• Slide
  Slide
  Slide
  previous arrow
  next arrow
 • ಶಿರಸಿಗೆ ಬೇಕಿದೆ ಸಂಚಾರ ಪೊಲೀಸ್ ಠಾಣೆ

  300x250 AD

  ಶಿರಸಿ: ಉತ್ತರಕನ್ನಡ ಜಿಲ್ಲೆಯಲ್ಲಿಯೇ ಶಿರಸಿ ಭೌಗೋಳಿಕವಾಗಿ ಹೆಚ್ಚು ವಿಸ್ತಾರವಾದ ನಗರವಾಗಿದೆ. ಜನಸಂಖ್ಯೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದಲೂ ಕೂಡಾ ಶಿರಸಿ ರಾಕೆಟ್ ವೇಗದಲ್ಲಿ ಬೆಳೆಯುತ್ತಿರುವ ನಗರವಾಗಿರುವುದರಿಂದ ಸ್ಥಳೀಯವಾಗಿ ಹಾಗು ಪರ ಊರಿನಿಂದಲೂ ಶಿರಸಿ ನಗರಕ್ಕೆ ಬರುವ ವಾಹನಗಳ ಸಂಖ್ಯೆ ಹೆಚ್ಚಾಗತೊಡಗಿದೆ.
  ಮೀತಿ ಮೀರಿ ಬರುತ್ತಿರುವ ವಾಹನಗಳ ದೃಷ್ಟಿಯಿಂದ ಶಿರಸಿ ನಗರದ ಐದು ರಸ್ತೆ ಸರ್ಕಲ್ ನಿಂದ ಯಲ್ಲಾಪುರ ನಾಕಾವರೆಗಿನ ರಸ್ತೆಯನ್ನು ಅಗಲಿಕರಣಗೊಳಿಸಲಾಗುತ್ತಿದೆ. ಇಲ್ಲಿ ರಸ್ತೆ ಅಗಲೀಕರಣಗೊಳಿಸುತ್ತಿರುವುದು ಶ್ಲಾಘನೀಯವಾದರೂ ಜನ ಹಾಗೂ ವಾಹನ ನಿಬಿಡವಾದ ಸ್ಥಳಗಳಲ್ಲಿ ಸಿಗ್ನಲ್ ಲೈಟ್‌ಗಳನ್ನು ಅಳವಡಿಸಲಾಗುತ್ತಿಲ್ಲ. ಈ ಕಾರ್ಯವನ್ನು ಮಾಡಬೇಕಾಗಿದ್ದು ಟ್ರಾಫಿಕ್ ಪೊಲೀಸರು. ಶಿರಸಿಯಲ್ಲಿ ಸಂಚಾರಿ ಪೊಲೀಸ್ ಠಾಣೆ ಮಂಜೂರಿ ಪಡೆದು ಮೂರ್ನಾಲ್ಕು ತಿಂಗಳಾದರೂ ಚುನಾವಣೆ ನೀತಿ ಸಂಹಿತೆ ಜಾರಿಗೆ ಬಂದು ನೆನೆಗುದಿಗೆ ಬೀಳಬೇಕಾಯಿತು. ಸ್ಪೀಕರ್ ಕಾಗೇರಿಯವರು ಸಂಚಾರಿ ಪೋಲಿಸ್ ಠಾಣೆ ಮಂಜೂರಿ ಮಾಡಿಸಿದರೂ ಚುನಾವಣೆ ಬಳಿಕ ಅದನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿ ನೂತನ ಶಾಸಕ ಭೀಮಣ್ಣ ಟಿ.ನಾಯ್ಕರವರ ಮೇಲಿದೆ.
  ಐದು ರಸ್ತೆ ಸರ್ಕಲ್ ಬಳಿ ರಸ್ತೆ ಅಗಲಿಕರಣಗೊಂಡರು ಅಲ್ಲಿ ಅತೀ ಅವಶ್ಯವಾಗಿ ಬೇಕಾಗಿದ್ದ ಸಿಗ್ನಲ್ ಲೈಟ್ ಗಳನ್ನು ಅಳವಡಿಸಲಾಗಿಲ್ಲ. ಇದಕ್ಕೆ ಸಂಚಾರಿ ಪೋಲಿಸ್ ಠಾಣೆಯಿಲ್ಲದಿರುವುದೇ ಸಿಗ್ನಲ್ ಲೈಟಿಗೆ ಮುಳುವಾಗಿದೆ.ಈ ಹಿನ್ನಲೆಯಲ್ಲಿ ನೂತನ ಶಾಸಕರು ಕೂಡಲೇ ಮಂಜೂರಾದ ಸಂಚಾರಿ ಪೋಲಿಸ್ ಠಾಣೆ ಕೂಡಲೇ ಶಿರಸಿಯಲ್ಲಿ ಕಾರ್ಯಾರಂಭ ಮಾಡಿಸಬೇಕೆಂದು ಸಾರ್ವಜನಿಕರು ಮನವಿಮಾಡಿದ್ದಾರೆ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top