• Slide
  Slide
  Slide
  previous arrow
  next arrow
 • ಬಡಕಾನಶಿರಡಾದಲ್ಲಿ ವ್ಯಕ್ತಿ ಸಾವು; ಸ್ಥಳಕ್ಕೆ ಪೊಲೀಸರ ಭೇಟಿ

  300x250 AD

  ದಾಂಡೇಲಿ: ತಾಲ್ಲೂಕಿನ ಬಡಕಾನಶಿರಡಾ ಗ್ರಾಮದಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಮಂಗಳವಾರ ತಡರಾತ್ರಿ ನಡೆದಿರುವುದರ ಬಗ್ಗೆ ಬುಧವಾರ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ಬಡಕಾನಶಿರಡಾ ಗ್ರಾಮದಲ್ಲಿ 65 ವರ್ಷ ವಯಸ್ಸಿನ ಸ್ಥಳೀಯ ನಿವಾಸಿ ಸತೀಶ.ಆರ್. ಗಣಾಚಾರಿ ಎಂಬವರೆ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಬಲ್ಲಮೂಲಗಳ ಮಾಹಿತಿಯ ಪ್ರಕಾರ ನಿನ್ನೆ ರಾತ್ರಿ ಬಡಿದ ಸಿಡಿಲಿನ ಪ್ರವಾಹಕ್ಕೆ ಇಲ್ಲವೇ ವಿದ್ಯುತ್ ಪ್ರವಾಹದಿಂದ ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ.

  ಘಟನಾ ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸೈ ಕೃಷ್ಣ ಗೌಡ, ಎಎಸೈಗಳಾದ ವೆಂಕಟೇಶ್ ತೆಗ್ಗಿನ್, ಮಹಾವೀರ ಕಾಂಬಳೆ ಸೇರಿದಂತೆ ಪೊಲೀಸರ ತಂಡ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದು ಶವಗಾರದಲ್ಲಿ ಇರಿಸಲಾಗಿದೆ. ಸತೀಶ್ ಆರ್.ಗಣಾಚಾರಿಯವರ ಸಾವಿನ ಬಗ್ಗೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top