Slide
Slide
Slide
previous arrow
next arrow

ಮಹಿಳೆ ನೇಣಿಗೆ ಶರಣು

300x250 AD

ದಾಂಡೇಲಿ: ನಗರದ ಹಳೆದಾಂಡೇಲಿಯ ಮದ್ರಾಸಿ ಚಾಳದಲ್ಲಿ ಮಹಿಳೆಯೊರ್ವರು ನೇಣಿಗೆ ಶರಣಾದ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.
ಅಂದಾಜು 65 ವರ್ಷ ವಯಸ್ಸಿನ ಕಮಲವ್ವಾ ಪರಪ್ಪ ಜೆರ್ಕಲ್ ಎಂಬವರೆ ನೇಣಿಗೆ ಶರಣಾದ ಮಹಿಳೆಯಾಗಿದ್ದಾರೆ. ಇವರ ಮೃತ ಮಗನ ಪತ್ನಿ ಊರಿಗೆ ಹೋಗಿದ್ದು, ಇನ್ನೋರ್ವ ಪುತ್ರ ಕೆಲಸಕ್ಕೆಂದು ತೆರಳಿದ್ದರು. ಮನೆಯಲ್ಲಿ ಯಾರು ಇಲ್ಲದಿದ್ದ ಸಮಯದಲ್ಲಿ ಇವರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇವರು ಅನಾರೋಗ್ಯದಿಂದ ತೀವ್ರ ನೊಂದಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ದಾಂಡೇಲಿ ನಗರ ಪೊಲೀಸ್ ಠಾಣೆಯ ಎಎಸೈ ನಾರಾಯಣ ರಾಥೋಡ ಹಾಗೂ ಪೊಲೀಸರು ಭೇಟಿ ನೀಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಸ್ಥಳಕ್ಕೆ ಸ್ಥಳೀಯ ನಗರ ಸಭಾ ಸದಸ್ಯೆ ಶಿಲ್ಪಾ ಕೋಡೆ, ಬಿಜೆಪಿ ಮುಖಂಡ ಸಂದೀಪ್ ನಾಯ್ಕ, ಸಾಮಾಜಿಕ ಕರ‍್ಯಕರ್ತ ಎಲಿಯಾ ಅವರು ಭೇಟಿ ನೀಡಿದ್ದರು.

300x250 AD
Share This
300x250 AD
300x250 AD
300x250 AD
Back to top