Slide
Slide
Slide
previous arrow
next arrow

ವೃತ್ತಿಯಿಂದ ನಿವೃತ್ತಿಯಾದರೂ, ಪ್ರವೃತ್ತಿಯಿಂದ ನಿವೃತ್ತರಾಗಬಾರದು: ಜಗದೀಶ ಹೊಸ್ಕೇರಿ

300x250 AD

ಅಂಕೋಲಾ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಗ್ರೆಯಲ್ಲಿ ವಯೋನಿವೃತ್ತಿ ಹೊಂದಲಿರುವ ಪುಷ್ಪಾ ನಾಯಕರವರನ್ನು ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಗೌರವಪೂರ್ಣವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಸನ್ಮಾನಿಸಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ, ಸಂಘದ ಸದಸ್ಯನೊಬ್ಬ ವಯೋನಿವೃತ್ತಿ ಹೊಂದಿದಾಗ ಅವರನ್ನು ಗೌರವಯುತವಾಗಿ ಬೀಳ್ಕೊಡುವುದು ಸಂಘದ ಆದ್ಯ ಕರ್ತವ್ಯವಾಗಿದೆ. ನಿವೃತ್ತಿ ಹೊಂದುತ್ತಿರುವ ಶಿಕ್ಷಕರು ಈ ಬಗ್ಗೆ ಅಭಿಮಾನ ಪಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದ್ದು, ಪುಷ್ಪಾ ನಾಯಕರವರು ಸ್ಮರಣೀಯ ಸೇವೆ ಸಲ್ಲಿಸಿ ವಯೋ ನಿವೃತ್ತಿಯನ್ನು ಹೊಂದಿದ್ದು, ವೃತ್ತಿಯಿಂದ ನಿವೃತ್ತರಾದರೂ ಪ್ರವೃತ್ತಿಯಿಂದ ನಿವೃತ್ತಿಯಾಗದೆ ಜೀವನೋತ್ಸಾಹದಿಂದ ಮುನ್ನಡೆಯಬೇಕೆಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪುಷ್ಪಾ ಎಲ್.ನಾಯಕರವರು ಸಂಘ ಮನೆಯಂಗಳಕ್ಕೆ ಬಂದು ಪ್ರೀತಿ ಅಭಿಮಾನದಿಂದ ಗೌರವಿಸಿ ಬೀಳ್ಕೊಡುತ್ತಿರುವುದು ಸಂತಸವನ್ನು ತಂದಿದೆ. ಸಂಘದ ಈ ಕಾರ್ಯ ಸರ್ವತ್ರ ಶ್ಲಾಘನೀಯವಾಗಿದ್ದು, ಇದು ನಿರಂತರವಾಗಿ ಮುಂದುವರಿಯಬೇಕೆಂದರು.

300x250 AD

ಸಂಘದ ಪ್ರಧಾನ ಕಾರ್ಯದರ್ಶಿ ರಾಜು ಎಚ್. ನಾಯಕ ಸ್ವಾಗತಿಸಿದರು. ಲಕ್ಷ್ಮೀ ನಾಯಕ ವಂದಿಸಿದರು. ಸಂಘದ ಪದಾಧಿಕಾರಿಗಳಾದ ದಿವಾಕರ ದೇವನಮನೆ, ಆನಂದು ವಿ. ನಾಯಕ, ಶೋಭಾ ಎಸ್. ನಾಯಕ, ವೆಂಕಮ್ಮ ನಾಯಕ, ಶಿಕ್ಷಕರಾದ ಸಿ.ಡಿ.ಗಾಂವಕರ, ಸುವರ್ಣ ನಾಯಕ ಉಪಸ್ಥಿತರಿದ್ದರು. ಬಿ.ಎಸ್. ನಾಯ್ಕ, ವಿನಾಯಕ, ವಿನಯ, ವಿನುತ, ಮಂಜು ಸಹಕರಿಸಿದರು,

Share This
300x250 AD
300x250 AD
300x250 AD
Back to top