Slide
Slide
Slide
previous arrow
next arrow

ಶಿಕ್ಷಕರಿಗೆ ಕಲಿಕಾ ಪ್ರೇರಣಾ ಕಾರ್ಯಗಾರ

300x250 AD

ಕುಮಟಾ: ತಾಲೂಕಿನ ಮಿರ್ಜಾನ್‌ನ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರಿಗಾಗಿ ಎರಡು ದಿನಗಳ ಕಲಿಕಾ ಪ್ರೇರಣಾ ಕಾರ್ಯಗಾರ ನಡೆಯಿತು.
ಕಲಿಕಾ ಪ್ರೇರಣಾ ಕಾರ್ಯಗಾರವನ್ನು ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ ಸ್ವಾಮೀಜಿಯವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಶಿಕ್ಷಕರಾದವರು ನಿಂತ ನೀರಾಗದೆ ಸದಾ ಉತ್ಸಾಹದ ಚಿಲುಮೆಯಂತಿರಬೇಕು. ಹೇಗೆ ಚಿನ್ನ, ಬೆಳ್ಳಿ, ತಾಮ್ರ ಮೊದಲಾದ ಲೋಹದ ಪರಿಕರಗಳನ್ನು ಆಗಾಗ ಶುಭ್ರಗೊಳಿಸಿ ಫಳ ಫಳ ಹೊಳೆಯುವಂತೆ ಮಾಡುತ್ತೇವೆಯೋ, ಅದೇ ರೀತಿ ಆಗಾಗ ಶಿಕ್ಷಕರಿಗೆ ಇಂತಹ ಕಾರ್ಯಗಾರಗಳ ಮೂಲಕ ಚೈತನ್ಯದ ಚಿಲುಮೆಯಂತೆ ಅವರನ್ನು ಹೆಚ್ಚು ಕ್ರಿಯಾಶೀಲರನ್ನಾಗಿ ಮಾಡುವುದೇ ಈ ಕಾರ್ಯಗಾರದ ಉದ್ದೇಶವಾಗಿದೆ ಎಂದು ಶ್ರೀಗಳು ನುಡಿದರು.
ಈ ಕಾರ್ಯಗಾರಕ್ಕೆ ಆಗಮಿಸಿದ ಅತಿಥಿಗಳನ್ನು ಸಂಸ್ಥೆಯ ಪ್ರಾಚಾರ್ಯರಾದ ಲೀನಾ ಎಮ್.ಗೋನೆಹಳ್ಳಿಯವರು ಸ್ವಾಗತಿಸಿದರು. ಈ ಕಾರ್ಯಗಾರದ ಮೊದಲನೆಯ ದಿನ ಗುರುಪ್ರಸಾದ ಪ್ರೌಢಶಾಲೆ ಮಲ್ಲಾಪರದ ಮುಖ್ಯೋಪಾಧ್ಯಾಯ ಎಮ್.ಟಿ.ಗೌಡ, ರಾಷ್ಟೀಯ ಶಿಕ್ಷಣ ನೀತಿಯ ರೂಪು ರೇಷೆಯ ಕುರಿತು ಸುದೀರ್ಘ ಮಾಹಿತಿ ನೀಡಿದರು. ಕಮಲಾ ಬಾಳಿಗಾ ಶಿಕ್ಷಕರ ತರಬೇತಿ ವಿದ್ಯಾಲಯದ ಉಪನ್ಯಾಸಕರಾದ ಎಸ್.ಕೆ.ಭಟ್ ಮಾತನಾಡಿ, ವಿಜ್ಞಾನ ಬೋಧನೆಯ ಕುರಿತು ಮಾಹಿತಿ ನಿಡಿದರು. ಕರ್ಕಿಯ ಚನ್ನಕೇಶವ ಪ್ರೌಢಶಾಲೆ ಮುಖ್ಯೋಪಾದ್ಯಾಯ ಎಲ್.ಎಮ್.ಹೆಗಡೆಯವರು ಗಣಿತ ಬೋಧನೆಯ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ಈ ಕಾರ್ಯಗಾರದ ಎರಡನೇ ದಿನ ಸಂಸ್ಥೆಯ ಆಡಳಿತಾಧಿಕಾರಿ ಜಿ.ಮಂಜುನಾಥರವರು ಶಿಕ್ಷಕರು ಹೇಗಿರಬೇಕು ಹಾಗೂ ಯಾವ ಯಾವ ಗುಣಲಕ್ಷಣಗಳನ್ನು ಹೊಂದಿರಬೇಕು ಎಂಬ ಬಗ್ಗೆ ಉಪನ್ಯಾಸ ನೀಡಿದರು. ಹಿರಿಯ ಶಿಕ್ಷಕರಾದ ಎಮ್.ಜಿ.ಹಿರೇಕುಡಿಯವರು ಸಮಾಜ ವಿಜ್ಞಾನ ಮತ್ತು ಭೂಗೋಳದ ಬಗ್ಗೆ ಮಾಹಿತಿ ನೀಡಿದರು. ಶಿಕ್ಷಕಿ ನಿರ್ಮಲಾ ಪ್ರಭು ಶಿಕ್ಷಕರಿಗೆ ವಿವಿಧ ಆಟಗಳನ್ನು ಆಡಿಸುವುದರ ಮೂಲಕ ಮಕ್ಕಳಿಗೆ ಶಿಕ್ಷಕರು ಕಲಿಸಬೇಕಾದ ಜೀವನದ ಮೌಲ್ಯಗಳ ಬಗ್ಗೆ ತಿಳಿಸಿಕೊಟ್ಟರು. ಶಿಕ್ಷಕರು ತಮ್ಮ ಅನಿಸಿಕೆ ಹಂಚಿಕೊಂಡರು. ಶಿಕ್ಷಕಿ ಅನುಶ್ರೀ ಪಟಗಾರ ಹಾಗೂ ಶಿಕ್ಷಕ ಶ್ರೀಧರ ಹೆಚ್. ಆರ್. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ರಂಜನಾ ಆಚಾರ್ಯ ಪ್ರಾರ್ಥಿಸಿದರು. ಶಿಕ್ಷಕಿ ಸುಮಂಗಲಾ ಭಟ್ಟ ವೇದಘೋಷ ಮೊಳಗಿಸಿದರು. ಶಿಕ್ಷಣ ಸಂಯೋಜಕಿ ಗೀತಾ ನಾಯ್ಕ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top