• Slide
    Slide
    Slide
    previous arrow
    next arrow
  • ಗಣೇಶನಗರ ಪ್ರೌಢಶಾಲೆ ಶಿಕ್ಷಕ ಸುರೇಶ ಹೆಗಡೆ ನಿವೃತ್ತಿ: ಬೀಳ್ಕೊಡುಗೆ

    300x250 AD

    ಶಿರಸಿ: ಇಲ್ಲಿನ ಸರಕಾರಿ ಪ್ರೌಢಶಾಲೆ ಗಣೇಶನಗರದಲ್ಲಿ ಆಂಗ್ಲಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಸುರೇಶ.ಎಸ್.ಹೆಗಡೆ ಏ.30 ರಂದು ಸೇವೆಯಿಂದ ನಿವೃತ್ತರಾಗಿದ್ದಾರೆ. ಈ ನಿಮಿತ್ತ ಮುಖ್ಯಾಧ್ಯಾಪಕ ಆರ್.ಜಿ.ಪಟಗಾರ ಅಧ್ಯಕ್ಷತೆಯಲ್ಲಿ ದಂಪತಿ ಸಮೇತ ಶಾಲಾವತಿಯಿಂದ ಗೌರವಯುತವಾಗಿ ಸತ್ಕರಿಸಿ ಸನ್ಮಾನಿಸಲಾಯಿತು.

    ನಿವೃತ್ತ ಶಿಕ್ಷಕ ಸುರೇಶ.ಎಸ್.ಹೆಗಡೆ ಅಗಸಾಲ ಬೊಮ್ನಳ್ಳಿ ಕಿಬ್ಬಳ್ಳಿಯ ಊರಿನವರಾಗಿದ್ದು, ಆ. 24,1993 ರಲ್ಲಿ ತಾಲ್ಲೂಕಿನ ಕಾಶ್ಮೀರ ಎಂದೇ ಕರೆಸಲ್ಪಡುವ ಮೂಲ ಸೌಕರ್ಯದ ಕೊರತೆಯಿರುವ ಕಾಡಡವಿಯ ಊರಾದ ಧೋರಣಗಿಯ ಹಿರಿಯ ಪ್ರಾಥಮಿಕ ಶಾಲೆಗೆ ಶಿಕ್ಷಕನಾಗಿ ಅಂದಿನ ದಿನಗಳಲ್ಲಿ ಸಲ್ಲಿಸಿದ ಸೇವೆಯನ್ನು ಅಲ್ಲಿನ ಜನತೆ ಇಂದಿಗೂ ಸ್ಮರಿಸುತ್ತಿರುವುದು ಅವರ ಉತ್ತಮ ಆದರ್ಶದ ಕಾರ್ಯವೈಖರಿಗೆ ಸಾಕ್ಷಿಭೂತವಾಗಿದೆ. ನಂತರದಲ್ಲಿ ಹಿರಿಯ ಪ್ರಾಥಮಿಕ ಶಾಲೆ ಕೆಂಚನಗದ್ದೆ, ಹಿರಿಯ ಪ್ರಾಥಮಿಕ ಶಾಲೆ ಮಾದನಕೇರಿ ಮುಂತಾದವುಗಳಲ್ಲಿ ಉತ್ತಮ ಸೇವೆ ಸಲ್ಲಿಸಿ ಜನಜನಿತ ಶಿಕ್ಷಕರಾಗಿದ್ದರು. ಅಲ್ಲದೇ ಬಿ.ಆರ್.ಪಿ. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಾಕಷ್ಟು ತರಬೇತಿ ನೀಡಿದ್ದಾರೆ. 2008ರಲ್ಲಿ ಆಂಗ್ಲ ಭಾಷಾ ಶಿಕ್ಷಕನಾಗಿ ಭಡ್ತಿ ಹೊಂದಿ ಸರಕಾರಿ ಪ್ರೌಢಶಾಲೆ ಭಾಶಿಯಲ್ಲಿ ಮತ್ತು ಸರಕಾರಿ ಪ್ರೌಢಶಾಲೆ ಬೀಳೂರಿನಲ್ಲಿ ಸೇವೆ ಸಲ್ಲಿಸಿ,ಈಗ 05 ವರ್ಷಗಳಿಂದ ಗಣೇಶನಗರ ಪ್ರೌಢಶಾಲೆಯಲ್ಲಿ ಶಾಲೆಯ ಏಳ್ಗೆಗಾಗಿ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ. ಇವರು ರಾಜ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಹಲವಾರು ತರಬೇತಿಗಳಲ್ಲಿ ಪಾಲ್ಗೊಂಡಿದ್ದಾರೆ.

    ಇವರ ಅಪೂರ್ವ ಸೇವೆಯನ್ನು ಸ್ಮರಿಸಿ ವಿದ್ಯಾರ್ಥಿವೃಂದದವರೂ ಗೌರವಿಸಿದರು. ರೇಣುಕಾ ಬಾಳೆಹೊಸೂರು ಸ್ವಾಗತಿಸಿದರು. ಕೆ.ಎಲ್.ಭಟ್ಟ ಪ್ರಾಸ್ತಾವಿಕತೆಯೊಂದಿಗೆ ಸನ್ಮಾನದ ಭಿನ್ನವತ್ತಳೆ ವಾಚಿಸಿದರು. ಗೀತಾ ಗೌಡ ವಂದಿಸಿದರು.ಪ್ರಸನ್ನ ಶೆಟ್ಟಿ ವಾಚಿಸಿದರು.

    300x250 AD

    ಸನ್ಮಾನ ಸ್ವೀಕರಿಸಿದ ಸುರೇಶ ಹೆಗಡೆ ಇಲ್ಲಿಯವರೆಗೆ ಸಹಕರಿಸಿದ ಇಲಾಖೆಯ ಎಲ್ಲರನ್ನು ಸ್ಮರಿಸುತ್ತಾ, ತನ್ನಿಂದ ಕಲಿತ ಸಾಕಷ್ಟು ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿರುವುದು ನನ್ನ ಬೋಧನೆಯ ಸಾರ್ಥಕತೆ ಬಗ್ಗೆ ಹೆಮ್ಮೆ ಮೂಡುತ್ತದೆ ಜೊತೆಗೆ ವೃತಿಯುದ್ದಕ್ಕೂ ಮಡದಿ ವಸುಮತಿಯವರ ಸಹಕಾರದ ಬಗ್ಗೆ ಸ್ಮರಿಸುತ್ತಾ ಮಾತನ್ನಾಡಿದರು.

    ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕ ಆರ್.ಜಿ.ಪಟಗಾರ ಆದರ್ಶ ಶಿಕ್ಷಕರ ನಿವೃತ್ತಿಯ ದಿನಗಳು ಶುಭದಾಯಕವಾಗಿರಲಿ ಎಂದು ಹಾರೈಸಿ ಮಾತನ್ನಾಡಿದರು. ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದಲ್ಲಿ ಇನ್ಸ್ಪಾಯರ್ ಅವಾರ್ಡಿನಲ್ಲಿ ಸಾಧನೆಗೈದು ರಾಷ್ಟ್ರಪತಿಗಳಿಂದ ಅಭಿನಂದಿಸಲ್ಪಟ್ಟ ವಿದ್ಯಾರ್ಥಿನಿ ಧನ್ಯಾ ಆಚಾರಿ ಮತ್ತು ಮಾರ್ಗದರ್ಶಿ ಶಿಕ್ಷಕ ಕೆ.ಎಲ್.ಭಟ್ಟರವರನ್ನು ಸತ್ಕರಿಸಲಾಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top