Slide
Slide
Slide
previous arrow
next arrow

ರಾಜಕೀಯ ಗುರು ದೇಶಪಾಂಡೆ ಆಶೀರ್ವಾದ ಪಡೆದ ಮಂಕಾಳ ವೈದ್ಯ

300x250 AD

ದಾಂಡೇಲಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಸರಕಾರದಲ್ಲಿ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಂಕಾಳ ವೈದ್ಯ, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಆಶೀರ್ವಾದ ಪಡೆದರು.

ವೈದ್ಯ, ತಮ್ಮ ರಾಜಕೀಯ ಗುರು ಹಾಗೂ ಹಳಿಯಾಳ, ದಾಂಡೇಲಿ, ಜೊಯಿಡಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರ್.ವಿ. ದೇಶಪಾಂಡೆಯವರ ಬೆಂಗಳೂರಿನ ಆರ್.ಟಿ.ನಗರದಲ್ಲಿರುವ ನಿವಾಸಕ್ಕೆ ಶನಿವಾರ ಸಂಜೆ ತೆರಳಿ ಚರ್ಚೆ ನಡೆಸಿದರು.

ನೂತನ ಸಚಿವರಾದ ಮಂಕಾಳ್ ವೈದ್ಯರನ್ನು ಆರ್.ವಿ.ದೇಶಪಾಂಡೆ ಗೌರವಪೂರ್ವಕವಾಗಿ ಸನ್ಮಾನಿಸಿ, ಸದಾ ನಾನು ಬೆಂಬಲವಾಗಿ ಇದ್ದೇನೆ ಎಂದು ಭರವಸೆ ನೀಡಿ, ಜಿಲ್ಲೆಯ ಅಭಿವೃದ್ಧಿಗೆ ಹೊಸ ಆಯಾಮವನ್ನು ನೀಡುವಂತೆ ಶುಭ ಹಾರೈಸಿದರು.

300x250 AD

ಈ ಸಂದರ್ಭದಲ್ಲಿ ಮಂಕಾಳ್ ವೈದ್ಯರ ಪತ್ನಿ, ಪುತ್ರಿ, ಶಾಸಕ ಭೀಮಣ್ಣ ನಾಯ್ಕ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಾಯಿ ಗಾಂವಕರ್ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top