Slide
Slide
Slide
previous arrow
next arrow

ಎಂಎಂ ಮಹಾವಿದ್ಯಾಲಯ ಕಾರ್ಯಾಲಯ ಅಧೀಕ್ಷಕ ಶಾಂತಾ ನಾಯಕ್ ನಿಧನ

300x250 AD

ಶಿರಸಿ: ಇಲ್ಲಿನ ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಕಾರ್ಯಾಲಯ ಅಧೀಕ್ಷಕರಾಗಿ‌ ಕಾರ್ಯ ನಿರ್ವಹಿಸುತ್ತಿದ್ದ ಶಾಂತಾ ನಾಯಕ್ ಅಕಾಲಿಕವಾಗಿ ನಿಧನರಾಗಿದ್ದು, ಮೃತರು ಪತ್ನಿ,ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ಈ ಹಿನ್ನೆಲೆಯಲ್ಲಿ ಸಂತಾಪ ಸಭೆಯನ್ನು ಕಾಲೇಜಿನಲ್ಲಿ ಹಮ್ಮಿ‌ಕೊಳ್ಳಲಾಗಿತ್ತು. ಮೃತರ ಆತ್ಮಕ್ಕೆ ಶಾಂತಿ ಸಿಗಲಿ,ಅವರ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ದೇವರು ಕೊಡಲೆಂದು ಪ್ರಾರ್ಥಿಸಿ ಎರಡು ನಿಮಿಷಗಳ ಮೌನಾಚರಣೆ ಮಾಡಲಾಯಿತು.ಕಾಲೇಜಿನ ಪ್ರಾಚಾರ್ಯ ಡಾ. ಟಿ.ಎಸ್. ಹಳೆಮನೆ ಮೃತರ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಸಭೆಯಲ್ಲಿ ಎಂಇಎಸ್ ನ ಪದಾಧಿಕಾರಿಗಳಾದ ಎಸ್.ಕೆ. ಭಾಗವತ್, ಡಾ.ಜಿ.ಎಸ್. ಭಟ್ ಉಪ್ಪೋಣಿ, ಅಜಯ್ ಪಾತ್ರಪೇಕರ್ ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top