• Slide
    Slide
    Slide
    previous arrow
    next arrow
  • ಅಂಬೇಡ್ಕರರ 132ನೇ ಜಯಂತಿ ಆಚರಣೆ

    300x250 AD

    ಕಾರವಾರ: ಡಾ.ಬಿ.ಆರ್.ಅಂಬೇಡ್ಕರರವರ 132ನೇ ಜಯಂತಿ ಕಾರ್ಯಕ್ರಮವನ್ನು ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಲಿಷಾ ಜಿ.ಯಲಕಪಾಟಿ ನೇತೃತ್ವದಲ್ಲಿ ಸೋಮವಾರ ವಿಜೃಂಭಣೆಯಿಂದ ಆಚರಿಸಲಾಯಿತು.
    ತಾಲೂಕಿನ ಶಿರವಾಡ ಬಂಗಾರಪ್ಪ ನಗರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಡಿ.ಜೆ ಹಾಡುಗಳೊಂದಿಗೆ ಪಾದಯಾತ್ರೆ ಮೆರವಣಿಗೆ ಪ್ರಾರಂಭಗೊಂಡಿತ್ತು. ದಾರಿಯುದ್ದಕ್ಕೂ ವೇದಿಕೆಯ ಕಾರ್ಯಕರ್ತರು ಕುಣಿಯುತ್ತಾ ಬಂದಿದ್ದು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು.
    ನಂತರ ಅಂಬೇಡ್ಕರ್ ವೃತ್ತ ಬಳಿ ಮೆರಣಿಗೆ ಸೇರಿದ್ದು, ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರು ಹಾಗೂ ಇತರ ಕಾರ್ಯಕರ್ತರು ಮಾತನಾಡಿದರು. ಅಲ್ಲದೇ ಸ್ಥಳದಲ್ಲಿ ಸೇರಿದ್ದ ಬಹುಸಂಖ್ಯೆ ಜನರಿಗೆ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು.
    ಈ ಸಂದರ್ಭದಲ್ಲಿ ಗ್ರಾಮೀಣ ಘಟಕಾಧ್ಯಕ್ಷ ಶಂಕರ ಸಿ.ವಡ್ಡರ, ತಾಲೂಕಾ ಪ್ರಧಾನ ಕಾರ್ಯದರ್ಶಿ ಜಾಫರ್ ಎ.ಕರ್ಜಗಿ, ಮಾರುತಿ ನಾಯ್ಕ, ಮೆಹಬೂಬ ಇನಾಮ್‌ದಾರ, ಗೋಪಾಲ ಬೋಯರ್, ಕೆಂಪಣ್ಣ ಮಣ್ಣವಡ್ಡರ, ಮಹಮ್ಮದ್ ಇನಾಮ್‌ದಾರ, ಬಸವರಾಜ ವಡ್ಡರ ಹಾಗೂ ಮುಂತಾದವರು ಹಾಜರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top