• Slide
  Slide
  Slide
  previous arrow
  next arrow
 • ಸ್ವರ್ಣವಲ್ಲೀ ಶ್ರೀಗಳ ವರ್ಧಂತಿ: ರಕ್ತದಾನ, ಉಚಿತ ವೈದ್ಯಕೀಯ ಶಿಬಿರ

  300x250 AD

  ಶಿರಸಿ: ಸ್ವರ್ಣವಲ್ಲೀ ಶ್ರೀಗಳ ವರ್ಧಂತಿ ಉತ್ಸವದ ನಿಮಿತ್ತ ಮೇ. 29, ಸೋಮವಾರ ವಿವಿಧ ಧಾರ್ಮಿಕ ಕಾರ‍್ಯಕ್ರಮಗಳನ್ನು ಮತ್ತು ಆರೋಗ್ಯ ಶಿಬಿರವನ್ನು ಸೋಂದಾ ಸ್ವರ್ಣವಲ್ಲೀ ಮಠದ ಸುಧರ್ಮ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

  2007 ನೇ ಇಸವಿಯಿಂದ ತಮ್ಮ ವರ್ಧಂತಿಯ ದಿನದಂದು ರಕ್ತದಾನ ಮಾಡಿ ಸಮಾಜಕ್ಕೆ ರಕ್ತದಾನದ ಮಹತ್ವದ ಆದರ್ಶವನ್ನು ತೋರುತ್ತಿರುವ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಆಶಯದಂತೆ ರಕ್ತದಾನ ಶಿಬಿರ ಮತ್ತು ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ಔಷಧ ವಿತರಣೆ ನಡೆಯಲಿದೆ.

  ಟಿ.ಎಸ್.ಎಸ್ ಆಸ್ಪತ್ರೆ, ಮತ್ತು ತಾಲೂಕಾ ಆರೋಗ್ಯ ಕೇಂದ್ರ ರಕ್ತನಿಧಿ ಕೇಂದ್ರ, ಗ್ರಾಮಾಭ್ಯುದಯ ಸ್ವರ್ಣವಲ್ಲೀ, ಸೋಂದಾ ಸೊಸೈಟಿ ಜಾಗೃತ ವೇದಿಕೆ ಸೋಂದಾ, ಕೃಷಿ ಪ್ರತಿಷ್ಠಾನ, ಪಿ.ಎಚ್.ಸಿ ಹುಲೇಕಲ್ ಹಾಗೂ ವಿವಿಧ ಸಂಘಟನೆಗಳ ಸಹಕಾರದಲ್ಲಿ ನಡೆಯಲಿದೆ. ಡಾ.ಪಿ.ಎಸ್. ಹೆಗಡೆ, ಡಾ.ಸುಮನ, ಡಾ. ಸ್ವಾತಿ ನಾಡಿಗೇರ್, ಡಾ. ಪ್ರಶಾಂತ ಎಸ್. ಪಾಟೀಲ (ಜನರಲ್ ಮೆಡಿಸಿನ್) ಡಾ. ಮಧುಕರ ಪಾಟೀಲ, ಡಾ. ಅಶಿಸ್ ವಿ. ಜನ್ನು (ನವಜಾತ ಶಿಶು ಮಕ್ಕಳ ತಜ್ಞರು) ಉಪಸ್ಥಿತರಿರಲಿದ್ದಾರೆ.

  300x250 AD

  ಬೆಳಿಗ್ಗೆ 10 ರಿಂದ ಮಧ್ಯಾಹ್ನ 1-30 ಘಂಟೆಯವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಸದುಪಯೋಗ ಪಡೆದುಕೊಳ್ಳುವಂತೆ ಗ್ರಾಮಾಭ್ಯುದಯದ ಅಧ್ಯಕ್ಷ ಎಂ.ಸಿ. ಹೆಗಡೆ ಶಿರಸಿಮಕ್ಕಿ ಹಾಗೂ ಕಾರ್ಯದರ್ಶಿ ಸಂತೋಷ ಭಟ್ ಕೋಡಿಗಾರ ಎಲ್ಲ ನಿರ್ದೇಶಕರು ವಿವಿಧ ಸಂಘಟನೆಗಳ ಪದಾಧಿಕಾರಿಗಳು ವಿನಂತಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top