Slide
Slide
Slide
previous arrow
next arrow

ಮೋದಿಯವರ ಕಾರ್ಯಕ್ರಮ ಅವಿಸ್ಮರಣೀಯವಾಗಲಿದೆ: ಗಿರೀಶ ಪಟೇಲ

300x250 AD

ಅಂಕೋಲಾ: ತನ್ನದೇ ಆದ ವಿಶೇಷತೆಗಳನ್ನು ಹೊಂದಿರುವ ಅಂಕೋಲೆಯಲ್ಲಿ ನಡೆಯುವ ಮೋದೀಜಿಯವರ ಕಾರ್ಯಕ್ರಮ ಅವಿಸ್ಮರಣೀಯವಾಗಲಿದೆ ಎಂದು ಬಿಜೆಪಿ ಜಿಲ್ಲಾ ಪ್ರಭಾರಿ ಗಿರೀಶ ಪಾಟೀಲ ಹೇಳಿದರು.

ಅವರು ಮೋದಿಯವರ ಕಾರ್ಯಕ್ರಮ ಆಯೋಜಿಸಿದ ಸ್ಥಳದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂಕೋಲಾದಲ್ಲಿ ಹಲವಾರು ವೈಶಿಷ್ಟ್ಯಗಳಿವೆ. ಸುಂದರ ಕರಾವಳಿ ತೀರ ಹೊಂದಿರುವ ಕರ್ನಾಟಕದ ಕಾಶ್ಮೀರ, ಸ್ವಾತಂತ್ರ‍್ಯ ಹೋರಾಟದ ಪುಣ್ಯ ನೆಲ ದಕ್ಷಿಣದ ಬಾರ್ಡೋಲಿ, ಗೌರೀಶ ಕಾಯ್ಕಿಣಿ, ದಿನಕರ ದೇಸಾಯಿಯಂತಹ ಸಾಹಿತಿಗಳ ತವರೂರು, ಎರಡು ಪದ್ಮಶ್ರೀ ಪುರಸ್ಕೃತರ ಹುಟ್ಟೂರು, ಎಲ್ಲೆಲ್ಲೂ ಹಸಿರು ಸುಂದರ ಪರಿಸರ ಇಂತಹ ಹಲವಾರು ವೈಶಿಷ್ಟ್ಯಗಳ ಅಂಕೋಲೆಗೆ ಆಗಮಿಸುವ ಉತ್ತರದ ಬಾರ್ಡೋಲಿ ಗುಜರಾತ ಮೂಲದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮ ಅವಿಸ್ಮರಣೀಯವಾಗಲಿದೆ ಎಂದರು.
3 ಲಕ್ಷಕ್ಕಿಂತ ಹೆಚ್ಚು ಜನ ಸೇರುವದರಿಂದ ಎಲ್ಲ ರೀತಿಯ ಸುವ್ಯವಸ್ಥೆ ಮಾಡಲಾಗಿದೆ. ಅಭೂತಪೂರ್ವ ಭದ್ರತೆಯನ್ನು ಆಯೋಜಿಸಲಾಗಿದೆ. ಬೇಸಿಗೆಯ ಬಿಸಿಲಿನಲ್ಲಿ ಕಾರ್ಯಕ್ರಮಕ್ಕೆ ಬಂದವರಿಗೆ ಎಲ್ಲ ಕಡೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಎಲ್ಲಿಯೂ ಜನಸಂದಣಿಯಾಗದಂತೆ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಬಿಜೆಪಿಯ ಜಿಲ್ಲೆಯ ಎಲ್ಲ ಪ್ರಭಾರಿಗಳು, ಪ್ರಮುಖರು ಇಲ್ಲಿಯೇ ಬೀಡು ಬಿಟ್ಟಿದ್ದು ಪ್ರತಿಯೊಂದೂ ಕೂಡ ಅಚ್ಚುಕಟ್ಟಾಗಿ ಸಾಗುವಂತೆ ನೋಡಿಕೊಳ್ಳಲಾಗುತ್ತಿದೆ. ಇದೊಂದು ಅಚ್ಚುಕಟ್ಟದ ಕಾರ್ಯಕ್ರಮವಾಗಲಿದೆ ಎಂದರು.
ಕುಮಟಾ ಶಾಸಕ ದಿನಕರ ಶೆಟ್ಟಿ ಮಾತನಾಡಿ ಕುಮಟಾ ತಾಲೂಕಿನಿಂದ ಕನಿಷ್ಠ 25 ಸಾವಿರ ಜನ ಬರಲಿದ್ದಾರೆ. ಪಕ್ಷದ ಕಾರ್ಯಕರ್ತರೇ ತಮ್ಮ ಸ್ವಂತ ಖರ್ಚಿನಿಂದ ಬಸ್ಸುಗಳನ್ನು ವ್ಯವಸ್ಥೆ ಮಾಡಿಕೊಂಡಿರುವದು ಅವರ ಆಸಕ್ತಿಯನ್ನು ತಿಳಿಸುತ್ತದೆ. ಕೊರತೆಯಾದರೆ ಬೇರೆ ಜಿಲ್ಲೆಯಿಂದ ಬಸ್ಸುಗಳನ್ನು ಒದಗಿಸುತ್ತೇವೆ ಎಂದರು.
ವಿಧಾನ ಪರಿಷತ್ ಶಾಸಕ ಗಣಪತಿ ಉಳ್ವೇಕರ ಮಾತನಾಡಿ ಮೋದಿಯವರ ಆಗಮನ ಪಕ್ಷದಲ್ಲಿ ಹೊಸ ಚೇತನವನ್ನು ತುಂಬಿದೆ ಜಿಲ್ಲೆಯಾದ್ಯಂತ ಜನ ಆಗಮಿಸಲಿದ್ದಾರೆ ಎಂದರು. ಜಿಲ್ಲಾ ವಕ್ತಾರ ನಾಗರಾಜ ನಾಯಕ ಸ್ವಾಗತಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಜಲ್ಲಾ ಅಧ್ಯಕ್ಷ ವೆಂಕಟೇಶ ನಾಯಕ, ಮಾಜಿ ಅಧ್ಯಕ್ಷ ಕೆ ಜಿ ನಾಯ್ಕ, ಗೋವಿಂದ ನಾಯ್ಕ, ಚಂದ್ರು ಎಸಳೆ, ಗೋವಾ ಶಾಸಕ ಮತ್ತು ಕಾರವಾರ ಅಂಕೋಲಾ ಕ್ಷೇತ್ರದ ಚುನಾವಣಾ ಪ್ರಭಾರಿ ಪ್ರೇಮೇಂದ್ರ ಶೇಟ್ ಎನ್ ಎಸ್ ಹೆಗಡೆ ಇದ್ದರು.

300x250 AD
Share This
300x250 AD
300x250 AD
300x250 AD
Back to top