ಗೋಕರ್ಣ : ಇಲ್ಲಿಯ ಸಮೀಪದ ನಾಡುಮಾಸ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವ ಬಾವಿಕೊಡ್ಲ, ಹಾರುಮಾಸ್ಕೇರಿ, ನಾಡುಮಾಸ್ಕೇರಿ, ದುಬ್ಬನಸಸಿ, ಗಂಗಾವಳಿ ಗ್ರಾಮಗಳಿಗೆ ಬಿಜೆಪಿ ಅಭ್ಯರ್ಥಿ ಹಾಗೂ ಶಾಸಕ ದಿನಕರ ಶೆಟ್ಟಿ ಬೇಟಿನೀಡಿ ಮತಯಾಚನೆ ನಡೆಸಿದರು.
ಈ ವೇಳೆ ದಿನಕರ ಶೆಟ್ಟಿ ಮಾತನಾಡಿ, ನಾಡುಮಾಸ್ಕೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೇ 21 ಕೋಟಿ ರೂ. ವೆಚ್ಚದಲ್ಲಿ ಕಿತ್ತೂರು ಚೆನ್ನಮ್ಮ ವಸತಿ ಶಾಲೆ, ಹೊಸಹಿತ್ಲದಿಂದ ಜೋಗನಗುಡ್ಡ-ಗಂಗಾವಳಿವರೆಗೆ 3.50ಕೋಟಿ ರೂ ಅನುದಾನದಲ್ಲಿ ರಸ್ತೆ ನಿರ್ಮಾಣ, ಗಂಗೆಕೊಳ್ಳದಿAದ ಗಂಗಾವಳಿವರೆಗೆ 14 ಕೋಟಿ ರೂ. ವೆಚ್ಚದಲ್ಲಿ ಕಾರ್ಲೆಂಡ ನಿರ್ಮಾಣ, ಗಂಗೆಕೊಳ್ಳದಲ್ಲಿ ಸಮುದ್ರ ತಡೆಗೋಡೆ 10 ಕೋಟಿ ರೂ. ಅನುದಾನ ಹೀಗೆ ಸೇರಿದಂತೆ ಹತ್ತು-ಹಲವು ಕಡೆಗಳಲ್ಲಿ ಅಭಿವೃದ್ಧಿ ಕಾರ್ಯಮಾಡಿದ್ದಾರೆ. ಜನರು ನನ್ನನ್ನು ಮತ್ತೊಮ್ಮೆ ಆಯ್ಕೆ ಮಾಡಿದರೆ ಇನ್ನು ಹೆಚ್ಚಿನ ಅಭಿವೃದ್ಧಿ ಕಾರ್ಯ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಗೋವಾದ ವಾಸ್ಕೋ ಶಾಸಕ ಕೃಷ್ಣ ದಾಜಿ ಸಾಲ್ಕರ್, ಗೋಕರ್ಣ ಗ್ರಾ.ಪಂ.ಅಧ್ಯಕ್ಷ ಮಂಜುನಾಥ ಜನ್ನು, ನಾಡುಮಾಸ್ಕೇರಿ ಗ್ರಾ.ಪಂ ಅಧ್ಯಕ್ಷ ಧನಶ್ರೀ ಅಂಕೋಲೆಕರ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರಶೇಖರ ನಾಯ್ಕ, ಹನೇಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಭಾರತಿ ಗೌಡ, ಕುಮಟಾ ಪುರಸಭೆ ಸದಸ್ಯ ತುಳಸು ಗೌಡ, ಹಾಲಕ್ಕಿ ಸಮಾಜದ ಮುಖಂಡ ಗೋವಿಂದ ನಾಗಪ್ಪ ಗೌಡ, ಪ್ರಮುಖರಾದ ಸಣ್ಣು ಗೌಡ, ಚಂದ್ರಕಾಂತ ಶೆಟ್ಟಿ, ಗಣೇಶ ಪಂಡಿತ ಸೇರಿದಂತೆ ಹಲವರು ಉಪಸ್ಥಿತರಿದ್ದರು.