Slide
Slide
Slide
previous arrow
next arrow

‘ಕ್ರೀಡೆ ಮನುಷ್ಯನ ಆತ್ಮವಿಶ್ವಾಸ ಹೆಚ್ಚಳಕ್ಕೆ ಸಹಾಯಕಾರಿ’

300x250 AD

ಸಿದ್ದಾಪುರ: ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ದೇಹವು ಉತ್ತಮ ವ್ಯಾಯಾಮದ ಜೊತೆಗೆ ಮಾನಸಿಕ ಮತ್ತು ದೈಹಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಮನುಷ್ಯನನ್ನು ಆತ್ಮವಿಶ್ವಾಸ ಮತ್ತು ಪ್ರಗತಿಪರರನ್ನಾಗಿ ಮಾಡುತ್ತದೆ ಎಂದು ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ವಿನಾಯಕ ಶೇಟ್ ಹಾಗೂ ಉದ್ಯಮಿ ಸದಾಶಿವ ಬಿ.ನಾಯ್ಕ್ ಅಭಿಪ್ರಾಯಪಟ್ಟರು.
ಅವರು ತಾಲೂಕ ಕ್ರೀಡಾಂಗಣದಲ್ಲಿ ನಡೆದ ಡಾಲ್ಫಿನ್ ಕ್ರಿಕೆಟ್ ಕ್ಲಬ್ ಹಾಗೂ ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ಬೇಸಿಗೆ ಕ್ರಿಕೆಟ್ ಶಿಬಿರವನ್ನು ಜಂಟಿಯಾಗಿ ಉದ್ಘಾಟಿಸಿ ಮಾತನಾಡಿದರು.
ಸ್ಪೋರ್ಟ್ಸ್ ಅಕಾಡೆಮಿಯ ಕೋಶಾಧ್ಯಕ್ಷ ಸುದರ್ಶನ್ ಪಿಳ್ಳೆ, ಅಕಾಡೆಮಿಯ ನಿರ್ದೇಶಕ ಡೊಮಿನಿಕ್ ಫರ್ನಾಂಡಿಸ್, ಕಾರ್ಯದರ್ಶಿ ನಂದನ್ ಬೋರ್ಕರ್, ಪ್ರಶಾಂತ್ ಡಿ.ಶೇಟ್, ದರ್ಶನ್ ಡಿ.ರೇವಣಕರ್, ನಾಗೇಶ ಶಾಮೈನ ಹಾಗೂ ಶಿಬಿರಾರ್ಥಿಗಳು ಇದ್ದರು.

300x250 AD
Share This
300x250 AD
300x250 AD
300x250 AD
Back to top