Slide
Slide
Slide
previous arrow
next arrow

ನೂತನ ಸಂಸತ್ ಭವನ ಪ್ರತಿ ಭಾರತೀಯನ ಹೆಮ್ಮೆ: ಪ್ರಧಾನಿ ಮೋದಿ

300x250 AD

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಭಾನುವಾರ ನೂತನ ಸಂಸತ್‌ ಭವನವನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಲಿದ್ದು, ಈ ಕ್ಷಣಕ್ಕಾಗಿ ಇಡೀ ದೇಶ ಎದುರು ನೋಡುತ್ತಿದೆ.

ಈ ಬಗ್ಗೆ ಟ್ವಿಟ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರು, ನೂತನ ಸಂಸತ್ ಭವನ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರಲಿದೆ ಎಂದು ಹೇಳಿದ್ದಾರೆ. ಅಲ್ಲದೇ ಭವ್ಯ ಕಟ್ಟಡದ ವಿಹಂಗಮ ನೋಟದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಟ್ವೀಟ್‌ನಲ್ಲಿ, ಶ್ರೀ ಮೋದಿ ಅವರು ಸಾಂಪ್ರದಾಯಿಕ ಕಟ್ಟಡದ ಒಂದು ನೋಟವನ್ನು ನೀಡುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಜನರು ತಮ್ಮ ಈ ವೀಡಿಯೊವನ್ನು ತಮ್ಮದೇ ವಾಯ್ಸ್‌ ಓವರ್‌ ಮೂಲಕ ಹಂಚಿಕೊಳ್ಳಬೇಕು ಎಂದು ವಿನಂತಿಸಿದರು. #MyParliamentMyPride ಎಂಬ ಹ್ಯಾಶ್‌ಟ್ಯಾಗ್ ಬಳಸಲು ಜನರನ್ನು ಕೇಳಿಕೊಂಡಿದ್ದಾರೆ.

300x250 AD

ಹೊಸ ಸಂಸತ್‌ ಭವನ ಹಲವಾರು ವಿಶೇಷತೆಗಳನ್ನು ಹೊಂದಿದೆ .ಇದು ತ್ರಿಕೋನಾಕಾರದಲ್ಲಿ ಇದೆ. ಹಳೆಯ ಸಂಸತ್ ಭವನದ ಪಕ್ಕದಲ್ಲೇ ಹೊಸ ಸಂಸತ್‌ ಭವನವನ್ನ ನಿರ್ಮಾಣ ಮಾಡಲಾಗಿದೆ. ಈ ಹೊಸ ಕಟ್ಟಡ ಬರೋಬ್ಬರಿ 150 ವರ್ಷ ಬಾಳಿಕೆ ಬರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಭೂಕಂಪ ಆದರೂ ಯಾವುದೇ ರೀತಿ ಹಾನಿ ಆಗದ ರೀತಿಯಲ್ಲಿ ಈ ಕಟ್ಟಡವನ್ನು ವಿನ್ಯಾಸ ಮಾಡಲಾಗಿದೆ. ಹಳೆಯ ಕಟ್ಟಡದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕಡಿಮೆ ಸ್ಥಳಾವಕಾಶ ಇತ್ತು. ಆದರೆ, ಹೊಸ ಕಟ್ಟಡದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ ವಿಶಾಲವಾಗಿವೆ. ಲೋಕಸಭೆಯಲ್ಲಿ 888 ಜನ ಕೂರುವಂತೆ ವಿನ್ಯಾಸ ಮಾಡಲಾಗಿದೆ. ರಾಜ್ಯಸಭೆಯಲ್ಲಿ 384 ಜನ ಕೂರಬಹುದಾಗಿದೆ. ಭವಿಷ್ಯದಲ್ಲಿ ಸಂಸದರ ಸಂಖ್ಯೆ ಹೆಚ್ಚಾದರೂ ಕೂಡಾ ಇಲ್ಲಿ ಸ್ಥಳಾವಕಾಶದ ಕೊರತೆ ಇರುವುದಿಲ್ಲ. ಜೊತೆಗೆ ಈ ಕಟ್ಟಡದಲ್ಲಿ ಸೆಂಟ್ರಲ್ ಹಾಲ್ ಇಲ್ಲ. ಜಂಟಿ ಅಧಿವೇಶನಕ್ಕಾಗಿ ಲೋಕಸಭೆಯಲ್ಲೇ 1,272 ಮಂದಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಬಹುದು. ಒಟ್ಟು 4 ಅಂತಸ್ತಿನ ಈ ಕಟ್ಟಡದಲ್ಲಿ ಸಚಿವರು, ಹಲವು ಕಮಿಟಿಗಳಿಗೂ ಕೋಣೆಗಳನ್ನು ನಿರ್ಮಿಸಲಾಗಿದೆ. ಈ ಕಟ್ಟಡದ ಒಳಗೆ ವಿಶಾಲ ಜಾಗ ಇದ್ದು ಇಲ್ಲಿ ಆಲದಮರ ನೆಡುವ ಉದ್ದೇಶ ಇದೆ ಎನ್ನಲಾಗಿದೆ.

Share This
300x250 AD
300x250 AD
300x250 AD
Back to top