Slide
Slide
Slide
previous arrow
next arrow

ಸಚಿವರಾದ ಮಂಕಾಳ ವೈದ್ಯ; ಶಿರಸಿ ಕಾಂಗ್ರೆಸ್ಸಿಗರ ಸಂಭ್ರಮ

300x250 AD

ಶಿರಸಿ: ಭಟ್ಕಳ ಶಾಸಕ ಮಂಕಾಳ ವೈದ್ಯ  ಮಂತ್ರಿ ಮಂಡಳದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಳೆ ಬಸ್ ನಿಲ್ದಾಣದ ಬಳಿ ಪಟಾಕಿ ಸಿಡಿಸಿ ಸಿಹಿ ಹಂಚುವುದರ ಮೂಲಕ ಸಂಭ್ರಮ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೊಗೇರ್ ಸಮಾಜದ ಮುಖಂಡ ರಾಜು ಉಗ್ರಾಣಕರ್, ಮಂಕಾಳ ವೈದ್ಯರಿಗೆ  ಸಚಿವ ಸ್ಥಾನ ಲಭಿಸಿದ್ದು ಜಿಲ್ಲೆಯ ಅಭಿವೃದ್ದಿಗೆ ಮಾರ್ಗಸೂಚಿಯಾಗಲಿದೆ. ಸಚಿವ ವೈದ್ಯರು ನಿಸ್ವಾರ್ಥ ವ್ಯಕ್ತಿಯಾಗಿದ್ದು, ಅಭಿವೃದ್ದಿಯನ್ನೇ ಮಂತ್ರವನ್ನಾಗಿಸಿಕೊಂಡವರು. ಜನರ ಸೇವೆಗಾಗಿ ಸದಾ ಮಿಡಿಯುವ ವೈದ್ಯರಿಗೆ ಸಚಿವ ಸ್ಥಾನ ನೀಡಿದ್ದು ಸಮಸ್ತ ಉತ್ತರಕನ್ನಡ ಜಿಲ್ಲೆಯ ಜನರಿಗೆ ಅಭಿಮಾನ ಮೂಡುವಂತಾಗಿದೆ ಎಂದರು.

300x250 AD

ವಿಜಯೋತ್ಸವದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರದೀಪ ಶೆಟ್ಟಿ, ಶಕುಂತಲಾ ಜಯವಂತ, ಮೋಹಿನಿ ಬೈಲೂರ್, ಸುಮಾ ಉಗ್ರಾಣಕರ್, ಶ್ರೀಧರ ಮೊಗೇರ, ನಝಿರ್ ಮೂಡಿ, ರಘು ಕಾನಡೆ ಮುಂತಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top