Slide
Slide
Slide
previous arrow
next arrow

ಕಾರವಾರದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

300x250 AD

ಕಾರವಾರ: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ 109ನೇ ಸಂಸ್ಥಾಪನಾ ದಿನಾಚರಣೆಯನ್ನು ಸಾಹಿತ್ಯ ಪರಿಷತ್ತಿನ ತಾಲೂಕಾ ಘಟಕವು ನಗರದ ಕನ್ನಡ ಭವನದಲ್ಲಿ ಅತ್ಯಂತ ಸಡಗರದಿಂದ ಆಚರಿಸಿತು. ಆಗಮಿಸಿದ ಎಲ್ಲ ಸದಸ್ಯರಿಗೆ ಹಾಗೂ ಕನ್ನಡಾಭಿಮಾನಿಗಳಿಗೆ ಸಿಹಿ ತಿಂಡಿ ನೀಡಿ ಸಂಸ್ಥಾಪನಾ ದಿನದ ಶುಭಾಶಯ ಕೋರಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿಗಳು, ಸೈಂಟ್ ಮಿಲಾಗ್ರಿಸ್ ಸಹಕಾರಿ ಬ್ಯಾಂಕಿನ ಆಡಳಿತ ನಿರ್ದೇಶಕರೂ ಆದ ಜಾರ್ಜ ಫರ್ನಾಂಡಿಸ್ ಕನ್ನಡ ಸಾಹಿತ್ಯ ಪರಿಷತ್ತು ನಮ್ಮ ಹೆಮ್ಮೆಯ ಸಂಸ್ಥೆಯಾಗಿದ್ದು ಇಡೀ ದೇಶದಲ್ಲಿಯೇ ಅತ್ಯಂತ ಸುದೀರ್ಘ, ಶಸಕ್ತ ಮತ್ತು ಸುವ್ಯವಸ್ಥಿತವಾದ ಭಾಷಾ ಸಂಘಟನೆಯಾಗಿ ನಿಂತಿದೆ ಎಂದರು.

ಕ.ಸಾ.ಪ. ರಾಜ್ಯಾಧ್ಯಕ್ಷರಿಗೆ ಸರಕಾರ ಸಂಪುಟ ದರ್ಜೆ ಸಚಿವರ ಸ್ಥಾನಮಾನ ನೀಡಿದೆ. ಅದರ ಪ್ರಯೋಜನ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳವಣಿಗೆ ಹಾಗೂ ಕನ್ನಡದ ಅಭಿವೃದ್ಧಿಗೆ ಬಳಕೆಯಾಗಬೇಕು. ಕನ್ನಡಾಭಿಮಾನ, ಕನ್ನಡತನ ತಳಮಟ್ಟದಿಂದ ಬೆಳೆದು ಬರಬೇಕು. ಅದಕ್ಕೆ ಗ್ರಾಮ ಪಂಚಾಯತ ಮಟ್ಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಘಟಕ ಪ್ರಾರಂಭಿಸುವ ಕೆಲಸ ಕಾರವಾರದಿಂದಲೇ ಆರಂಭಿಸೋಣ ಎಂದರು.
ಕನ್ನಡದ ಅಸ್ಮಿತೆ – ಕನ್ನಡ ಸಾಹಿತ್ಯ ಪರಿಷತ್ತು ಎನ್ನುವ ವಿಷದ ಮೇಲೆ ಉಪನ್ಯಾಸ ನೀಡಿದ ಪ್ರಾಚಾರ್ಯ ಜಿ.ಡಿ.ಮನೋಜೆಯವರು ಕನ್ನಡದ ಇತಿಹಾಸ 2000 ವರ್ಷದ್ದಲ್ಲ ಹತ್ತು ಸಾವಿರ ವರ್ಷದ ಹಿಂದೇ ಕನ್ನಡ ಭಾಷೆ ಬಳಕೆಯಲ್ಲಿ ಇತ್ತು ಎನ್ನುವ ದಾಖಲೆ ಮೆಸೊಪೊಟೆಮಿಯಾ ಇಂದಿನ ಇರಾಕ್ ದೇಶದಲ್ಲಿನ ಸುಮೆರಿಯಾ ನಾಗರಿಕತೆಯ ಅಧ್ಯಯನದಲ್ಲಿ ಲಭ್ಯವಾಗುತ್ತದೆ ಎಂದರು.

300x250 AD

ಇ0ದಿನ ಅಭಿವೃದ್ಧಿಯ ನಾಗಾಲೋಟದಲ್ಲಿ ಮಾತೆ ಹಾಗೂ ಮಾತೃಭಾಷೆ ಎರಡೂ ಸೊರಗುತ್ತಿವೆ. ಆದರೂ ಕನ್ನಡವನ್ನು ಅಳಿಸಲು ಸಾಧ್ಯವಿಲ್ಲ. ಕನ್ನಡ ಎಂದೂ ನಿಂತ ನೀರಲ್ಲ ಅದು ಉಕ್ಕಿ ಹರಿಯುವ ಝರಿ ಎಂದರು. ಕನ್ನಡ ಭಾಷೆ ಬಹುರೂಪಿ, ಬಹುಮುಖಿಯಾಗಿದೆ. ಕನ್ನಡಕ್ಕೆ ಆಧ್ಯತೆಯ ಕೊರತೆ ಇದ್ದು ನಾವೆಲ್ಲ ಕನ್ನಡ ಭಾಷೆಯನ್ನು ಮಾತೆಯಂತೆ, ಮನೆಯ ಮಗನಂತೆ ಪ್ರೀತಿಸಿ ಆಧ್ಯತೆ ನೀಡಬೇಕಾಗಿದೆ ಎಂದರು.
ಕಲ್ಲೂರ ಎಜ್ಯುಕೇಶನ್ ಸೊಸೈಟಿಯ ಸಂಸ್ಥಾಪಕ ಇಬ್ರಾಹಿಮ್ ಕಲ್ಲೂರ ಕನ್ನಡ ಸಾಹಿತ್ಯ ಪರಿಷತ್ತು ಸರಕಾರಕ್ಕೆ ಸವಾಲು ಹಾಕುವ ಮಟ್ಟಕ್ಕೆ ಶಸಕ್ತವಾಗಿ ಬೆಳೆಯಬೇಕು. ಶಾಲೆಯತ್ತ ಸಾಹಿತ್ಯ ಪರಿಷತ್ತು ಕಾರ್ಯಕ್ರಮದಂತೆ ಗ್ರಾಮ ಪಂಚಾಯತಕ್ಕೊ0ದು ಸಾಹಿತ್ಯ ಪರಿಷತ್ತು ಘಟಕ ಎಂಬ ಕಾರ್ಯಕ್ರಮ ಹಾಕಿಕೊಳ್ಳೋಣ ಎಂದರು. ಮತ್ತೊಬ್ಬ ಮುಖ್ಯ ಅತಿಥಿ ಡಾ. ವಸಂತ ಬಾಂದೇಕರ ಮಾತನಾಡಿ ಭಾಷೆ ಏಕಾಂತದಲ್ಲಿ ಹುಟ್ಟುವುದಿಲ್ಲ ಭಾಷೆ ಹುಟ್ಟಿ ಬೆಳೆಯುವುದು ಸಮುದಾಯದಲ್ಲಿ, ಭಾಷೆ ಯಾವುದೇ ಇರಲಿ ಪ್ರತಿಯೊಬ್ಬರೂ ಮಾತೃಭಾಷೆಯನ್ನು ಗೌರವಿಸಬೇಕು. ಬಹುಮತಕ್ಕನುಗುಣವಾಗಿ ಸದುದ್ದೇಶದಿಂದ ಭಾಷಾವಾರು ಪ್ರಾಂತ ನಿರ್ಮಿಸಲಾಯಿತಾದರೂ ಕೆಲವರು ಅದನ್ನು ದುರುದ್ದೇಶಕ್ಕಾಗಿ ಬಳಸಿಕೊಂಡು ದೇಶದ ಏಕತೆಗೆ ಭಂಗವಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ವಿಷಾದಿಸಿದರು.

ಗ್ರಾಮ ಪಂಚಾಯತ್ ಮಟ್ಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಘಟಕ ಸ್ಥಾಪನೆಗೆ ಪರಿಷತ್ತು ಬದ್ಧವಾಗಿದ್ರೆ ಎಲ್ಲರ ಸಹಕಾರದಿಂದ ಅದನ್ನು ಕೈಗೆತ್ತಿಕೊಳ್ಳೋಣ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕ.ಸಾ.ಪ. ತಾಲೂಕಾ ಘಟಕದ ಅಧ್ಯಕ್ಷ ರಾಮಾ ನಾಯ್ಕ ಹೇಳಿದರಲ್ಲಿದೆ ಅನೇಕ ಕಾರ್ಯಕ್ರಮಗಳ ಒತ್ತಡದ ನಡುವೆಯೂ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ ಎಲ್ಲ ಸದಸ್ಯರಿಗೆ ಧನ್ಯವಾದ ಹೇಳಿದರು. ವಿದ್ಯಾ ನಾಯ್ಕ ಮತ್ತು ಸಂಗಡಿಗರ ನಾಡಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಗೌರವ ಕಾರ್ಯದರ್ಶಿ ಬಾಬು ಶೇಖ ಎಲ್ಲರನ್ನು ಸ್ವಾಗತಿಸಿದರು, ಖೈರುನ್ನಿಸಾ ಶೇಖ ಕಾರ್ಯಕ್ರಮ ನಿರ್ವಹಣೆ ಮಾಡಿದರು. ನಿವೇದಿತಾ ಕೋಳಂಬಕರ ವಂದಿಸಿದರು.

Share This
300x250 AD
300x250 AD
300x250 AD
Back to top