Slide
Slide
Slide
previous arrow
next arrow

ವಿಶೇಷ ಶಾಲೆಗೆ ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ

300x250 AD

ಕಾರವಾರ: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಸರ್ಕಾರದ ಅನುದಾನದಡಿ ಹಿರಿಯ ನಾಗರಿಕರಿಗಾಗಿ ವೃದ್ಧಾಶ್ರಮ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆಗೆ ಉಚಿತವಾಗಿ ಪ್ರವೇಶ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಶ್ರೀರಾಘವೇಂದ್ರ ವೃದ್ಧಾಶ್ರಮ ಮತ್ತು ಶ್ರೀರಾಘವೇಂದ್ರ ಬುದ್ಧಿಮಾಂದ್ಯ ಮಕ್ಕಳ ವಸತಿಯುತ ವಿಶೇಷ ಶಾಲೆ ಯಲ್ಲಾಪುರದಲ್ಲಿ ಉಚಿತ ಊಟ ವಸತಿ ನಾಗರಿಕ ಸೇವಾ ಸೌಲಭ್ಯವನ್ನು ಒದಗಿಸಲಾಗುವುದು. ವಸತಿಯುತ ವಿಶೇಷ ಶಾಲೆಯಲ್ಲಿ 6 ರಿಂದ 25 ವರ್ಷದೊಳಗಿನ ಎಲ್ಲಾ ಬುದ್ದಿಮಾಂದ್ಯ ಮಕ್ಕಳ ವೈದ್ಯಕೀಯ (ಯುಡಿಐಡಿ) ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ ಪ್ರತಿಯೊಂದಿಗೆ ಹಾಗೂ ಛಾಯಾಚಿತ್ರದೊಂದಿಗೆ ಮತ್ತು 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಬಿ.ಪಿ.ಎಲ್ ಪಡೀತರ ಚೀಟಿ ಹಾಗೂ ಆಧಾರ ಕಾರ್ಡ ಪ್ರತಿಯೊಂದಿಗೆ ಪ್ರವೇಶ ಬಯಸುವವರು ಶ್ರೀ ಮಲ್ಲಿಕಾರ್ಜುನ, ಜನಸೇವಾ ಸೊಸೈಟಿ ಬೆಳಗಾವಿ ಕೇರ್ ಆಫ್ ಆಶೀರ್ವಾದ ಬಿಲ್ಡಿಂಗ್ ನಾಯಕನಕೆರೆ ಬಾಳಗಿನ ಮನೆ ಕಾರವಾರ ಮತ್ತು ಹುಬ್ಬಳ್ಳಿ ರಸ್ತೆ ಯಲ್ಲಾಪುರ ಸಂಸ್ಥೆಯಲ್ಲಿ ಅರ್ಜಿಯನ್ನು ಪಡೆದು ಭರ್ತಿ ಮಾಡಿ ಕಚೇರಿಗೆ ಸಲ್ಲಿಸಲು ಸೂಚಿಸಿದೆ.
ಹೆಚ್ಚಿನ ಮಾಹಿತಿಗಾಗಿ ಮಲ್ಲಿಕಾರ್ಜುನ ಎಸ್.ಖೋತ (ಮೊಬೈಲ್ ಸಂಖ್ಯೆ: 97404 14787, 94481 60642, 96202 81175, 74114 76984, 91649 41175) ಅವರನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top