Slide
Slide
Slide
previous arrow
next arrow

ಎಸ್‌ಎಸ್‌ಎಲ್‌ಸಿ ಫಲಿತಾಂಶ: ಬಾಲಮಂದಿರ ಪ್ರೌಢಶಾಲೆಗೆ ಶೇ. 94.74

300x250 AD

ಕಾರವಾರ: ನಗರದ ಬಾಲಮಂದಿರ ಪ್ರೌಢಶಾಲೆಯು 2022- 23ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.94.74ರಷ್ಟು ಫಲಿತಾಂಶವನ್ನು ಸಾಧಿಸಿದೆ.
ಪ್ರಥಮ ದರ್ಜೆಯಲ್ಲಿ 47, ದ್ವಿತೀಯ ದರ್ಜೆಯಲ್ಲಿ 89, ತೃತೀಯ ದರ್ಜೆಯಲ್ಲಿ 8 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಶಿವಾನಿ ಎಸ್.ರಾಯ್ಕರ (99.36%), ತೇಜಸ್ವಿ ಐ.ತಾಂಡೇಲ್ (98.72%), ವಲ್ಲಭ ಆರ್.ಗಾಯತ್ರಿ (98.08%), ಶ್ರೀದತ್ತ ಆರ್.ಗಾಯತ್ರಿ (97.12%), ದಿಶಾ ಡಿ.ಶಾನಭಾಗ (96.64%), ಲೋಹಿತ ಆರ್.ಮೊಗೇರ (94.88%), ನಿಶಾ ಎನ್.ಶೇಟ್ (94.56%), ವಿಕಾಸ ಆರ್.ಕುರ್ಡೇಕರ (94.08%), ಮನಿಶಾ ಎಮ್.ನಾಗೇಕರ (93.92%) ಹಾಗೂ ನಾರಾಯಣ ಎಮ್.ನಾಯಕ (93.76%) ಅಂಕವನ್ನು ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಇವರ ಈ ಸಾಧನೆಗೆ ಕಾರವಾರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಸದಸ್ಯರು ಹಾಗೂ ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top