• Slide
  Slide
  Slide
  previous arrow
  next arrow
 • ಮೇ.18ಕ್ಕೆ ಕರಸುಳ್ಳಿ ಕೆರೆ ಲೋಕಾರ್ಪಣೆ

  300x250 AD

  ಶಿರಸಿ: ಜೀವಜಲ ಕಾರ್ಯಪಡೆಯಿಂದ ಪುನರುಜ್ಜೀವನಗೊಂಡ ತಾಲೂಕಿನ ಕರಸುಳ್ಳಿ ಕೆರೆ ಸಮರ್ಪಣಾ ನಾಮಫಲಕ ಅನಾವರಣ ಹಾಗೂ ನಾಗರಿಕ ಸಮ್ಮಾನ ಕಾರ್ಯಕ್ರಮವನ್ನು ಮೇ.18, ಗುರುವಾರ ಬೆಳಿಗ್ಗೆ 11 ಗಂಟೆಗೆ ಕರಸುಳ್ಳಿ ಕೆರೆ ಆವಾರದಲ್ಲಿ ಆಯೋಜಿಸಲಾಗಿದೆ.

  ಪುನರುಜ್ಜೀವನಗೊಂಡ 2ಎಕರೆ 3ಗುಂಟೆ ಕೆರೆಯನ್ನು ಖ್ಯಾತ ಚಲನಚಿತ್ರ ನಟ ಗೋಲ್ಡನ್ ಸ್ಟಾರ್ ಗಣೇಶ್ ಲೋಕಾರ್ಪಣೆಗೊಳಿಸಲಿದ್ದು,ಇದೇ ಸಂದರ್ಭದಲ್ಲಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ಹಾಗೂ ಶ್ರೀಮತಿ ಹೇಮಾ ಹೆಬ್ಬಾರ್ ದಂಪತಿಗಳಿಗೆ ನಾಗರಿಕ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

  ಹಿರಿಯ ಸಹಕಾರಿ ದೇವರು ಭಟ್ ಕರಸುಳ್ಳಿ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಸ್ತಾರ್ ಮೀಡಿಯಾ ಪ್ರೈ.ಲಿ. ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ ಅಭಿನಂದನಾ ನುಡಿಗಳನ್ನಾಡಲಿದ್ದು, ಅತಿಥಿಗಳಾಗಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ್, ವಿಸ್ತಾರ್ ಮೀಡಿಯಾ ಎಂ.ಡಿ. ಎಚ್.ವಿ. ಧರ್ಮೇಶ್,‌ಮೈಸೂರ್ ಮರ್ಚಂಟೈಲ್ ಕಂ. ಚೇರಮನ್ ಶ್ರೀನಿವಾಸ್ ಶೆಟ್ಟಿ,ಯಡಳ್ಳಿ ಗ್ರಾ.ಪಂ. ಸದಸ್ಯ ಕೇಶವ ಹೆಗಡೆ ಉಪಸ್ಥಿತರಿರಲಿದ್ದಾರೆ.

  300x250 AD

  ಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಬೇಕೆಂದು ಕರಸುಳ್ಳಿ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಕರಸುಳ್ಳಿ ಊರ ನಾಗರಿಕರು ಕೋರಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top