• Slide
    Slide
    Slide
    previous arrow
    next arrow
  • ಮೇ.14ಕ್ಕೆ ಬೃಹತ್ ಉದ್ಯೋಗ ಮೇಳ

    300x250 AD

    ಕಾರವಾರ: ಧಾರವಾಡದ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಟ್ರಸ್ಟ್ ಸಂಸ್ಥೆ, ಕರ್ನಾಟಕ ರಾಜ್ಯ ಖಾಸಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಸಮಿತಿ ವತಿಯಿಂದ 16ನೇ ರಾಜ್ಯ ಮಟ್ಟದ ಖಾಸಗಿ ಶಾಲಾ-ಕಾಲೇಜು ಶಿಕ್ಷಕರ ನೇಮಕಾತಿಗೆ ಬೃಹತ್ ಉದ್ಯೋಗ ಮೇಳ ಹಾಗೂ ಕೆಎಸ್‌ಓಯುನಲ್ಲಿ ಉನ್ನತ ಶಿಕ್ಷಣದ ಕನಸು ನನಸು ಉತ್ಸವ ಹಮ್ಮಿಕೊಳ್ಳಲಾಗಿದೆ.

    ಜಿಲ್ಲಾ ಪತ್ರಿಕಾ ಭವನದಲ್ಲಿ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಮಿತಿಯ ಅಧ್ಯಕ್ಷ ನಾಗರಾಜ ಎಚ್.ಎನ್., ಮೇ 14ರಂದು ಬೆಳಿಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ಧಾರವಾಡದ ಭಾರತ್ ಹೈಸ್ಕೂಲ್ ಶಿವಾಜಿ ಸರ್ಕಲ್ ಆವರಣದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ. ಶಿಕ್ಷಣ ಸಂಸ್ಥೆಯವರು ಮೇ.10 ರೊಳಗೆ ಧಾರವಾಡ ಕಾರ್ಯಾಲಯಕ್ಕೆ ನೇರವಾಗಿ ಭೇಟಿ ಮಾಡಿ, ಅಥವಾ ದೂರವಾಣಿ Tel:+919480062375, Tel:+919480043794 ಕ್ಕೆ ಸಂಪರ್ಕಿಸಿ ಅಗತ್ಯ ಮಾಹಿತಿಯೊಂದಿಗೆ ಹೆಸರು ನೊಂದಾಯಿಸಿಕೊಳ್ಳಬೇಕು. ಅಭ್ಯರ್ಥಿಗಳು ಮಾತ್ರ ನೇರವಾಗಿ ಮೇ 14 ರಂದು ಬೆಳಿಗ್ಗೆ 9 ರಿಂದ ಅಗತ್ಯ ದಾಖಲೆಗಳಿಗೆ ಸಂಬಂಧಿಸಿದ 4 ಝರಾಕ್ಸ್ ಪ್ರತಿಗಳು ಮತ್ತು ಇತ್ತೀಚಿನ 4 ಭಾವಚಿತ್ರಗಳೊಂದಿಗೆ ನೊಂದಾಯಿಸಿಕೊಳ್ಳಬೇಕು. ಅಭ್ಯರ್ಥಿಗಳು 3 ವಿದ್ಯಾಸಂಸ್ಥೆಗಳಿಗೆ ಮಾತ್ರ ಸಂದರ್ಶನ ನೀಡಬಹುದು. ಜತೆಗೆ ಒಂದು ಸಂಸ್ಥೆ ಸಂಸ್ಥೆಯಲ್ಲಿ ಮಾತ್ರ ನೇಮಕವಾಗಬೇಕು ಎಂದರು.
    ಉತ್ತರ-ಕರ್ನಾಟಕದ ವಿವಿಧ ಖಾಸಗಿ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ, ಪದವಿ, ಸ್ನಾತಕೋತ್ತರ ಪದವಿ ಹಂತದ ಶಾಲಾ-ಕಾಲೇಜುಗಳಲ್ಲಿ ಮುಖ್ಯೋಪಾಧ್ಯಾಯರು, ಉಪನ್ಯಾಸಕರು, ಸಹಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿಯ 2200ಕ್ಕೂ ಹೆಚ್ಚು ಖಾಲಿ ಹುದ್ದೆಗಳು ಖಾಲಿ ಇವೆ. 7ನೇ ತರಗತಿ, ಎಸ್‌ಎಸ್‌ಎಲ್‌ಸಿಯಿಂದ ಹಿಡಿದು ಎನ್‌ಟಿಸಿ, ಓಸಿಎಚ್, ಡಿಇಡಿ, ಬಿಇಡಿ, ಸಿಪಿಇಡಿ, ಬಿಪಿಇಡಿ, ಎಂಪಿಇಡಿ, ಟಿಇಟಿ, ಬಿಎ, ಬಿಎಸ್‌ಸಿ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top