Slide
Slide
Slide
previous arrow
next arrow

ರೈತರ ಸಮಸ್ಯೆಗೆ ಸ್ಪಂದಿಸಿ, ಪರಿಹಾರ ನೀಡುವುದೇ ಸಹಕಾರಿ ಸಂಸ್ಥೆಯ ಆದ್ಯತೆ: ಪ್ರಮೋದ ಹೆಗಡೆ

300x250 AD

ಶಿರಸಿ : ರೈತ ಸಮುದಾಯದ ಸಂಕಷ್ಟಗಳಿಗೆ ಸದಾ ಕಾಲ ಸ್ಪಂದಿಸಿ, ಪರಿಹರಿಸುವುದು ಸಹಕಾರಿ ಸಂಸ್ಥೆಗಳ ಪ್ರಮುಖ ಆದ್ಯತೆಯಾಗಿದೆ ಎಂದು ಯಲ್ಲಾಪುರ ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷರಾದ ಪ್ರಮೋದ ಹೆಗಡೆ ತಿಳಿಸಿದರು.

ತಾಲೂಕಿನ ಮೆಣಸೀ ಸೀಮೆಯ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ನೂತನ ಕಟ್ಟಡಗಳ ಸಂಕೀರ್ಣಗಳ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ಮೇ.18 ರಂದು, ಸಂಘದ ಕಾರ್ಯವ್ಯಾಪ್ತಿಯಲ್ಲಿ ವೈದ್ಯಕೀಯ, ಗಿಡ ಮೂಲಿಕಾ ಔಷಧ, ಕೈಗಾರಿಕೆ, ಪಶು ವೈದ್ಯಕೀಯ, ಸಾಂಸ್ಕೃತಿಕ, ಪತ್ರಿಕೋದ್ಯಮ, ಚಿತ್ರೋದ್ಯಮ, ಜೇನುಕೃಷಿ, ಕೃಷಿ ಚಟುವಟಿಕೆಯಲ್ಲಿ ಯಾಂತ್ರಿಕತೆ, ಗೃಹೋತ್ಪನ್ನ, ಗುಡಿಕೈಗಾರಿಕೆ, ತಯಾರಿಕೆ ಹಾಗೂ ಮಾರಾಟ, ಉದ್ಯಮ, ಪ್ರವಾಸೋದ್ಯಮ, ಉನ್ನತ ಶಿಕ್ಷಣ ಕ್ಷೇತ್ರ ಹಾಗೂ ದೇಶಸೇವೆಯಲ್ಲಿ ಸಾಧನೆಗೈದ 71 ಮಹನೀಯರನ್ನು ಸನ್ಮಾನಿಸಿ ಮಾತನಾಡಿದರು.

ಹಿರಿಯರ ಪರಿಶ್ರಮದಿಂದ ಆರಂಭವಾಗಿರುವ ಸಹಕಾರಿ ಸಂಘಗಳು ಜನತೆಯ ಸಹಕಾರದಿಂದ ಪ್ರಗತಿಯ ಮೆಟ್ಟಿಲುಗಳನ್ನೆರಲು ಸಾಧ್ಯವಾಗುತ್ತಿದೆ ಎಂದರು.

ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ನಿರಂಜನ ವಾನಳ್ಳಿ ಅವರು ಸಹಕಾರಿ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿ, ಸದಾಚಾರ, ಪ್ರಮಾಣಿಕತೆ ಹಾಗೂ ಸತ್-ಚಾರಿತ್ರ್ಯಗಳಂತಹ ಸದ್ಗುಣಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಸಮಾಜದಲ್ಲಿ ಕಳಂಕರಹಿತ ಗೌರವಯುತವಾಗಿ ಜೀವನ ನಡೆಸಲು ಸಾಧ್ಯ ಎಂದ ಅವರು ಎಲ್ಲರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸಿ ಅನಾಥಪ್ರಜ್ಞೆ ಕಾಡದಂತೆ ಸಹಕಾರಿ ಸಂಘಗಳು ಕಾರ್ಯ ನಿರ್ವಹಿಸುತ್ತಿರುವುದರಿಂದ, ಮುಂದಿನ ದಿನಗಳಲ್ಲಿ ರೈತರು ಸಾಮೂಹಿಕ ಕೃಷಿಯನ್ನು ಅಳವಡಿಸಿಕೊಳ್ಳಲು ಮಾರ್ಗದರ್ಶನ ಅವಶ್ಯವಾಗಬಹುದು ಎಂದರು.

300x250 AD

ಸನ್ಮಾನಿತರ ಪರವಾಗಿ ಎನ್. ಆರ್. ಹೆಗಡೆ ಮಾನಿಗದ್ದೆ, ಡಾ. ಜಿ. ಎಂ. ಹೆಗಡೆ ಶಿರಸಿ, ರಾಮಕೃಷ್ಣ, ವಿ.ಹೆಗಡೆ, ಗೋಡೆಮನೆ, ದತ್ತಾತ್ರಯ ಅ. ಹೆಗಡೆ ಮೆಣಸೀಮನೆ ಹಾಗೂ ಡಾ. ವೆಂಕಟ್ರಮಣ ಹೆಗಡೆ ಮಾತಾಡಿದರೆ, ಅತಿಥಿಗಳಾಗಿ ಹೆಗಡೆಕಟ್ಟಾ ಸೊಸೈಟಿ ಅಧ್ಯಕ್ಷರಾದ ಎಂ.ಪಿ. ಹೆಗಡೆ, ಮತ್ತಿಘಟ್ಟ ಸೊಸೈಟಿ ಅಧ್ಯಕ್ಷರಾದ ಗೋಪಾಲಕೃಷ್ಣ, ವೈದ್ಯ, ಬೈರುಂಬೆ ಸೊಸೈಟಿ ಅಧ್ಯಕ್ಷರಾದ ವಿ.ಎಸ್. ಹೆಗಡೆ, ಶಿರಸಿ ಟಿ.ಎಂ.ಎಸ್. ಮುಖ್ಯ ಕಾರ್ಯನಿರ್ವಾಹಕರಾದ ಎಂ.ಎ. ಹೆಗಡೆ ಹಾಗೂ ನಿರ್ದೇಶಕ ಎನ್. ಡಿ. ಹೆಗಡೆ ಅವರುಗಳು ಸಹಕಾರಿ ತತ್ವಗಳ ಕುರಿತಾಗಿ ಮಾತನಾಡಿದರು.

ಇತ್ತೀಚಿಗೆ ವಾಹನ ಅಪಘಾತದಲ್ಲಿ ನಿಧನರಾದ ಸಂಘದ ನೌಕರಾದ ನಾರಾಯಣ ರಾ. ಭಟ್ಟ ಭಟ್ರಗದ್ದೆ ಅವರಿಗೆ ಸಭೆಯ ಆರಂಭದಲ್ಲಿ ಮೌನಾಚರಣೆಯ ಮೂಲಕ ಶೃದ್ಧಾಂಜಲಿ ಸಲ್ಲಿಸಲಾಯಿತು.
ಶ್ರೀಮತಿ ಭಾಗೀರಥಿ ಹೆಗಡೆ ಹಾಗೂ ಸಂಗಡಿಗರು ಹಾಡಿದ ಗಣೇಶ ಸ್ತುತಿಯೊಂದಿಗೆ ಸಭಾ ಕಾರ್ಯಕ್ರಮ ಆರಂಭವಾಯಿತು ಸಂಘದ ಅಧ್ಯಕ್ಷರಾದ ಎನ್.ಎಸ್.ಹೆಗಡೆ ಕೋಟಿಕೊಪ್ಪ ಸ್ವಾಗತಿಸಿ, ಸಹಕಾರಿ ಸಂಘದ ಆರಂಭದಿಂದ ಈವರೆಗಿನ ಪ್ರಗತಿಯನ್ನು ಪ್ರಾಸ್ತಾವಿಕವಾಗಿ ತಿಳಿಸಿದರು. ಸಂಘದ ನಿರ್ದೇಶಕರಾದ ರಾಮಕೃಷ್ಣ ವೆಂ. ಹೆಗಡೆ ಕಾನ್ಮುಸ್ಕಿ ಹಾಗೂ ಪ್ರಸನ್ನ ಹೆಗಡೆ ಕಂಬದಮನೆ ಕಾರ್ಯಕ್ರಮ ನಿರೂಪಿಸಿದರೆ, ಸಂಘದ ಉಪಾಧ್ಯಕ್ಷರಾದ ವಿ.ಆರ್. ಹೆಗಡೆ ಮಣ್ಮನೆ ವಂದಿಸಿದರು ಕುಮಾರಿ ಕೆ.ಆರ್. ಶ್ರೇಯಾ ಅವರು ಹಾಡಿದ ವಂದೇ ಮಾತರಂ ಗೀತೆಯೊಂದಿಗೆ ಸಭೆ ಕಾರ್ಯಕ್ರಮ ಮುಕ್ತಾಯವಾಯಿತು.


ಸಭೆ ಕಾರ್ಯಕ್ರಮದ ನಂತರ ಶ್ರೀಮತಿ ಸುಧಾರಾಣಿ, ದತ್ತರಾಜ್ ಹೆಗಡೆ ಕಂಬದಮನೆ ಅವರಿಂದ ಭರತ ನಾಟ್ಯ ನೃತ್ಯ ರೂಪಕ ಹಾಗೂ ಸಂಘದ ಕಾರ್ಯವ್ಯಾಪ್ತಿಯ ಸ್ಥಳೀಯ ಮಹಿಳೆಯರಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಕಿಕ್ಕಿರಿದು ನೆರೆದಿದ್ದ ಕಲಾಸಕ್ತರ ಮನಸೂರೆಗೊಂಡಿತು.

Share This
300x250 AD
300x250 AD
300x250 AD
Back to top