• Slide
    Slide
    Slide
    previous arrow
    next arrow
  • 30 ವರ್ಷದಿಂದ ಮತಗಟ್ಟೆಯಲ್ಲಿ‌ ಮೊದಲ ಮತದಾನ ಮಾಡುತ್ತಿರುವ ಮಿಟ್ಟು ಚಂಗಪ್ಪ

    300x250 AD

    ಮಡಿಕೇರಿ: ಇಲ್ಲಿನ ನಿವಾಸಿ, ಉದ್ಯಮಿ ಮಿಟ್ಟು ಚಂಗಪ್ಪ 30ನೇ ಬಾರಿಗೆ ಮೊದಲ ಮತದಾರನಾಗಿ ಮತ ಚಲಾಯಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ. ನಗರದ ಸಂತ ಮೈಕೆಲರ ಶಾಲೆಯ ಮತಗಟ್ಟೆಯಲ್ಲಿ ತಮ್ಮ 30ನೆಯ ಮೊದಲ ಮತವನ್ನು ಚಲಾಯಿಸುವುದರೊಂದಿಗೆ ಯುವಕರಿಗೂ ಮಾದರಿಯಾದರು.

    1962ರಲ್ಲಿ ಮೊದಲ ಮತ ಚಲಾಯಿಸಿದ್ದ ಮಿಟ್ಟು ಚಂಗಪ್ಪ ನಂತರ ಸತತ 30 ಚುನಾವಣೆಯಲ್ಲೂ ಮತಗಟ್ಟೆಯಲ್ಲಿ ಮೊದಲ ಮತದಾರರಾಗಿ ತಮ್ಮ ಹಕ್ಕು ಚಲಾಯಿಸಿದ್ದು ವಿಶೇಷ. ಬುಧವಾರ ಕೂಡಾ ಬೆಳಗ್ಗೆ 6:30ಕ್ಕೇ ಮತಗಟ್ಟೆ ಬಳಿ ಬಂದು 7 ಗಂಟೆಗೆ ಮತ ಕೇಂದ್ರ ತೆರೆಯುತ್ತಿದ್ದಂತೆ ತಮ್ಮ ಮತವನ್ನು ಪತ್ನಿಯೊಂದಿಗೆ ಚಲಾಯಿಸಿ ಸಂಭ್ರಮ ವ್ಯಕ್ತಪಡಿಸಿದರು. ಪ್ರತಿಯೊಬ್ಬರೂ ಕೂಡಾ ಮತ ಚಲಾಯಿಸಬೇಕು. ಅದು ಪ್ರತಿ ಭಾರತೀಯನ ಅಮೂಲ್ಯ ಹಕ್ಕು ಎಂದು ಮಿಟ್ಟು ಹೇಳಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top