Slide
Slide
Slide
previous arrow
next arrow

ಫಾರಂ ನಂಬರ್ 3, ಇ ಸ್ವತ್ತು ಸಮಸ್ಯೆ ನಿವಾರಣೆಗೆ ಬದ್ಧ: ಭೀಮಣ್ಣ ನಾಯ್ಕ

300x250 AD

ಶಿರಸಿ: ನಗರದಲ್ಲಿ ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ಫಾರಂ ನಂಬರ್ 3 ಸಮಸ್ಯೆಯನ್ನು ಅಧಿಕಾರಕ್ಕೆ ಬಂದ ಕೆಲವೇ ದಿನದಲ್ಲಿ ಬಗೆಹರಿಸಲಾಗುತ್ತದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಭರವಸೆ ನೀಡಿದರು.

ಅವರು ನಗರದ ಮರಾಠಿಕೊಪ್ಪದಲ್ಲಿ ರೋಡ್ ಶೋ ನಡೆಸಿ ಮಾತನಾಡಿ, ಜನರಿಗೆ ಕಟ್ಟಡ ಕಟ್ಟಲೂ, ಬ್ಯಾಂಕ್ ಸಾಲಕ್ಕೂ, ಕಾರ್ಮಿಕರಿಗೆ ಉದ್ಯೋಗ ಇಲ್ಲದೆಯೂ ಫಾರಂ ನಂಬರ್ 3 ಸಮಸ್ಯೆ ಮಾಡುತ್ತಿದೆ. ಇದನ್ನು ಬಿಜೆಪಿ ಸರಕಾರ ಶೀಘ್ರ ಇಡೇರಿಸುತ್ತದೆ ಎಂದೇ ನಾಟಕ ಮಾಡಿತು. ಆದರೆ, ಕಾಂಗ್ರೆಸ್ ಜನರ ಸಮಸ್ಯೆ ವಿಚಾರದಲ್ಲಿ ನಾಟಕ ಮಾಡುವದಿಲ್ಲ ಎಂದು ಭರವಸೆ ನೀಡಿದರು.

ಗ್ರಾಮೀಣ ಭಾಗದಲ್ಲಿ ಇ ಸ್ವತ್ತು ಸಮಸ್ಯೆ ಆಗಿದೆ. ಇ ಸ್ವತ್ತು, ಫಾರಂ ನಂಬರ್ 3 ಈ ಎರಡೂ ವಿಚಾರದಲ್ಲಿ ಜೀವ ಜಲಕಾರ್ಯ ಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರರು, ಗೋಪಾಲಕೃಷ್ಣ ಆನವಟ್ಟಿ ಅವರ ನೇತೃತ್ವದಲ್ಲಿ ಹೋರಾಟ ಮಾಡಿದ್ದರೂ ಆಳುವ ಜನರ ಕಿವಿಗೆ ಕೇಳಲಿಲ್ಲ. ಕಾಂಗ್ರೇಸ್ ಧ್ವನಿ ಎತ್ತಿದರೂ ಪ್ರಯೋಜನ ಆಗಲಿಲ್ಲ. ಆದರೆ, ನಿಮ್ಮ ಮತದ ಆಶೀರ್ವಾದ ನೀಡದರೆ ಸಮಸ್ಯೆ ನಿವಾರಿಸುತ್ತೇವೆ ಎಂದರು.
ಬಿಸಿಲಿನ ಬೇಗೆ ಹೆಚ್ಚುತ್ತಿದೆ. ಆಟೋ ಚಾಲಕರು ಮಳೆ ಬಿಸಿಲು ಎನ್ನದೇ ಬಾಡಿಗೆಗೆ ಬಯಲಿನಲ್ಲಿ ಕಾಯುತ್ತಾರೆ. ಅವರಿಗೆ ಸೂರು ಬೇಕು ಎಂಬ ಬೇಡಿಕೆ ಬಹುಕಾಲದಿಂದ ಇದೆ. ಕಾಂಗ್ರೆಸ್ ಅವರಿಗೆ ಅಗತ್ಯವಾದ ನಿಲ್ದಾಣ ಹಾಗೂ ಅದಕ್ಕೊಂದು ಸೂರಿನ ವ್ಯವಸ್ಥೆ ಕಲ್ಪಿಸುವದು ಪ್ರಥಮ ಆದ್ಯತೆ ಎಂದರು. ನೆನಗುದಿಗೆ ಬಿದ್ದಿರುವ ಅರಣ್ಯ ಅತಿಕ್ರಮಣದಾರರ ನಿವಾಸಿಗಳ ಸಮಸ್ಯೆಗೆ ಸರಕಾರ ಮಟ್ಟದಲ್ಲಿ ಚರ್ಚಿಸಿ ಪಟ್ಟಾ ನೀಡಲಾಗುತ್ತದೆ ಎಂದ ಭೀಮಣ್ಣ, ಪ್ರತೀ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಕೊಡಲಾಗುತ್ತದೆ. 2000 ರೂ. ಗೃಹ ಲಕ್ಷ್ಮೀಗೆ ನೀಡುತ್ತೇವೆ. ಪ್ರತಿ ತಿಂಗಳು 10 ಕೇಜಿ ಪ್ರತಿ ವ್ಯಕ್ತಿಗೆ ನೀಡುತ್ತೇವೆ. ಯುವಕ ನಿರುದ್ಯೋಗಿಗಳಿಗೆ ಯುವ ನಿಧಿ ಕೊಡುತ್ತೇವೆ. ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಾಗುತ್ತದೆ ಎಂದು ಕಾಂಗ್ರೆಸ್ ಗ್ಯಾರೆಂಟಿ ಪ್ರಸ್ತಾಪಿಸಿದರು. ನಾನು ಒಂದು ಮತ ಹಾಕದಿದ್ದರೆ ಏನು ಎಂದು ನೋಡಬೇಡಿ. ಮೇ 10ಕ್ಕೆ ಮತ ಚಲಾವಣೆ ಮಾಡಿ ಎಂದೂ ಮನವಿ ಮಾಡಿದರು.

300x250 AD

ಈ ವೇಳೆ ಜಗದೀಶ ಗೌಡ, ಗಣೇಶ ದಾವಣಗೆರೆ, ಸಿರಿ ಮೊಗೇರ, ರಾಘವೇಂದ್ರ ಶೆಟ್ಟಿ, ಸುಭಾಷ್ ನಾಯ್ಕ್, ದೀಪಕ್ ದೊಡ್ಡೂರು, ಲಿಂಗಪ್ಪ ಕೊಂಡ್ಲಿ ಕಿಶನ್ ಪಿಳ್ಳೆ, ಅಶೋಕ ಮರಡೂರ, ಜ್ಯೋತಿ ಪಾಟೀಲ್, ಚಂದ್ರಕಲಾ ಮುಡ್ಕಣಿ, ಸುಕನ್ಯಾ ಮೊಗೇರ, ಶ್ರೀಧರ ನಾಯ್ಕ್ ವಕೀಲ, ತಿಲಕ್ ಹುಬ್ಳಿ ಇತರರು ಇದ್ದರು.

Share This
300x250 AD
300x250 AD
300x250 AD
Back to top