• Slide
    Slide
    Slide
    previous arrow
    next arrow
  • ಭೀಮಣ್ಣ ನಾಯ್ಕ ಗೆಲುವು ನಿಶ್ಚಿತ: ರವೀಂದ್ರ ನಾಯ್ಕ

    300x250 AD

    ಸಿದ್ದಾಪುರ: ಈ ವಿಧಾನಸಭಾ ಚುನಾವಣೆಯಲ್ಲಿ ಶಿರಸಿ ವಿಧಾನಸಭಾ ಕ್ಷೇತ್ರದಿಂದ ಮತದಾರರ ಒಲವು ಕಾಂಗ್ರೆಸ್ ಪಕ್ಷದ ಪರವಾಗಿದ್ದು, ಪಕ್ಷದ ಅಭ್ಯರ್ಥಿ ಭೀಮಣ್ಣ ನಾಯ್ಕ ಗೆಲುವು ನಿಶ್ಚಿತವಾಗಿದೆ ಎಂದು ಕಾಂಗ್ರೇಸ್ ಧುರೀಣ ರವೀಂದ್ರ ನಾಯ್ಕ ಹೇಳಿದರು.
    ಅವರು ತಾಲೂಕಿನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಜರುಗಿದ ಪತ್ರಿಕಾಗೋಷ್ಟಿಯಲ್ಲಿ ಬೆಲೆ ಏರಿಕೆ ಕರಪತ್ರವನ್ನ ಬಿಡುಗಡೆಗೊಳಿಸುತ್ತಾ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರದ ಆಡಳಿತ ವಿರೋಧಿ ಅಲೆ ರಾಜ್ಯಾದ್ಯಂತ ಇದ್ದು, ರಾಜ್ಯದಲ್ಲಿಯೂ ಸಹಿತ ಬಿಜೆಪಿ ಪಕ್ಷವನ್ನು ತಿರಸ್ಕರಿಸಲಿದ್ದಾರೆ ಎಂದು ಅವರು ಹೇಳಿದರು. ತೀವ್ರತರದ ಬೆಲೆ ಏರಿಕೆ, ದವಸಧಾನ್ಯಗಳ ಬೆಲೆ ನಿಯಂತ್ರಣದಲ್ಲಿ ವೈಫಲ್ಯ, ದಿನ ಬಳಕೆಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚುವಿಕೆ ಒಂದೆಡೆಯಾದರೆ, ಇನ್ನೊಂದೆಡೆ ಭ್ರಷ್ಟಾಚಾರದಿಂದ ರಾಜ್ಯ ಸರಕಾರವು ಸಂಪೂರ್ಣವಾಗಿ ವೈಫಲ್ಯವಾಗಿದೆ ಎಂದು ಅವರು ಆರೋಪಿಸಿದರು.

    ಕಾಂಗ್ರೆಸ್ ಹಿರಿಯ ನಾಯಕ ದೀಪಕ್ ಹೆಗಡೆ ದೊಡ್ಡುರು ಮಾತನಾಡಿ, ಸುಳ್ಳು ಭರವಸೆ ಮೂಡಿಸುತ್ತಾ, ಜನರಿಗೆ ಮರಳು ಮಾಡಿ, ಮತ ಗಳಿಸುವ ಪ್ರವೃತ್ತಿಯನ್ನ ಬಿಜೆಪಿ ಪಕ್ಷವು ಬಿಡಬೇಕು. ಈ ಬಾರಿ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ ಪಕ್ಷವು ಭರವಸೆಕ್ಕಿಂತ ಹೆಚ್ಚಿನ ಕಾರ್ಯವನ್ನು ಜರುಗಿಸಿದೆ. ಈ ದಿಶೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಲೆಯಲ್ಲ, ಬಿರುಗಾಳಿಯ ರೀತಿಯಲ್ಲಿ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವುದರಿಂದ ರಾಜ್ಯದಲ್ಲಿ ಕೇಂದ್ರ ಸರಕಾರ ಆಡಳಿತ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

    300x250 AD

    ಪತ್ರಿಕಾಗೋಷ್ಟಿಯಲ್ಲಿ ಮಾಭ್ಲೇಶ್ವರ ನಾಯ್ಕ ಬೇಡ್ಕಣಿ, ಅಜಿರಾ ಬೇಗಂ ಕಾನಗೋಡ, ಶ್ರೀಪತಿ ನಾಯ್ಕ ಸುರಗಾಲ, ಕೆರಿಯಾ ಗೌಡ ಕಟ್ಟಿಕೈ, ಮಾಭ್ಲೇಶ್ವರ ನಾಯ್ಕ ಹುಲಿಮನೆ, ಬಿಡಿ ನಾಯ್ಕ ಇಟಗಿ, ರಾಘು ನಾಯ್ಕ ಕವಂಚೂರು, ಸುಮಿತ್ರಾ ನಾಯ್ಕ ಶಿರಳಗಿ, ಜಯಂತ ನಾಯ್ಕ ಬನಗಟ್ಟಿ, ಚಂದ್ರ ಮರಾಠಿ ಕೊಡಿಗದ್ದೆ, ಜಿ.ಬಿ.ನಾಯ್ಕ ಕಡಕೇರಿ, ಅಜ್ಯಪ್ಪ ನಾಯ್ಕ ಕಾನಗೋಡ, ವಿನಾಯಕ ಕೊಂಡ್ಲಿ, ಅಣ್ಣಪ್ಪ ಶಿರಳಗಿ, ಮಹೇಶ ಹರಕನಹಳ್ಳಿ, ದಿನೇಶ್ ನಾಯ್ಕ ಬೇಡ್ಕಣಿ, ಸುನೀಲ್ ನಾಯ್ಕ ಸಂಪಖ0ಡ ಮುಂತಾದವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top