ಯಲ್ಲಾಪುರ: ಮಾನಸಿಕವಾಗಿ ನೊಂದಿದ್ದ ಲೇಡಿಯಾ ಕಾಮ್ರೇಕರ್ (18) ಎಂಬಾಕೆ ಮನೆಯ ಜಂತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮದನೂರು ಗ್ರಾಮದ ತಾವರೆಕಟ್ಟಾ ನಿವಾಸಿಯಾಗಿದ್ದ ಈಕೆ ಮಾವನ ಮನೆಗೆ ತೆರಳಿದ್ದಳು. ಅಲ್ಲಿಯೇ ಆಕೆ ಸಾವನಪ್ಪಿದ್ದಾಳೆ. ಈಕೆ ಸೀರೆಯಿಂದ ನೇಣು ಬಿಗಿದುಕೊಂಡದನ್ನು ಗಮನಿಸಿದ ಸ್ಥಳೀಯರು ತಕ್ಷಣ ಆಕೆಯನ್ನು ಇಳಿಸಿ ಆಸ್ಪತ್ರೆಗೆ ಕರೆತಂದರೂ ಜೀವ ಉಳಿಯಲಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
ನೇಣಿಗೆ ಶರಣಾದ ಯುವತಿ
