• Slide
    Slide
    Slide
    previous arrow
    next arrow
  • ಸ್ಕೌಟ್ಸ್, ಗೈಡ್ಸ್ ಬೇಸಿಗೆ ಶಿಬಿರ ಮುಕ್ತಾಯ

    300x250 AD

    ಶಿರಸಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಶಿರಸಿ ಶೈಕ್ಷಣಿಕ ಜಿಲ್ಲಾ ಸಂಸ್ಥೆಯಿಂದ ಶ್ರೀಮಹಾಗಣಪತಿ ದೇವಸ್ಥಾನದ ಆವರಣದಲ್ಲಿ 5 ದಿನಗಳ ಕಾಲ ಆಯೋಜಿಸಿದ್ದ ಉಚಿತ ಬೇಸಿಗೆ ಶಿಬಿರವು ಕೊನೆಗೊಂಡಿತು.

    ಈ ಬೇಸಿಗೆ ಶಿಬಿರದಲ್ಲಿ ಯೋಗ, ಪ್ರಾಣಯಾಮ, ಯೋಗಸಾನದ ಚಿಕಿತ್ಸೆಗಳು, ಲಾಭಗಳು ಪ್ರಶಾಂತ ಭಟ್, ಚಿತ್ರಕಲೆ ಸತೀಶ ಹೆಗಡೆ ಹಾಗೂ ಜಿ.ಎಮ್.ಹೆಗಡೆ ಬೊಮ್ಮನಹಳ್ಳಿ, ಕರಕುಶಲ ತರಬೇತಿ ಅಂಜನಾ ಹೆಗಡೆ, ಆತ್ಮ ರಕ್ಷಣೆಯ ಕೌಶಲ್ಯಗಳು (ಕರಾಟೆ) ಆನಂದ ನಾಯ್ಕ, ಮನೆಮದ್ದು ವಿನಾಯಕ ಹೆಬ್ಬಾರ, ಔಷಧಿ ಸಸ್ಯಗಳು ಉಮಾಪತಿ ಭಟ್, ಇವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಿದರು. ಮತ್ತು ಶುದ್ದ ಬರವಣೆಗೆ, ಏಕತೆಯ ಹಾಡುಗಳು, ಲಘು ಮನರಂಜನೆಯ ಆಟಗಳು ಕಲಿಸಲಾಯಿತು.

    ಈ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಮುಖ್ಯ ಆಯುಕ್ತ ಎಮ್.ಎಮ್.ಭಟ್, ಬೇಸಿಗೆ ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಶಸ್ತಿಯನ್ನು ವಿತರಸಿ ಶಿಬಿರದಲ್ಲಿ ಕಲಿಸಿದ ಕೌಶಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.

    300x250 AD

    ಸ್ಕೌಟ್ಸ್ ಜಿಲ್ಲಾ ಆಯುಕ್ತ ವಿ.ಎಚ್ ಭಟ್ಕಳ ಮಾತನಾಡಿ. ಇಂತಹ ಬೇಸಿಗೆ ಶಿಬಿರಗಳು ಮಕ್ಕಳಿಗೆ ಜೀವನ ಮೌಲ್ಯಗಳನ್ನು ತಿಳಿಸಿಕೊಡುತ್ತವೆ ಎಂದು ಹೇಳಿದರು. 6ನೇ ತರಗತಿಯ ಯಜ್ಞಾ ಹೆಗಡೆ ಇವರು ಈ ಬೇಸಿಗೆ ಶಿಬಿರವು ತುಂಬಾ ಉಪಯುಕ್ತಕಾರಿಯಾಗಿದ್ದು ಹಾಗೂ ಹಲವಾರು ಕೌಶಲ್ಯಗಳನ್ನು ತಿಳಿದುಕೊಂಡೆವು ಎಂದು ಶಿಬಿರದ ಕುರಿತು ತಮ್ಮ ಅನಿಸಿಕೆಯನ್ನು ತಿಳಿಸಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಖಜಾಂಚಿ ಹರ್ಷಪ್ರಭು, ಉಪನ್ಯಾಸಕ ಎಸ್.ಪಿ ಪಾಟೀಲ ಹಾಗೂ ಶಿಬಿರಾರ್ಥಿಗಳ ಪಾಲಕರು, ಪೋಷಕರು ಉಪಸ್ಥಿತರಿದ್ದರು. ದೀಕ್ಷಾ ನಿರೂಪಿಸಿದರು. ಜಿಲ್ಲಾ ಕಾರ್ಯದರ್ಶಿ ಪಿ.ಎನ್.ನಾಯ್ಕ ಎಲ್ಲರನ್ನೂ ಸ್ವಾಗತಿಸಿದರು. ಸಹಾಯಕ ರಾಜ್ಯ ಸಂಘಟನಾ ಆಯುಕ್ತ ವೀರೇಶ ಮಾದರ ಎಲ್ಲರಿಗೂ ವಂದನೆಗಳನ್ನ ತಿಳಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top