Slide
Slide
Slide
previous arrow
next arrow

ಸ್ಕೊಡ್‌ವೆಸ್’ನಿಂದ ರೈತ ಉತ್ಪಾದಕ ಕಂಪನಿಗಳಿಗೆ ಮಾಹಿತಿ ಕಾರ್ಯಾಗಾರ

300x250 AD

ಶಿರಸಿ: ಸ್ಕೊಡ್‌ವೆಸ್ ಸಂಸ್ಥೆ ಶಿರಸಿ ಹಾಗೂ ಸೆಲ್ಕೊ ಸೊಲಾರ್ ಇವರ ಸಹಯೋಗದಲ್ಲಿ ಸಾಮ್ರಾಟ್ ಹೊಟೇಲ್ ವಿನಾಯಕ ಸಭಾಭವನದಲ್ಲಿ ರೈತ ಉತ್ಪಾದಕ ಕಂಪನಿಗಳಿಗೆ ಸೌರಶಕ್ತಿ ಬಳಕೆಯ ಜಾಗೃತಿ, ಬ್ಯಾಂಕ್ ಮೂಲಕ ಸರಕಾರದ ವಿವಿಧ ಯೋಜನೆಗಳ ಸಂಪರ್ಕ, ಹಣಕಾಸು ಸೌಲಭ್ಯ,ಗ್ರಾಹಕ ಸೇವಾ ಕೇಂದ್ರದ ಸ್ಥಾಪನೆ ಮತ್ತು ಮಾರುಕಟ್ಟೆ ಸಂಪರ್ಕದ ಕುರಿತು ಒಂದು ದಿನದ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಸ್ಕೊಡ್‌ವೆಸ್ ಸಂಸ್ಥೆಯ ಕಾರ್ಯದರ್ಶಿಗಳು, ಮುಖ್ಯ ಹಣಕಾಸು ಹಾಗೂ ಆಡಳಿತಾಧಿಕಾರಿ ಸರಸ್ವತಿ ಎನ್. ರವಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಫ್.ಪಿ.ಒ ಉದ್ದೇಶಗಳನ್ನು ವಿವರಿಸುತ್ತಾ ರೈತ ಉತ್ಪಾದಕ ಕಂಪನಿಗಳು ತಮ್ಮ ಕಾರ್ಯವೈಖರಿ ಮೂಲಕ ರಾಜ್ಯ ಮಟ್ಟದಲ್ಲದೆ ರಾಷ್ಟ್ರಮಟ್ಟದಲ್ಲಿಯೂ ಗುರುತಿಸುವಂತಾಗಲಿ ಇದಕ್ಕೆ ಬೇಕಾದ ಸಂಪೂರ್ಣ ಸಹಕಾರವನ್ನು ಸ್ಕೊಡ್‌ವೆಸ್ ಸಂಸ್ಥೆ ನೀಡಲು ಬದ್ಧ ಎಂದರು. ಕಂಪನಿಯ ಸಿ.ಇ.ಒ ಹಾಗೂ ಡೈರೆಕ್ಟರ್‌ಗಳು ತಮ್ಮ ತಮ್ಮ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸುವ ಮೂಲಕ ತಮ್ಮ ತಮ್ಮ ಕಂಪನಿಗಳ ವ್ಯವಹಾರ ಯೋಜನೆಯಂತೆ ಕಾರ್ಯರೂಪಿಸಿ ಕಂಪನಿಯ ಬೆಳವಣಿಗೆಗೆ ಸಹಕರಿಸಲು ಕೋರಿದರು.

ನಾಲ್ಕು ಹಂತಗಳಲ್ಲಿ ವಿಭಾಗಿಸಲಾದ ಕಾರ್ಯಕ್ರಮದಲ್ಲಿ ಮೊದಲನೆಯದಾಗಿ ಎಚ್.ಡಿ. ಎಫ್..ಸಿ. ಬ್ಯಾಂಕಿನ ಅಧಿಕಾರಿಗಳಾದ ಯೋಗೆಶ್ ಕಾಕನೂರು ಹಾಗೂ ರಮೇಶ ಶಿರಕೊಡ್ ಇವರು ಬ್ಯಾಂಕಿನಿಂದ ರೈತರಿಗೆ ಸಿಗುವಂತಹ ಸರ್ಕಾರದ ಯೋಜನೆಗಳಾದ AIF Fund, ASMF,Standup India, PMKSY ತಿಳಿಸಿದರು ಹಾಗೂ ಈ ಯೋಜನೆಗಳಿಗೆ ಸಲ್ಲಿಸುವಂತ ಅವಶ್ಯಕ ದಾಖಲೆಗಳ ಮಾಹಿತಿ ನೀಡಿ ಕಂಪನಿಯ ನಿರ್ದೇಶಕರು ಮತ್ತು ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳ ಜೊತೆ ಸಂವಾದ ನಡೆಸಿದರು.

300x250 AD

ಸೌರಶಕ್ತಿಯ ವಿವಿಧ ಹಂತಗಳ ಬಳಕೆ ಮತ್ತು ಮಹತ್ವವನ್ನು ಛಾಯಾಚಿತ್ರದ ಮೂಲಕ ಪ್ರದರ್ಶಿಸಿ ಮಾತನಾಡಿದ ಸೆಲ್ಕೊ ಫೌಂಡೆಶನ್ ನ ಸುಬ್ರಾಯ ಹೆಗಡೆ ಹಾಗೂ ವಿರೇಶ್ ತಡಹಾಳ ಇವರು ಸೊಲಾರ್ ಉಪಕರಣಗಳ ಬಗ್ಗೆ ಮಾಹಿತಿ ನೀಡಿ ಪ್ರಯೋಜನಗಳ ಕುರಿತು ವಿವರಿಸಿದರು. ಫಲಾನುಭವಿಗಳಾದ ಶ್ರೀಮತಿ ಗಂಗಾ ಹೆಗಡೆ ಸೊಲಾರ್ ಬಳಕೆಯಿಂದ ಆದ ಲಾಭ ಮತ್ತು ಸೆಲ್ಕೊ ಫೌಂಡೇಶನ್ ನಿಂದ ಆದ ಸಹಕಾರವನ್ನು ನೆನೆದು ತಾವು ತಯಾರಿಸಿದ ಶ್ರೀ ರಾಮ್ ಗೃಹ ಉತ್ಪನ್ನಗಳನ್ನು ಪ್ರದರ್ಶಿಸಿದರು.
ವಿಸ್ತಾರವಾಗಿ ಗ್ರಾಹಕ ಸೇವಾ ಕೇಂದ್ರದ ಸ್ಥಾಪನೆ ಕುರಿತು ಮಾಹಿತಿ ನೀಡಿದ ಉತ್ತರ ಕನ್ನಡ ಜಿಲ್ಲೆಯ ಸಿ.ಎಸ್.ಸಿ ಮ್ಯಾನೇಜರ್ ಆದ ಅಕ್ಷಯ ನಾಯ್ಕ್ ರೈತ ಉತ್ಪಾದಕ ಕಂಪನಿಗಳು ಯಾವ ರೀತಿ ಸೇವೆಗಳನ್ನು ಪ್ರಾರಂಭಿಸಬಹುದು ಎಂದು ಮಾದರಿಗಳ ಮೂಲಕ ವಿವರಿಸಿದರು.
ಮಳೆಗಾಲ ಪೂರ್ವ ವ್ಯವಹಾರ ಯೋಜನೆಯಂತೆ ರೈತ ಉತ್ಪಾದಕ ಕಂಪನಿಗಳು ತನ್ನ ಸದಸ್ಯರಿಗೆ ಅವಶ್ಯಕವಿರುವ ರಸಗೊಬ್ಬರ, ಕೀಟನಾಶಕ,ಕ್ರಿಮಿನಾಶಕ,ಸಾವಯವ ಗೊಬ್ಬರಗಳ ಬಳಕೆ ಮತ್ತು ಪ್ರಮಾಣದ ಬಗ್ಗೆ ಕೊರಮಂಡಲ ಕಂಪನಿಯ ಜ್ಯೊನಲ್ ಮ್ಯಾನೆಜರ್ ನಧಾಫ್ ಇವರಿಂದ ಮಾಹಿತಿ ಪಡೆದು ಡೀಲರ್ ಶಿಪ್ ನೀಡುವಂತೆ ಕೋರಿದರು. ಕೊರಮಂಡಲ ಕಂಪನಿಯ ಎಎಸ್‌ಎಮ್ ರಮೇಶ್ ಡಿಲರ್‌ಶಿಪ್‌ಗೆ ಅಗತ್ಯವಿರುವ ದಾಖಲೆಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಎಫ್‌ಪಿಒ ದ ಕಾರ್ಯಕ್ರಮ ಅಧಿಕಾರಿ ಪ್ರಶಾಂತ ನಾಯಕ ಸಂಸ್ಥೆಯು ರೈತ ಉತ್ಪಾದಕ ಕಂಪನಿಗಳಿಗೆ ಸಾಂಸ್ಥಿಕ ರೂಪ ಮತ್ತು ಬಲವರ್ಧನೆಗೆ ಸಹಕಾರ ನೀಡುವುದರ ಜೊತೆಗೆ ಕಾಲಕಾಲಕ್ಕೆ ಅಗತ್ಯ ಮಾರ್ಗದರ್ಶನ ನೀಡುವುದಾಗಿ ತಿಳಿಸಿದರು. ಕಂಪನಿಗಳು ಸರ್ಕಾರದ ಮಾರ್ಗಸೂಚಿಯಂತೆ ಸಾಧಿಸಬೇಕಾದ ಚಟುವಟಿಕೆಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ತಿಳಿಸಿದರು. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಬೆಂಬಲ ನೀಡುವುದಾಗಿ ತಿಳಿಸುತ್ತಾ ಕಾರ‍್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಕಾರ್ಯಕ್ರಮವನ್ನು ಸ್ಕೊಡ್‌ವೆಸ್ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಗಂಗಾಧರ ನಾಯ್ಕ ನಿರೂಪಿಸಿ ವಂದಿಸಿದರು. ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ನೀಲಕಂಠ ಶೇಷಗಿರಿ ಅವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು.

ಕಾರ್ಯಕ್ರಮದಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್,ಸೆಲ್ಕೊ ಪೌಂಡೇಶನ್,ಕೋರಮಂಡಲ ಫರ್ಟಿಲೈಸರ್‌ನ ಸಂಪನ್ಮೂಲ ವ್ಯಕ್ತಿಗಳು ಹಾಗೂ ಉತ್ತರ ಕನ್ನಡ,ಹಾವೇರಿ,ಗದಗ,ಉಡುಪಿ ಜಿಲ್ಲೆಯ ಅಧ್ಯಕ್ಷರು, ನಿರ್ದೇಶಕರು,ಸಿ.ಇ.ಒ ಗಳು ಮತ್ತು ಸ್ಕೊಡ್‌ವೆಸ್ ಸಂಸ್ಥೆಯ ಸಿಬ್ಬಂದಿಗಳು ಭಾಗವಹಿಸಿದರು.

Share This
300x250 AD
300x250 AD
300x250 AD
Back to top