Slide
Slide
Slide
previous arrow
next arrow

ಮೇ.22 ಅಂತರಾಷ್ಟ್ರೀಯ ಜೀವ ವೈವಿಧ್ಯದಿನ: ವೃಕ್ಷಲಕ್ಷ ಆಂದೋಲನದಿಂದ ಜಾಗೃತಿ ಅಭಿಯಾನ

300x250 AD

ಶಿರಸಿ: ಜೀವವೈವಿಧ್ಯ ಕಾಯಿದೆ ಅಡಿ ರಾಜ್ಯದ 6000 ಗ್ರಾಮ ಪಂಚಾಯತಗಳಲ್ಲಿ ರಚಿತವಾಗಿರುವ ಜೀವವೈವಿಧ್ಯ ಸಮಿತಿಗಳನ್ನು ಸಕ್ರಿಯಗೊಳಿಸಬೇಕು ಎಂದು ವೃಕ್ಷ ಲಕ್ಷ ಆಂದೋಲನ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಿದೆ.

ಮೇ -22 ಜಾಗತಿಕ ಜೀವವೈವಿಧ್ಯ ದಿನ ಸಂದರ್ಭದಲ್ಲಿ ವೃಕ್ಷ ಆಂದೋಲನ ಜಾಗೃತಿ ಅಭಿಯಾನ ಶುರು ಮಾಡಿದೆ. ಇತ್ತೀಚೆಗೆ ಅರಣ್ಯ, ಪರಿಸರ ಇಲಾಖೆಯ ಮುಖ್ಯಸ್ಥರನ್ನು ಜೀವ ವೈವಿಧ್ಯ ಮಂಡಳಿಯ ಸದಸ್ಯ ಕಾರ್ಯದರ್ಶಿ ಸುಭಾಷ್ ಮಾಳ್ಖೇಡ ಅವರನ್ನು ಜೀವ ವೈವಿಧ್ಯ ಮಂಡಳಿ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಭೇಟಿ ಮಾಡಿ ಗಮನ ಸೆಳೆದರು. ನದಿಮೂಲ, ಜಲಮೂಲಗಳ ರಕ್ಷಣೆಗೆ ಮಂಡಳಿ ಕೈಗೊಂಡ ನಿರ್ಣಯ ಜಾರಿ ಮಾಡಬೇಕು. ಜೀವವೈವಿಧ್ಯ ಕಾಯಿದೆ ಉಲ್ಲಂಘನೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದರು. ಚುನಾವಣೆ ಸಂದರ್ಭ ಉಪಯೋಗಿಸಿ ಶರಾವತಿ ಕಣಿವೆಯ ಕುಂಭತ್ತಿಯಲ್ಲಿ ನಡೆದಿರುವ ಗಣಿ ಅನಾಹುತಗಳ ಬಗ್ಗೆ ವೃಕ್ಷ ಆಂದೋಲನ ಸರ್ಕಾರದ ಗಮನ ಸೆಳೆದಿದೆ. ಲಿಂಗನಮಕ್ಕಿ ಜಲಾಶಯದ ಪಕ್ಕದ ಹಸಿರು ಬೆಟ್ಟದಲ್ಲಿ ಗಣಿಗಾರಿಕೆ ಸ್ಟೋಟಗಳಿಂದ ಜೀವವೈವಿಧ್ಯ ಭಾರಿ ಹಾನಿಗೆ ಒಳಗಾಗಿದೆ ಎಂಬ ಮಾಹಿತಿ ನೀಡಿದೆ.

ಏಕಜಾತಿ ನೆಡುತೋಪು ನಿರ್ಮಾಣ ಬದಲು ವಿವಿಧ ಜಾತಿಯ ಅರಣ್ಯ ಬೆಳೆಸಿ, ಕಂದಾಯ ಅರಣ್ಯ ನಾಶ ತಪ್ಪಿಸಿ ಎಂದು ಅರಣ್ಯ ಇಲಾಖೆ ಮುಖ್ಯಸ್ಥರನ್ನು ಆಗ್ರಹಿಸಿದೆ. ಜೀವವೈವಿಧ್ಯ ಸಂರಕ್ಷಣಾ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಜೀವ ವೈವಿಧ್ಯಮಂಡಳಿ ಪ್ರತಿ ವರ್ಷ ನೀಡುತ್ತಿದ್ದ ಪ್ರಶಸ್ತಿಗಳನ್ನು ನಿಲ್ಲಿಸಿದ್ದು, ಪುನಃ ಪ್ರಾರಂಭಿಸಿ ಎಂದು ಒತ್ತಾಯ ಮಾಡಲಾಗಿದೆ. ಚಂದ್ರಗುತ್ತಿ, ರಾಮತೀರ್ಥಗಳಂಥ ಸೂಕ್ಷ ಜೀವವೈವಿಧ್ಯ ತಾಣಗಳ ರಕ್ಷಣೆಗೆ ವೃಕ್ಷ ಆಂದೋಲನ ಜಾಗೃತಿ ಅಭಿಯಾನದಲ್ಲಿ ಆಧ್ಯತೆ ನೀಡಲಿದೆ

300x250 AD

ವೃಕ್ಷ ಆಂದೋಲನದ ಶಿಫಾರಸ್ಸಿಗೆ ಸ್ಪಂದಿಸಿರುವ ಪಿ.ಸಿ.ಸಿ.ಎಫ್. ಸುಭಾಷ್ ಉ.ಕ. ಜಿಲ್ಲೆ ಮತ್ತು ಶಿವಮೊಗ್ಗಾ ಮತ್ತು ಜಿಲ್ಲೆಯ ಮಾದರಿ ಜೀವವೈವಿಧ್ಯ ಸಮಿತಿಗಳಿಗೆ ಈ ಬಗ್ಗೆ ಆದೇಶ ನೀಡಿದ್ದಾರೆ.

Share This
300x250 AD
300x250 AD
300x250 AD
Back to top