• Slide
    Slide
    Slide
    previous arrow
    next arrow
  • ಧರೆ ಕುಸಿದು ಮಣ್ಣಿನಡಿ ಸಿಲುಕಿದ್ದ ಮೂವರ ರಕ್ಷಣೆ

    300x250 AD

    ಶಿರಸಿ: ತಾಲೂಕಿನ ಇಸಳೂರು ಬಪ್ಪನಳ್ಳಿಯಲ್ಲಿ ಜೆಸಿಬಿ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಧರೆ ಜರಿದು ಮಣ್ಣಿನಡಿ ಸಿಲುಕಿದ್ದ ಮೂವರನ್ನು ಅಗ್ನಿಶಾಮಕ ಸಿಬ್ಬಂದಿ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

    ರಾಘವೇಂದ್ರ ಗೋಪಾಲ ನಾಯ್ಕ, ಹನುಮಂತ ರಾಜಪ್ಪ ಹರಿಜನ, ಇಮ್ರಾನ್ ಖಾನ್ ಎಂಬುವವರು ಮಣ್ಣಿನಡಿಯಲ್ಲಿ ಸಿಲುಕಿದ್ದು ಸಂದರ್ಭದಲ್ಲಿ ಸ್ಥಳೀಯ ರಮೇಶ ನಾಯ್ಕ ಎಂಬುವವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದರು.

    300x250 AD

    ವಿಷಯ ತಿಳಿದ ಕ್ಷಣಮಾತ್ರದಲ್ಲಿ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ತಂಡವು ವಿನಾಯಕ ಗೌಡ ನೇತೃತ್ವದಲ್ಲಿ ಚಾಲಕರಾದ ರಮೇಶ ಜಂಬಗಿ, ಸಾತೀತಪ್ಪ, ಸಿಬ್ಬಂದಿ ದುಂಡಪ್ಪ, ಈರಣ್ಣ ಜುಬೇರ್ ಮುಲ್ಲಾ, ಕೃಷ್ಣ ನಾಯಿಕ, ತಂತ್ರಜ್ಞ ಪ್ರವೀಣ ಅವರು ಮೂವರನ್ನು ಹೊರ ತೆಗೆದು ಅಂಬುಲೆನ್ಸ್ ಸಹಾಯದಿಂದ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top