Slide
Slide
Slide
previous arrow
next arrow

ಭೀಮಣ್ಣ ಗೆಲುವು ಅಹಿಂದ ವರ್ಗಕ್ಕೆ ಸಂದ ಜಯ: ಟಿಕೆಎಂ ಆಜಾದ್

300x250 AD

ಸಿದ್ದಾಪುರ: ಅಹಿಂದ ವರ್ಗಗಳ ಜನಪ್ರಿಯ ನಾಯಕರಾದ ಭೀಮಣ್ಣ ಟಿ.ನಾಯಕರವರು ಶಿರಸಿ- ಸಿದ್ದಾಪುರ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವುದಕ್ಕೆ ಜಿಲ್ಲಾ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಟಿಕೆಎಂ ಆಜಾದ್ ಹರ್ಷ ವ್ಯಕ್ತಪಡಿಸಿದ್ದಾರೆ. ಭೀಮಣ್ಣ ಗೆಲುವು ಅಹಿಂದ ವರ್ಗಕ್ಕೆ ಸಂದ ಜಯ ಎಂದು ತಿಳಿಸಿದ್ದಾರೆ.
ನನ್ನ ತಂದೆಯವರಾದ ಕಾಂಗ್ರೆಸ್ ನಾಯಕ ಸಮಾಜವಾದಿ ದಿ.ಟಿ.ಕೆ.ಮಹಮೂದರವರು ತಮ್ಮ ಇಡೀ ಜೀವನವನ್ನು ಅಹಿಂದರ ಏಳಿಗೆಗಾಗಿ ಮುಡಿಪಾಗಿಟ್ಟು ಶ್ರಮಿಸಿದವರು. ಹಿಂದುಳಿದ ವರ್ಗಕ್ಕೆ ಸೇರಿದ ಭೀಮಣ್ಣ ಅವರು ತಮ್ಮ ಶಾಸಕತ್ವದಲ್ಲಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿ ಅಹಿಂದ ವರ್ಗಕ್ಕೆ ನ್ಯಾಯ ಸಲ್ಲಿಸುವಂತಾಗಲಿ ಎಂದು ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top