• Slide
    Slide
    Slide
    previous arrow
    next arrow
  • ಜಿಎಸ್‌ಬಿ ಸೇವಾ ಟ್ರಸ್ಟ್ ಶಿಷ್ಯವೇತನ ವಿತರಣೆ

    300x250 AD

    ಕುಮಟಾ: ಇತ್ತೀಚಿಗೆ ಶ್ರೀಶಾಂತಿಕಾಂಬಾ ಸಭಾಭವನ ಹೊಳೆಗದ್ದೆಯಲ್ಲಿ ಜಿ.ಎಸ್.ಬಿ ಸೇವಾ ಟ್ರಸ್ಟ್ ಹೊಳೆಗದ್ದೆ ಇದರ 11ನೇ ವರ್ಷದ ಶಿಷ್ಯವೇತನ ಮತ್ತು ವೈದ್ಯಕೀಯ ಸಹಾಯಧನ ವಿತರಣಾ ಸಮಾರಂಭ ನಡೆಯಿತು.
    ಈ ಕಾರ್ಯಕ್ರಮವನ್ನು ನವಮಿ ಎಂಟರ್ಪ್ರೈಸಸ್ ಬೆಂಗಳೂರಿನ ಮಾಲಕರಾದ ಸುಪ್ರಭಾ ಜೀವನ ಮಲ್ಯ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಇಂದಿನ ಆಧುನಿಕ ಕಾಲದಲ್ಲಿ ಮಹಿಳೆಯರು ಎಲ್ಲಾ ರಂಗಗಳಲ್ಲೂ ಉತ್ತಮವಾದ ಸಾಧನೆಯನ್ನು ಮಾಡುತ್ತಿದ್ದಾರೆ. ನೀವು ಕೂಡ ಮನಸ್ಸು ಮಾಡಿದರೆ ಉತ್ತಮ ಸಾಧನೆಯನ್ನು ಮಾಡಿ ಸಮಾಜದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ ಉತ್ತಮ ಅಂಕಗಳನ್ನು ಪಡೆದ ಹತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ನೀಡಿ ಅವರ ಶಿಕ್ಷಣಕ್ಕೆ ನೇರವಾದರು.
    ಮುಖ್ಯ ಅತಿಥಿಗಳಾಗಿ ಆಗಮಿಸಿದ ಅರುಣ ಕಾಮತ ಕುಮಟಾ ಇವರು ಮಾತನಾಡಿ ಕೆಲವು ನಿದರ್ಶನಗಳ ಮೂಲಕ ಶಿಕ್ಷಣ ಮತ್ತು ಕೆಲವು ವೃತ್ತಿ ಕೌಶಲ್ಯಗಳ ಮಹತ್ವವನ್ನು ತಿಳಿಸಿದರು.
    ಇನ್ನೋರ್ವ ಮುಖ್ಯ ಅತಿಥಿಗಳಾದ ಕಾಶಿನಾಥ ಬಾಳಗಿ ಹಳದಿಪುರ ಇವರು ಮಾತನಾಡಿ ನಮ್ಮ ಸಂಸ್ಕೃತಿ ಮತ್ತು ಸಮಾಜವನ್ನು ಗೌರವಿಸುವಂತಹ ವ್ಯಕ್ತಿಗಳಾಗಬೇಕು ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸುಧೀರ ಪಂಡಿತ ಬರ್ಗಿ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿ ಶಿಷ್ಯವೇತನ ನಿಧಿಗೆ ಒಂದು ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದರು. ಚಾರ್ಟರ್ಡ್ ಅಕೌಂಟೆಂಟ್ ಯೋಗೀಶ್ ಜಿ.ಕಾಮತ ಅನಿವಾರ್ಯ ಕಾರಣಗಳಿಂದ ಸಮಾರಂಭಕ್ಕೆ ಹಾಜರಾಗದಿದ್ದರೂ ಕೂಡ ತಮ್ಮ ತಂದೆ ದಿವಂಗತ ಜಿ.ಎಸ್.ಕಾಮತ ಇವರ ಹೆಸರಿನಲ್ಲಿ ಈ ವರ್ಷ ರೂ.1,11,111ಗಳನ್ನು ನೀಡಿದ್ದು, ಇದಲ್ಲದೆ ಪ್ರತಿ ವರ್ಷ 1,11,111 ರೂ.ಗಳನ್ನು ದೇಣಿಗೆ ರೂಪದಲ್ಲಿ ಶಿಷ್ಯವೇತನ ನಿಧಿಗೆ ನಮ್ಮ ತಂದೆ ಹೆಸರಿನಲ್ಲಿ ನೀಡುವುದಾಗಿ ತಿಳಿಸಿರುವರು.
    ದೇಣಿಗೆ ನೀಡಿದ ಶ್ರೀ ಯೋಗೀಶ ಕಾಮತ ಮತ್ತು ಸುದೀರ ಪಂಡಿತ ಇವರಿಗೆ ಜಿ.ಎಸ್.ಬಿ. ಟ್ರಸ್ಟ್ ಹೊಳೆಗದ್ದೆ, ಕುಮಟಾ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸಲಾಯಿತು. ಮೋಹನ ಗಣಪತಿ ಕಾಮತ, ಕಾಮತ ಟ್ರೇಡರ್ಸ್, ಹೊಳೆಗದ್ದೆ, ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಈ ಶುಭ ಕಾರ್ಯಕ್ರಮದಲ್ಲಿ ಸುಪ್ರಭಾ ಜೀವನ ಮಲ್ಯ ಇವರನ್ನು ತಮ್ಮ ಉದ್ದಿಮೆಯಲ್ಲಿ ಮಾಡಿರುವ ಸಾಧನೆಗಾಗಿ ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಈ ಶುಭ ಸಂದರ್ಭದಲ್ಲಿ ಒಂದನೇ ತರಗತಿಯಿಂದ ಉನ್ನತ ಶಿಕ್ಷಣ ಪಡೆಯುತ್ತಿರುವ 38 ವಿದ್ಯಾರ್ಥಿಗಳಿಗೆ 58,300 ರೂ. ಶಿಷ್ಯವೇತನ, ಎರಡು ವಿ ದ್ಯಾರ್ಥಿಗಳಿಗೆ 2000 ರೂ. ಗೌರವಧನ, ಒಬ್ಬರಿಗೆ ವೈದ್ಯಕೀಯ ಸಹಾಯಧನ. ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಳೆಗದ್ದೆಯ ಐದರಿಂದ ಏಳನೇ ತರಗತಿಯ 26 ವಿದ್ಯಾರ್ಥಿಗಳಿಗೆ 6000 ರೂ ಮೌಲ್ಯದ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
    ಗಜಾನನ ಶಾನಭಾಗ ಧಾರೇಶ್ವರ ಕಾರ್ಯಕ್ರಮ ನಿರೂಪಿಸಿದರು. ಗಣೇಶ ಪೈ ಸ್ವಾಗತಿಸಿದರು. ಸುಬ್ರಾಯ ಶಾನಭಾಗ ವರದಿ ವಾಚಿಸಿದರು. ದೀಪಕ ಕಾಮತ ಶಿಷ್ಯವೇತನ ಯಾದಿ ಪ್ರಕಟಿಸಿದರು. ಅನಂತ ಕಾಮತ ವಂದಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top