Slide
Slide
Slide
previous arrow
next arrow

ಯಲ್ಲಾಪುರ ಅರ್ಬನ್ ಬ್ಯಾಂಕಿಗೆ ಬೆಳ್ಳಿ ಹಬ್ಬದ ಸಂಭ್ರಮ

300x250 AD

ಯಲ್ಲಾಪುರ: 25 ವರ್ಷಗಳ ಹಿಂದೆ ಸ್ಥಾಪನೆಯಾದ ಯಲ್ಲಾಪುರ ಅರ್ಬನ್ ಕೋ ಆಫ್ ಕ್ರೆಡಿಟ್ ಸೊಸೈಟಿ ಇದೀಗ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದ್ದು, ಮೇ 25ರಂದು ಅದ್ಧೂರಿಯಾಗಿ ಬೆಳ್ಳಿ ಹಬ್ಬದ ಆಚರಣೆ ನಡೆಯಲಿದೆ ಎಂದು ಸೊಸೈಟಿ ಅಧ್ಯಕ್ಷ ಪರಶುರಾಮ ಆಚಾರಿ ಹೇಳಿದರು.

ಬೆಳ್ಳಿ ಹಬ್ಬದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬೆಳ್ಳಿ ಹಬ್ಬದ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಭಾ ಕಾರ್ಯುಕ್ರಮಗಳು ನಡೆಯಲಿದೆ. ಸಣ್ಣ ಪ್ರಮಾಣದಲ್ಲಿ ಶುರುವಾದ ಈ ಸೊಸೈಟಿ ಇದೀಗ ಏಳು ಶಾಖೆಯನ್ನು ಹೊಂದಿದೆ. ಎಲ್ಲರ ಸಹಕಾರದಿಂದ ಮಧ್ಯಮ ವರ್ಗದವರ ಬ್ಯಾಂಕ್ ಆಗಿ ಈ ಸೊಸೈಟಿ ಗುರುತಿಸಿಕೊಂಡಿದೆ. ಸೊಸೈಟಿ ಕಷ್ಟದಲ್ಲಿದ್ದಾಗ ಶೇರುದಾರರು, ಠೇವಣಿದಾರರು ಹಾಗೂ ಸಾಲಗಾರರು ಕೈ ಹಿಡಿದು ನಡೆಸಿದ್ದು ಈ ಬಗೆಯ ಸಾಧನೆಗೆ ಕಾರಣ ಎಂದರು.
ಪ್ರಸ್ತುತ ಎಲ್ಲರ ಸಹಕಾರದಿಂದ ಸೊಸೈಟಿ ಉತ್ತಮ ರೀತಿಯಲ್ಲಿ ನಡೆಯುತ್ತಿದೆ. ಯಾವುದೇ ವಿವಾದ, ತಂಟೆ-ತಕರಾರರುಗಳಿಗೆ ಇಲ್ಲಿ ಆಸ್ಪದವಿಲ್ಲ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮಾತಿಗೆ ಎಲ್ಲರೂ ಬೆಲೆ ನೀಡುತ್ತಿದ್ದು, ಯಾವುದೇ ತಾರತಮ್ಯ ಇಲ್ಲದೇ ಸೊಸೈಟಿ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿದರು.

300x250 AD
Share This
300x250 AD
300x250 AD
300x250 AD
Back to top