ಯಲ್ಲಾಪುರ: ಕ್ಷೇತ್ರದಲ್ಲಿ ನಮ್ಮ ಪಕ್ಷದ ಪರವಾಗಿ ವಾತಾವರಣ ಇದೆ. ಯಲ್ಲಾಪುರದಲ್ಲಿ ಹೆಚ್ಚಿನ ಪ್ರೋತ್ಸಾಹ ಸಿಕ್ಕರೆ ನಾನು ಶಾಸಕನಾಗಿ ಆಯ್ಕೆಯಾಗುವುದು ನಿಶ್ಚಿತ. ಶಾಸಕನಾಗಿ ಆಯ್ಕೆಯಾದರೆ ರೈತರ ಹೊಲಗಳಿಗೆ ನೀರಾವರಿ ವ್ಯವಸ್ಥೆ, ನಿರುದ್ಯೋಗಿ ಯುವಕ ಯುವತಿಯರಿಗೆ ಸ್ಥಳದಲ್ಲಿಯೇ ಉದ್ಯೋಗ ಹಾಗೂ ಎಲ್ಲ ಹಳ್ಳಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಾಗಿ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಸಂತೋಷ ರಾಯ್ಕರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ನಾಮಪತ್ರ ಸಲ್ಲಿಸುವ 15 ದಿನಗಳ ಮೊದಲು, ಜೆಡಿಎಸ್ ಪಕ್ಷದಿಂದ ಟಿಕೆಟ್ ತಪ್ಪಿದಾಗ ಗಾಳಿ ಜನಾರ್ದನ ರೆಡ್ಡಿಯವರು ಕರೆದು ತಮ್ಮ ಪಕ್ಷದಿಂದ ಟಿಕೆಟ್ ನೀಡಿದರು. ಅವರು ಕೊಟ್ಟ ಜವಾಬ್ದಾರಿಯನ್ನು ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡಿ, ಅತೀ ಹೆಚ್ಚು ಮತ ಪಡೆದು ಗೌರವವನ್ನು ಉಳಿಸಿಕೊಳ್ಳುತ್ತೆನೆ. ಬನವಾಸಿ ಮತ್ತು ಮುಂಡಗೋಡ ಭಾಗದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿಯಾದ ನನಗೆ ವ್ಯಾಪಕವಾಗಿ ಜನ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೆಡಿಎಸ್ ಪಕ್ಷಕ್ಕಾಗಿ 14 ವಷÀð ಕೆಲಸ ಮಾಡಿದ ನನಗೆ ಟಿಕೆಟ್ ನೀಡದೇ ಕ್ಷೇತ್ರದವರಲ್ಲದ ವ್ಯಕ್ತಿಗೆ ಟಿಕೆಟ್ ನೀಡಿರುವ ಕುರಿತು ಬಹಳಷ್ಟು ಜನ ಅಸಮಾದಾನಗೊಂಡು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಮತ ಕೊಡಿಸುವ ಭರವಸೆ ನೀಡಿದ್ದಾರೆ ಎಂದರು.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಚುನಾವಣಾ ವೀಕ್ಷಕರಾದ ಆರ್.ಸಂದೇಶ ಮಾತನಾಡಿ, ಬನವಾಸಿ ಮುಂಡಗೋಡ ಭಾಗದಲ್ಲಿ ಪಕ್ಷದ ಸಂಘಟನೆ ಬಹಳಷ್ಟು ಚನ್ನಾಗಿದೆ. ನಮ್ಮ ಪಕ್ಷದ ಅಭ್ಯರ್ಥಿ ಸಂತೋಷ ರಾಯ್ಕರ್ ಅಭಿವೃದ್ಧಿ ಪರವಾದ ನಿಲುವನ್ನು ಹೊಂದಿದವರು, ಕ್ಷೇತ್ರದಾದ್ಯಂತ ನಮ್ಮ ಅಭ್ಯರ್ಥಿಯ ಪರವಾಗಿ ಗೌರವ ಹಾಗೂ ಒಳ್ಳೆಯ ಅಭಿಪ್ರಾಯ ಇದೆ. ಪಕ್ಷದಲ್ಲಿರುವ ಎಲ್ಲ ಮುಖಂಡರನ್ನು ಒಟ್ಟಿಗೆ ಸೇರಿಸಿಕೊಂಡು ಸಂಘಟನೆ ಮಾಡುತ್ತಿದ್ದಾರೆ. ಅಲ್ಲದೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗೆ ಹಲವು ಕಾರಣಗಳಿಗಾಗಿ ಸಂತೋಷ ರಾಯ್ಕರ್ ಅವರಿಗೆ ಮತದಾರರು ಮತ ನೀಡಲಿದ್ದಾರೆ. ಸಂತೋಷ್ ರಾಯ್ಕರ್ ಜೆಡಿಎಸ್ ಪಕ್ಷಕ್ಕೆ ತಾವೊಬ್ಬರೇ ರಾಜೀನಾಮೆ ಕೊಟ್ಟಿಲ್ಲ. ಮುಂಡಗೋಡ ಯಲ್ಲಾಪುರ ಜೆಡಿಎಸ್ ಪಕ್ಷದ ಪ್ರಮುಖರೊಂದಿಗೆ ನೂರಾರು ಜನ ಕಾರ್ಯಕರ್ತರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ. ಮತ್ತು ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದರು.
ಪ್ರಶ್ನೆಯೊ0ದಕ್ಕೆ ಉತ್ತರಿಸಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ರಾಜ್ಯ ಪ್ರಮುಖರು ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಕೆಲವು ಅನುವಾರ್ಯ ಕಾರಣಗಳಿಂದಾಗಿ ಪ್ರಚಾರಕ್ಕೆ ಬರುತ್ತಿಲ್ಲ, ಈ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರ ಮೇಲೆ ಅವರು ವಿಶ್ವಾಸ ವ್ಯಕ್ತಪಡಿಸಿ ಪ್ರಚಾರಕ್ಕೆ ಸಂಪೂರ್ಣ ಸ್ವತಂತ್ರವನ್ನು ನೀಡಿದ್ದಾರೆ ಎಂದು ಹೇಳಿದರು.
ಮುಂಡಗೋಡ ತಾಲೂಕಾ ಅಧ್ಯಕ್ಷ ತುಕಾರಾಮ ಗುಡಕರ್ ಮಾತನಾಡಿ, ನಾವೆಲ್ಲರು ಜೆಡಿಎಸ್ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ಕೊಟ್ಟು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಸೇರಿದ್ದೆವೆ. ನಾವು ಈ ಪಕ್ಷಕ್ಕೆ ಬಂದ ನಂತರ ಬೇರೆ ಗ್ರಾಮಗಳಲ್ಲಿ ಮುನ್ನುರಿಂದ ನಾಲ್ಕು ನೂರರಷ್ಟು ಜೆಡಿಎಸ್ ಕಾರ್ಯಕರ್ತರು ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಕಳೆದ 14 ವಷÀðದಿಂದ ಜೆಡಿಎಸ್ ಪಕ್ಷದಲ್ಲಿ ದುಡಿದ ಸಂತೋಷ್ ರಾಯ್ಕರ್ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ. ಹೀಗಾಗಿ ಸಾವಿರಾರು ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಈ ಕ್ಷೇತ್ರಕ್ಕೆ ಅಭಿವೃದ್ಧಿಪರ ಹೊಸ ಮುಖ ಬೇಕು ಎನ್ನುವ ಕಾರಣಕ್ಕಾಗಿ ಈ ಬಾರಿ ಸಂತೋಷ ರಾಯ್ಕರ್ ಆಯ್ಕೆಯಾಗಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪ್ರಮುಖರಾದ ರಾಕೇಶ ಕೆ.ಎಸ್., ತಾಲೂಕಾಧ್ಯಕ್ಷ ಅಝರ್ ಶೇಖ್, ಯುವ ಘಟಕದ ಅಧ್ಯಕ್ಷ ಮಂಜುನಾಥ ಮಳಗಿಕರ, ಪ್ರಮುಖರಾದ ಅಜಗರ್ ಶೇಖ್, ಇಸ್ಮಾಯಿಲ್ ಶೇಖ, ನಂದು ವೇರ್ಣೇಕರ, ಶೇಖರ ಕೊರವರ್, ಶೇಕಪ್ಪ ಕೊರವರ್, ಅಸಗರ್ ಅಲಿ ಮುಲ್ಲಾ, ದೀಪಾ ವೇರ್ಣೇಕರ, ಆಶಾ ರಾಯ್ಕರ್, ರೂಪಾ ಶೇಟ್, ಸುಶಾಂತ ವೇರ್ಣೇಕರ, ಜಿಲ್ಲಾ ಯುವ ಅಧ್ಯಕ್ಷೆ ದೀಪಾ ರೇವಣಕರ, ವಿಜಯಲಕ್ಷ್ಮೀ ವೇರ್ಣೇಕರ, ಆಶಾ ವೇರ್ಣೇಕರ, ಹೀನಾ ಅಝರ್ ಶೇಖ್ ಪತ್ರಿಕಾಗೋಷ್ಠಿಯಲ್ಲಿದ್ದರು.