• Slide
    Slide
    Slide
    previous arrow
    next arrow
  • ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಚೈನಾ ಸೆಟ್ ಇದ್ದಂತೆ: ಸಚಿವ ಪೂಜಾರಿ

    300x250 AD

    ಸಿದ್ದಾಪುರ: ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಚೈನಾ ಸೆಟ್ ಇದ್ದಂತೆ. ಚೈನಾ ಸೆಟ್ ಕೊಡುವ ಗ್ಯಾರಂಟಿ ಕಾರ್ಡ್ಗೂ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡಗೆ ಏನು ವ್ಯತ್ಯಾಸ ಇಲ್ಲ. 75 ವರ್ಷಗಳ ಕಾಲ ರಾಜಕೀಯ ಮಾಡಿರುವ ಒಂದು ರಾಜಕೀಯ ಪಕ್ಷ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗ್ಯಾರಂಟಿ ಕಾರ್ಡ್ ಕೊಡುವ ಮಟ್ಟಕ್ಕೆ ಇಳಿದಿರುವುದು ನಮಗೆ ಸಂಕಟವನ್ನು ಉಂಟು ಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳೀದರು.

    ಅವರು ತಾಲೂಕಿನ ವಿವಿಧೆಡೆ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪರ ನಡೆಸಿದ ಪ್ರಚಾರ ಸಭೆಯಲ್ಲಿ ಮಾತನಾಡಿದರು. ನಮ್ಮ ಹೋರಾಟದಿಂದ ನಮ್ಮನ್ನು ಒಪ್ಪದೇ ಇರುವಂತಹ ಒಂದು ರಾಜಕೀಯ ಪಕ್ಷ ಇಂದು ಕೇಸರಿ ಶಾಲು ಹಾಕೆಬಿಟ್ಟಿತ್ತು ಅಲ್ಲಿಯವರೆಗೆ ಅವರನ್ನು ನಾವು ತಂದಿದ್ದೇವೆ. ಕಾಂಗ್ರೆಸಿನ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸುರ್ಜೆವಾಲ ರವರನ್ನು ಹಿಂದುಗಳೆ0ದು ಜನ ಒಪ್ಪಿಕೊಳ್ಳಬೇಕಾದರೆ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಕಾರ್ಯ ತರಲಿ ಹಿಂದುಗಳ ಭಾವನೆಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಇದನ್ನು ಒಪ್ಪಿಕೊಳ್ಳುತ್ತದೆ ಎಂದು ಹೇಳಿ ಒಂದು ಹೇಳಿಕೆ ಕೊಡಿ ಸಾಕು. ವಂಚನೆಯ ಸಂಚಿನ ಮೂಲಕ ಮತಾಂತರ ಆಗಬಾರದು ಎಂಬ ಉದ್ದೇಶದಿಂದ ಮತಾಂತರ ಕಾಯ್ದೆಯನ್ನು ತರಲಾಗಿದೆ. ಜಿಲ್ಲಾಧಿಕಾರಿಗಳಿಗೆ ಒಂದು ಅರ್ಜಿಯನ್ನು ನೀಡಿ ಇದ್ದ ಧರ್ಮವನ್ನು ಬಿಟ್ಟು ಬೇರೆ ಧರ್ಮಕ್ಕೆ ಹೋಗಬಹುದು . ಬಡವರ ಪರ ಸಾಮಾನ್ಯರ ಪರ ಕೆಲಸ ಮಾಡುವಂತಹ ಒಬ್ಬ ವ್ಯಕ್ತಿಯನ್ನು ವಿಧಾನಸೌಧಕ್ಕೆ ಆರಿಸಿ ಕಳಿಸಿದರೆ ಅವರ ಧ್ವನಿಯಾಗಿ ಅವರು ಅಲ್ಲಿ ಕೆಲಸ ಮಾಡುತ್ತಾರೆ ಹಾಗಾಗಿ ಇದೇ ಬರುವ 10ನೇ ತಾರೀಖಿನಂದು ನಡೆಯುವ ಚುನಾವಣೆಯಲ್ಲಿನಮ್ಮ ಪಕ್ಷದ ಅಭ್ಯರ್ಥಿ ಕಾಗೇರಿಯವರಿಗೆ ನಿಮ್ಮ ಮತ ನೀಡಿ ಆರಿಸಿ ತನ್ನಿ ಎಂದರು.

    300x250 AD

    ಮೋದಿಜಿಯವರ0ತ ಪ್ರಧಾನಮಂತ್ರಿಯನ್ನು ಪಡೆದಿರುವುದು ನಮ್ಮ ದೇಶದ ಹೆಮ್ಮೆ. ತೆರಿಗೆ ಹಣದಲ್ಲಿ ಶೇಕಡ 52 ರಷ್ಟು ಸರ್ಕಾರಿ ನೌಕರರ ಸಂಬಳ ಹಾಗೂ ಪಿಂಚಣಿಗೆ ಖರ್ಚಾಗುತ್ತದೆ ಉಳಿದ ಶೇಕಡ 48 ರಲ್ಲಿ ಅಭಿವೃದ್ಧಿ ಜೊತೆಗೆ ಕಾಂಗ್ರೆಸ್ ಹೇಳುವ ಇಂತಹ ಉಚಿತ ಯೋಜನೆಗಳನ್ನು ನೀಡಲು ಹೇಗೆ ಸಾಧ್ಯ. ದೇಶದ ಹಾಗೂ ರಾಜ್ಯದ ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರದ ಅವಶ್ಯಕತೆ ಇದ್ದು ನಮ್ಮ ಪಕ್ಷದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಹೆಚ್ಚಿನ ಮತ ನೀಡಿ ಆರಿಸಿ ಮೋದಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರ ಆಡಳಿತಕ್ಕೆ ಬರುವಂತೆ ನೋಡಿಕೊಳ್ಳಿ ಎಂದರು.

    Share This
    300x250 AD
    300x250 AD
    300x250 AD
    Leaderboard Ad
    Back to top