ಅಂಕೋಲಾ: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಕಾಂಗ್ರೆಸ್ ಪಕ್ಷ ರಾಜ್ಯದ ಚುಕ್ಕಾಣಿ ಹಿಡಿದ ಬೆನ್ನಲ್ಲೆ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಜೈಹಿಂದ್ ಸರ್ಕಲ್‌ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ ಮಾತನಾಡಿ, ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಸ್ವಾತಂತ್ರ‍್ಯವನ್ನು ತಂದುಕೊಟ್ಟ ಪಕ್ಷವಾಗಿದ್ದು ತನ್ನದೇ ಆದ ತತ್ವ ಸಿದ್ಧಾಂತವನ್ನು ಹೊಂದಿದೆ. ಉಳುವವನೇ ಹೊಲದೊಡೆಯ ಕಾಯಿದೆಯನ್ನು ಜಾರಿಗೆ ತಂದು ದೀನ ದಲಿತರಿಗೆ ಹಿಂದುಳಿದವರಿಗೆ ಮೀಸಲಾತಿ ನೀಡಿ ಬಡವರ ಆಶಾಕಿರಣವಾದ ಕಾಂಗ್ರೆಸ್ ಪಕ್ಷ ಇಂದು ರಾಜ್ಯದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಸರಕಾರ ನೀಡಿದ ಆಶ್ವಾಸನೆಗಳನ್ನು ಈಡೇರಿಸಲು ವಿಫಲವಾದ್ದರಿಂದ ರಾಜ್ಯದ ಜನ ಕಾಂಗ್ರೆಸ್ಸನ್ನು ಗಲ್ಲಿಸಿದ್ದಾರೆ. ನುಡಿದಂತೆ ನಡೆಯುವ ಸಿದ್ದರಾಮಯ್ಗ ನೇತೃತ್ವದ ಸರಕಾರ ಪ್ರಣಾಳಿಕೆಯ ಐದು ಗ್ಯಾರಂಟಿಗಳನ್ನು ಈಡೇರಿಸುತ್ತದೆ ಎಂದರು.
ಜಿ.ಪಂ. ಮಾಜಿ ಸದಸ್ಯ ವಿನೋದ ನಾಯಕ ಭಾಸಗೋಡ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುಜಾತಾ ಗಾಂವಕರ, ಪ್ರಚಾರ ಸಮಿತಿಯ ಸಂಚಾಲಕ ಮಂಜುನಾಥ ಡಿ.ನಾಯ್ಕ, ಸುರೇಶ ನಾಯಕ, ಉಮೇಶ ನಾಯ್ಕ, ಉದಯ ನಾಯಕ, ಸುರೇಶ ನಾಯ್ಕ, ಮಂಜುನಾಥ ನಾಯ್ಕ, ಸತೀಶ ನಾಯ್ಕ, ಸಂಜೀವ ಬಲೆಗಾರ, ಹೊನ್ನಪ್ಪ ನಾಯ್ಕ, ಲೀಲಾವತಿ ನಾಯ್ಕ, ಸವಿತಾ ಕಲ್ಕೆರೆ, ಉದಯ ನಾಯ್ಕ ಇನ್ನಿತರರು ಇದ್ದರು.