ಹಳಿಯಾಳ: ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟನ್ ವಿಮಲ ವಿ. ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ ಸುಮಾರು 25 ಶಿಕ್ಷಿತ ಸ್ಕೇಟಿಂಗ್ ಮಕ್ಕಳಿಂದ ಹಳಿಯಾಳ ಪಟ್ಟಣದಲ್ಲಿ ಸಾಮಾಜಿಕ ಕಳಕಳಿಯ ನಿಮಿತ್ಯ ಪರಿಸರ ಸಂರಕ್ಷಣೆ ಮತ್ತು ನೀರಿನ ಮಿತವ್ಯಯದ ಕುರಿತಾಗಿ ಜಾಗೃತಿ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಯಿತು.
ಸ್ಕೇಟಿಂಗ್ ಮಕ್ಕಳ ರ‍್ಯಾಲಿಯು ಕೈ ಫಲಕಗಳೊಂದಿಗೆ ಮತ್ತು ಸ್ಥಳೀಯ ಆರಕ್ಷಕ ದಳದ ನೆರವಿನಿಂದ ಸಂಸ್ಥೆಯಿAದ ಮೊದಲುಗೊಂಡು ಯಲ್ಲಾಪೂರ ನಾಕಾ, ಶಿವಾಜಿ ವೃತ್ತ ಮತ್ತು ಸಂತೆಬೀದಿ ಮುಖೇನ ಹಾಯ್ದು ಮರಳಿ ಶಿವಾಜಿ ವೃತ್ತದಲ್ಲಿ ಕೊನೆಗೊಂಡಿತು.
ಈ ರ‍್ಯಾಲಿಯಲ್ಲಿ ಸ್ಥಳೀಯರು, ಪಾಲಕ ವೃಂದ ಶ್ರೀ ವಿ.ಆರ್.ಡಿ.ಎಮ್.ಟ್ರಸ್ಟ್ನ ಆಡಳಿತಾಧಿಕಾರಿಗಳಾದ ಶ್ರೀ ಪ್ರಕಾಶ ಪ್ರಭು, ಶಾಲೆಯ ಪ್ರಾಂಶುಪಾಳರಾದ ಡಾ.ಸಿ.ಬಿ.ಪಾಟೀಲ ಮತ್ತು ಶಿಕ್ಷಕ-ಶಿಕ್ಷಕೇತರ ವೃಂದದವರು ಪಾಲ್ಗೊಂಡಿದ್ದರು. ಉತ್ತರ ಕನ್ನಡ ಜಿಲ್ಲೆಯ ರೋಲರ್ ಸ್ಕೇಟಿಂಗ್ ಸಂಸ್ಥೆಯ ಅಧ್ಯಕ್ಷ ದಿಲೀಪ ಹಣಬರ, ಸಂಕೇತ ಮತ್ತು ಇನ್ನಿತರರು ಶಾಲೆಯ ಮಕ್ಕಳನ್ನು ತರಬೇತುಗೊಳಿಸಿದ್ದರು.