ಭಟ್ಕಳ: ಶಾಸಕ ಸುನೀಲ ನಾಯ್ಕ ದುರ್ವರ್ತನೆಗೆ ಬೇಸತ್ತ ಮೂಲ ಬಿಜೆಪಿಯ ಯುವಕರು ತಂಡೋಪತಂಡವಾಗಿ, ಯಾವುದೇ ಆಡಂಬರ, ಅದ್ಧೂರಿಯ ಪ್ರಚಾರ ಇಲ್ಲದೆ ಕಾಂಗ್ರೆಸ್ ಪಕ್ಷಕ್ಕೆ ಬರುತ್ತಿದ್ದು, ಇದು ನನಗೆ ಆನೆ ಬಲ ಬಂದಂತಾಗಿದೆ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಹೇಳಿದರು.
ಅವರು ಸೋನಾರಕೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಭಟ್ಕಳದ ಇತಿಹಾಸದಲ್ಲಿ ಸೊನಾರಕೇರಿಯಲ್ಲಿ ಇಂದಿನವರೆಗೂ ಕಾಂಗ್ರೆಸ್ ಸಭೆ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ ಇಂದು ಇಲ್ಲಿನ ಜನರು ಶಾಸಕ ಸುನೀಲ ನಾಯ್ಕರ ದುರ್ವರ್ತನೆಯಿಂದ ಬೇಸತ್ತಿದ್ದು ಸ್ಪಷ್ಟವಾಗಿದೆ. ಹಾಗಾಗಿ ಇಂದು ಮೊದಲ ಬಾರಿಗೆ ಸೋನಾರಕೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯುವಂತಾಗಿದೆ. ಹೋದಲ್ಲೆಲ್ಲಾ ಉತ್ತಮ ಜನಭಿಪ್ರಾಯ ವ್ಯಕ್ತವಾಗುತ್ತಿದೆ. ಹಿಂದಿನ ಬಾರಿಯೂ 1500 ಕೋಟಿಗೂ ಹೆಚ್ಚಿನ ಅನುದಾನ ತಂದು ಅಬಿವೃದ್ಧಿಗೆ ಅಡಿಪಾಯ ಹಾಕಿದ್ದೆ. ಆದರೆ ಈ ಬಾರಿ ಇನ್ನು ಹೆಚ್ಚಿನ ಅಭಿವೃದ್ಧಿಗೆ ನಾಂದಿ ಹಾಡಲು ಸಂಪೂರ್ಣವಾಗಿ ನನಗೆ ಬೆಂಬಲ ನೀಡಬೇಕು ಎಂದು ದೈವಜ್ಞ ಸಮುದಾಯದ ಜನರ ಪ್ರೀತಿ ಕಂಡು ಭಾವುಕರಾಗಿ ಅವರು ನುಡಿದರು.
ಬಿಜೆಪಿಯ ಯುವ ಮುಖಂಡರು ಮಂಕಾಳ ವೈದ್ಯರ ಜನಪ್ರಿಯತೆ, ವ್ಯಕ್ತಿತ್ವಕ್ಕೆ ಮಾರುಹೋಗಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ನಗರಾಧ್ಯಕ್ಷ ಸುಧಾ ನಾಯ್ಕ ನೇತೃತ್ವದಲ್ಲಿ ಬಿಜೆಪಿ ನಗರಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ದೈವಜ್ಞ ಸಮಾಜದ ಮುಖಂಡ ಸಂದೀಪ ಶೇಟ್, ಶಕ್ತಿ ಕೇಂದ್ರದ ಅದ್ಯಕ್ಷ ಕುಮಾರ ನಾಯ್ಕ ಕೋಣಿಮನೆ, ಬಿಜೆಪಿ ಯುವ ಮುಖಂಡ, ಹಿಂದೂ ಹೋರಾಟಗಾರ ತಿಮ್ಮಪ್ಪ ನಾಯ್ಕ, ಶಾಸಕರ ಬಣದಲ್ಲಿ ಗುರುತಿಸಿಕೊಂಡ ಮಣ್ಕುಳಿ ಭಾಗದ ಬಿಜೆಪಿಯ ಪ್ರಭಾವಶಾಲಿ ಮುಖಂಡ ಹರೀಶ ನಾಯ್ಕ, ಡಿಪಿ ಕಾಲನಿಯುವ ಮುಖಂಡ ಸಚಿನ ನಾಯ್ಕ, ಲಕ್ಷ್ಮೀಶ ನಾಯ್ಕ ಸೇರಿದಂತೆ ನೂರಾರು ಸಂಖ್ಯೆಯ ಬಿಜೆಪಿ ಪಾಳಯದಲ್ಲಿ ಮಹತ್ತರ ಹುದ್ದೆ, ಜವಾಬ್ದಾರಿ ನಿಭಾಯಿಸಿದ್ದ ಯುವಕರ ತಂಡ ಮಾಜಿ ಶಾಸಕ ಮಂಕಾಳ ವೈದ್ಯರ ಬೆಂಬಲಕ್ಕೆ ನಿಂತಿದೆ.