿ ಒಂದು ಪರಿಪೂರ್ಣವಾಗಿ ಇರಬೇಕೆಂಬುದು ಪಾಶ್ಚಾತ್ಯ ವಾದ. ಆದರೆ ಹಾಗಾಗುವುದಿಲ್ಲ. ಪುರುಷ ಹೆಚ್ಚು ಮಹಿಳೆ ಹೆಚ್ಚು ಎಂಬುದಕ್ಕಿಂತ ಪುರುಷರೂ ಸಹ ಅಷ್ಟೇ ಸಂವೇದನಾಶೀಲರೆಂಬುದನ್ನು ತಿಳಿಯಬೇಕು. ಒಂದು ಬೇಕಾದರೆ ಇನ್ನೊಂದು ತ್ಯಾಗ ಮಾಡಬೇಕು. ಹೊಂದಾಣಿಕೆ, ಪರಸ್ಪರ ತಿಳುವಳಿಕೆ ಇರುವುದು ಜೀವನದಲ್ಲಿ ಮುಖ್ಯ.

ಕೌಟುಂಬಿಕ ಮೌಲ್ಯಗಳ ಕುರಿತ ಬದ್ಧತೆ…
ನನಗೆ ಚಿತ್ರರಂಗವೆಂದರೆ ಪ್ರೀತಿ ಎಂಬುದು ಜಗಜ್ಜಾಹೀರು.ಸವಾಲಿರುವ ಈ ರಂಗಕ್ಕೆ ನನ್ನ ಮಗ ಬರುವುದಾದರೆ ನಾನು ತಡೆಯುವುದಿಲ್ಲ. ಅದು ಅವನ ಕನಸಾದರೆ ಮಗನಿಗೆ ಸಹಾಯ ಕೂಡಾ ಮಾಡುತ್ತೇನೆ. ಅವನಿಗೆ ಈಜು ಕನಸು. ಬಹಳಷ್ಟು ಬುದ್ಧಿವಂತ ಪಾಲಕರು ಮಗುವನ್ನು ನಿಯಂತ್ರಿಸಿ, ಸದಾ ಬ್ಯುಸಿಯಾಗಿರಿಸಿ ಎಂದು ಸಲಹೆ ಇತ್ತರು. ಸಾಕಾಗಿ ಮಲಗುವಷ್ಟು ಅವರು ವ್ಯಸ್ತರಾಗಿದ್ದರೆ ತಂತಾನೆ ಮಲಗಿ ನಿದ್ರಿಸುತ್ತಾರೆ, ಪಾಲಕರು ಹೇಳುವ ಪ್ರಮೇಯವೇ ಇರುವುದಿಲ್ಲ.
ಆದರೆ ನನ್ನ ಮಗುವಿಗೆ ಹಾಗಾಗಲು ಬಿಡುವುದು ಇಷ್ಟವಿರಲಿಲ್ಲ. ಆತ ಬೆಳೆದದ್ದು ಮುಂಬೈನಲ್ಲಿ ಈಜುವಿಕೆ ಪಠ್ಯದ ಭಾಗವೇ ಆಗಿತ್ತು. ಕೋವಿಡ್ ಸಂದರ್ಭದಲ್ಲಿ ತರಬೇತಿ ಕಷ್ಟವಾಯಿತು. ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಪ್ರದೀಪ್ ಸರ್ ಅವರ ಕೋಚಿಂಗ್ ನೆರವು ಕನಸಿಗೆ ಆಧಾರವಾಗಿದೆ, ಸಾಕಾರಗೊಳಿಸಲು ನೆರವಾಗಿದೆ.

ಖಾನ್ದಾನ್ ಗಳ ಕೈಲಿ ಬಾಲಿವುಡ್ ಇದ್ದಾಗ ದಕ್ಷಿಣದ ನಟರುಗಳನ್ನು ಗುರುತಿಸುತ್ತಿರಲಿಲ್ಲ, ಆದರೆ ಸದ್ಯ ಪ್ರಧಾನಿಗಳು ನಿಮ್ಮನ್ನು ಕರೆಯುತ್ತಾರೆ…ನೀವು ಜನರಲ್ಲಿ ಗುರುತಿಸಿಕೊಳ್ಳಲು ಭಿನ್ನವಾಗಿ ಏನು ಮಾಡಿದಿರಿ? ದಿಗ್ಗಜ ನಟರೊಂದಿಗೆ ಹೋಲಿಕೆ ಸಲ್ಲದು, ಅಂದಹಾಗೆ ನಾನು ಬಿಹಾರದಲ್ಲಿ ಬೆಳೆದದ್ದು ಸುಲಲಿತವಾಗಿ ಹಿಂದಿ ಮಾತನಾಡುವುದು, ಜನರನ್ನು ತಲುಪಲು ಸಹಕಾರಿ ಆಗಿರಬಹುದು. ಮತ್ತು ಕಥೆಯ ಆಯ್ಕೆ ಸಹ ಜನಪ್ರಿಯತೆಗೆ ಕಾರಣವಾಗಿರಲಿಕ್ಕೂ ಸಾಕು.

ಕಂಗನಾರಂತಹ ಧೈರ್ಯಶಾಲಿಗಳ ಕುರಿತು..
ನನ್ನ ತಾಯಿ ಗಟ್ಟಿಗಿತ್ತಿ ಹೆಣ್ಣುಮಗಳು ಬಿಹಾರದ ಬ್ಯಾಂಕಿನಲ್ಲಿ ಮೂವತ್ತು ವರ್ಷ ಕೆಲಸ ಮಾಡಿದವರು. ಕಂಗನಾರಂತವರೂ ಕೂಡ ಹಾಗೆ ಧೈರ್ಯವುಳ್ಳವರು. ಅವರಿಗೆ ಗೌರವ ಮತ್ತು ಸೂಕ್ತ ಮರ್ಯಾದೆ ಸಲ್ಲಬೇಕು. ಅವರು ಧೈರ್ಯಶಾಲಿಯಾದ ಸವಾಲಿನ ಪಾತ್ರಗಳಲ್ಲಿ ನಟಿಸಿದ್ದಾರೆ.

ಪ್ರಧಾನಿ ಮೋದಿ ಕುರಿತು..
ಹಿಂದೆಲ್ಲಾ ವಿದೇಶಗಳಿಗೆ ಹೋದಾಗ ಅಲ್ಲಿ ನಮ್ಮ ಪ್ರಧಾನಿಗಳಿಗೆ ಕೊಡುವ ಮರ್ಯಾದಿ ಕಂಡು ಮನಸ್ಸು ಬೇಸರವಾಗುತ್ತಿತ್ತು. ಆದರೆ ನರೇಂದ್ರ ಮೋದಿಯವರು ಪ್ರಧಾನಿ ಆದ ಬಳಿಕ ಹೊರದೇಶಗಳಲ್ಲಿ ಕಾಣುವ ದೃಷ್ಟಿ ಬದಲಾಗಿದೆ, ಹಾಗೂ ಅವರು ತೆಗೆದುಕೊಳ್ಳುವ ನಿಲುವು ಕೂಡ ದೃಢವಾಗಿದೆ ಇವೆಲ್ಲ ಓರ್ವ ಭಾರತೀಯನಾಗಿ ನನಗೆ ಖುಷಿ ತರುವ ಸಂಗತಿ.

ಕೃಪೆ: https://www.youtube.com/@TheNewIndian

Share This
300x250 AD
300x250 AD
300x250 AD
Back to top