ಶಿರಸಿ: ಶುಭ ಕಾರ್ಯಕ್ಕೆ ಸಾಗರದಿಂದ ಶಿರಸಿಗೆ ಹೊರಟಿದ್ದ ಟೆಂಪೋ ಮತ್ತು ಸಿದ್ದಾಪುರಕ್ಕೆ ಸಾಗುತ್ತಿದ್ದ ಗ್ರೆನೈಟ್ ತುಂಬಿದ ಅಶೋಕ್ ಲೈಲ್ಯಾಂಡ್ ಕಮರ್ಷಿಯಲ್ ಮಿನಿ ಗಾಡಿ ನಡುವೆ ತಾಲೂಕಿನ ಅಜ್ಜೀಬಳ ಸಮೀಪ ನಡೆದ ಮುಖಾಮುಖಿ ಅಪಘಾತದಲ್ಲಿ ಲೈಲ್ಯಾಂಡ್ ಗಾಡಿಯ ಡ್ರೈವರ್ ಇಸ್ಮಾಯಿಲ್ ಮೃತಪಟ್ಟಿದ್ದು, ಮದುವೆ ಟೆಂಪೋದಲ್ಲಿದ್ದ ಈರ್ವರಿಗೆ ಗಂಭೀರ ಗಾಯಗಳಾಗಿದ್ದು, ಹುಬ್ಬಳ್ಳಿಗೆ ಸಾಗಿಸಲಾಗಿದೆ. ಇನ್ನುಳಿದಂತೆ ಟೆಂಪೊದಲ್ಲಿದ್ದ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.
ಅಜ್ಜೀಬಳ ಸಮೀಪ ಭೀಕರ ಅಪಘಾತ; ಓರ್ವನ ಸಾವು, ಇನ್ನಿಬ್ಬರಿಗೆ ಗಂಭಿರ ಗಾಯ
