Slide
Slide
Slide
previous arrow
next arrow

ಸರ್ಕಾರದ ಹಸ್ತಕ್ಷೇಪದಿಂದ ಸಹಕಾರಿ ವ್ಯವಸ್ಥೆ ಶಿಥಿಲ: ಭೀಮಣ್ಣ ನಾಯ್ಕ್

300x250 AD

ಶಿರಸಿ: ನಗರದ ಎಪಿಎಂಸಿ ಯಾರ್ಡನಲ್ಲಿ ಅಡಿಕೆ ಬೆಳೆಗಾರರ ಸಂಸ್ಥೆಯಾದ ಶತಮಾನದ ಸಂಭ್ರಮದಲ್ಲಿನ ಟಿಎಸ್‌ಎಸ್, ಕೆಡಿಸಿಸಿ ಬ್ಯಾಂಕ್, ಟಿಆರ್‌ಸಿ, ಶಿರಸಿ- ಸಿದ್ದಾಪುರ ಟಿಎಂಎಸ್, ಕದಂಬ ಸಂಸ್ಥೆಗಳು, ಅಡಿಕೆ ವರ್ತಕರ ಸಂಘಟನೆ, ವಖಾರಿಗಳಿಗೆ, ಸೂಪರ್ ಮಾರುಕಟ್ಟೆಗಳಲ್ಲಿ ಖರೀದಿಗೆ ಆಗಮಿಸಿದ ಗ್ರಾಹಕರಲ್ಲಿ ಶಿರಸಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಮತದಾನಕ್ಕೆ ಮನವಿ ಮಾಡಿ ಕರಪತ್ರ ನೀಡಿದರು

ಈ ವೇಳೆ ಮಾತನಾಡಿದ ಅವರು,ಸರಕಾರದಿಂದ ಕಳೆದ ನಾಲ್ಕೈದು ವರ್ಷದಿಂದ ವಿವಿಧ ಕಾನೂನು ಹೆಸರಿನಲ್ಲಿ ಹಸ್ತಕ್ಷೇಪ ಆಗುತ್ತಿದೆ. ಇದರಿಂದ ಸಹಕಾರಿ ವ್ಯವಸ್ಥೆ ಶಿಥಿಲವಾಗುತ್ತದೆ. ಈ ಅಪಾಯದಿಂದ ಸಹಕಾರಿ ಕ್ಷೇತ್ರವನ್ನು ಹೊರಗೆ ತರಲು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ ಎಂದು ಹೇಳಿದರು.

300x250 AD

ಈಚೆಗಿನ ವರ್ಷದಲ್ಲಿ ಬಿಜೆಪಿ ಸರಕಾರ ಸಹಕಾರಿ ವ್ಯವಸ್ಥೆ ದುರ್ಬಲಗೊಳಿಸುತ್ತಿದೆ. ಅನೇಕ ಕಾನೂನು ಹೆಸರಿನಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಸಹಕಾರಿ ಚಳುವಳಿಯು ನಡೆದ ಭದ್ರ ಜಿಲ್ಲೆ ಉತ್ತರ ಕನ್ನಡ. ಇಲ್ಲಿ ಬ್ಯಾಂಕ್ ಸೌಲಭ್ಯ ಇಲ್ಲದಾಗ ಸಹಕಾರಿ ಸಂಸ್ಥೆಗಳು ರೈತರಿಗೆ ಹಣಕಾಸು ಒದಗಿಸಿದವು. ಸಾಲವನ್ನೂ ನೀಡಿದವು. ರೈತರಿಗೆ ಅಗತ್ಯವಾದ ಕೃಷಿ ಉಪಕರಣ, ಗೊಬ್ಬರ ಎಲ್ಲ ನೀಡಿದವು. ಕಳೆದ ಶತಮಾನದಿಂದ ರೈತರ ಕಷÀ್ಟಕ್ಕೆ ಸ್ಪಂದಿಸಿದ ವ್ಯವಸ್ಥೆ ಇದು. ಇಲ್ಲಿನ ಸಹಕಾರಿ ಚಳುವಳಿ ನೋಡಲು ಇಡೀ ದೇಶದಿಂದ ಸಹಕಾರಿಗಳು ಬರುವದು ನಮಗೂ ಹೆಮ್ಮೆ ಎಂದು ಸುಂದರಾವ್ ಪಂಡಿತ್, ಕೇಶವೈನ್ ಕಡವೆ ಎಸ್.ಆರ್.ಹೆಗಡೆ, ಡಾ.ವಿ.ಎಸ್.ಸೋಂದೆ ಅವರ ಸಹಿತ ಎಲ್ಲ ಸಹಕಾರಿ ಸಾಧಕರ ಕೊಡುಗೆ ಇದೆ ಎಂದು ಬಣ್ಣಿಸಿದರು.
ಹಿರಿಯ, ಕಿರಿಯ ಸಹಕಾರಿಗಳಿಂದ ಈ ವ್ಯವಸ್ಥೆ ಚೆನ್ನಾಗಿದ್ದಾಗ ಅನೇಕ ತೊಡಕಿನ ಕಾನೂನು ಸರಕಾರ ತಂದಿದೆ. ಇದರಿಂದ ರೈತರಿಗೂ ಸಮಸ್ಯೆ ಆಗಿದೆ. ಸಹಕಾರಿ ವ್ಯವಸ್ಥೆಗೆ ಬಲ ಕೊಟ್ಟು ಮೂಲ ಆಶಯದಲ್ಲೇ ಇನ್ನಷ್ಟು ಅವಕಾಶಗಳನ್ನು ಬೆಳೆಸಲು ಬಿಡುವ ಬದಲು ಕತ್ತು ಹಿಸುಕುವಂಥ ಆದೇಶ ನೀಡುತ್ತಿವೆ ಎಂದೂ ಆಕ್ಷೇಪಿಸಿದರು. ಕಾಂಗ್ರೆಸ್ ಸಹಕಾರಿ ವ್ಯವಸ್ಥೆಯನ್ನು ಸಹಕಾರಿಗಳಿಗೆ, ಕ್ಷೇತ್ರದ ಬಲವರ್ಧನೆಗೆ ಬೇಕಾದಂತೆ ನಡೆಸುತ್ತೇವೆ. ಎಪಿಎಂಸಿ ಯಾರ್ಡಿನಲ್ಲಿ ಕೆಲಸ ಮಾಡುವ ಕಾರ್ಮಿಕರ ಸಮಸ್ಯೆ ನಿವಾರಣೆಗೆ ಜೊತೆ ನಿಲ್ಲುವದಾಗಿ ಭರವಸೆ ನೀಡಿದರು.
ರೈತರಿಗೆ ಬೇಕಾದ ಪಹಣಿ ಬೆಲೆ ಐದು ರೂಪಾಯಿಗೆ ಇಳಿಸಬೇಕು ಎಂದು ಕಾಂಗ್ರೆಸ್ ಹೇಳಿದರೆ ಬಿಜೆಪಿ ಸರಕಾರ 25ರೂ.ಗೆ ಏರಿಸಿದ್ದಾರೆ. ಪ್ರತೀ ವರ್ಷ ಇಲಾಖೆಗಳ ಅನುದಾನಕ್ಕೆ, ಬೆಳೆಸಾಲಕ್ಕೆ ಎಲ್ಲವಕ್ಕೂ ಪಹಣಿ ಬೇಕು. ಸರಕಾರ ರೈತ ವಿರೋಧಿ ನೀತಿ ಅನುಸರಿಸುವದೂ ಒಳ್ಳೆಯಾಗುವದಿಲ್ಲ ಎಂದರು. ಅಡಿಕೆ ತೋಟ ಭಾಗಾಯ್ತಕ್ಕೆ ಬಿಟ್ಟ ಬೆಟ್ಟಕ್ಕೆ ಬ ಕರಾಬು ಅಂತ ಮಾಡಿದೆ. ಇದರಿಂದ ಸರಕಾರದ ಸ್ವಾಧೀನಕ್ಕೆ ಬೆಟ್ಟ ಹೋಗುವ ಅಪಾಯವಿದೆ. ಬೆಳೆ ಸಾಲಕ್ಕೆ ರೇಶನ್ ಕಾರ್ಡ ಜೋಡಿಸಿದೆ. ಪಡಿತರ ವಿತರಣೆ ವ್ಯವಸ್ಥೆಗೆ ತಂಬ್ ಹೇಳಿ ವಾರದಲ್ಲಿ ಎರಡು ಮೂರು ದಿನ ಇಂಟರ್ ನೆಟ್, ಕರೆಂಟೇ ಇರೋದಿಲ್ಲ ಎಂದೂ ರೈತರು, ಕಾರ್ಮಿಕರು ದೂರಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಕ್ಷೇತ್ರದ ಸೇವೆಗೆ ಅವಕಾಶ ನೀಡಿದರೆ ಇದನ್ನು ಬಗೆಹರಿಸುವದಾಗಿ ಭೀಮಣ್ಣ ಹೇಳಿದರು.
ಈ ವೇಳೆ ಎಸ್.ಕೆ.ಭಾಗವತ್, ವೆಂಕಟೇಶ ಹೆಗಡೆ ಹೊಸಬಾಳೆ, ದೀಪಕ್ ದೊಡ್ಡೂರು, ಶ್ರೀಪಾದ ಹೆಗಡೆ ಕಡವೆ, ಅಬ್ಬಾಸ ತೋನ್ಸೆ ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top