Slide
Slide
Slide
previous arrow
next arrow

ದಾಂಡೇಲಿಯ ಕೊಳಲುವಾದಕನಿಗೆ ಧಾರವಾಡದಲ್ಲಿ ಸನ್ಮಾನ

300x250 AD

ದಾಂಡೇಲಿ: ನಗರದ ಪ್ರತಿಭಾನ್ವಿತ ಕೊಳಲುವಾದಕ ಜೈತ್ ಸಿ.ಎಸ್. ಅವರಿಗೆ ಅವರ ಕಲಾ ಸಾಧನೆಯನ್ನು ಗುರುತಿಸಿ ಧಾರವಾಡದ ಶ್ರೀಮಾನಸಾ ಸಂಗೀತ ಅಕಾಡೆಮಿ ಹಾಗೂ ಅಕ್ಷತಾ ಡ್ಯಾನ್ಸ್ ಮತ್ತು ಕಲ್ಚರಲ್ ಅಕಾಡೆಮಿಯ ವತಿಯಿಂದ ಧಾರವಾಡದ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ನಡೆದ ಸಮಾರಂಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ನಗರದ ಸಂಗೀತ ಗುರು ಪಂ.ಚ0ದ್ರಶೇಖರ್ ಎಸ್. ಅವರ ಸುಪುತ್ರರಾಗಿರುವ ಜೈತ್ ಸಿ.ಎಸ್. ಅವರು ಈಗಾಗಲೆ ಸಾಕಷ್ಟು ಕಡೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿ ಗಮನ ಸೆಳೆದಿದ್ದಾರೆ. ಅಂತರ್ಜಾಲದ ಮೂಲಕ ಕೊಳಲು ತರಬೇತಿಯನ್ನು ನೀಡುತ್ತಿರುವ ಜೈತ್ ಸಿ.ಎಸ್. ಅವರಲ್ಲಿ ದೇಶ- ವಿದೇಶಗಳ ಶಿಬಿರಾರ್ಥಿಗಳು ತರಬೇತಿಯನ್ನು ಪಡೆದುಕೊಳ್ಳುತ್ತಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಬಡತನದ ಬೇಗೆಯಲ್ಲಿ ಬೆಳೆಯುತ್ತಿರುವ ಜೈತ್ ಸಿ.ಎಸ್. ಅವರ ಕಲಾಪ್ರತಿಭೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

300x250 AD
Share This
300x250 AD
300x250 AD
300x250 AD
Back to top