Slide
Slide
Slide
previous arrow
next arrow

ಕಾರವಾರ- ಅಂಕೋಲಾ ನನ್ನೆರಡು ಕಣ್ಣುಗಳು: ರೂಪಾಲಿ ನಾಯ್ಕ

300x250 AD

ಅಂಕೋಲಾ: ಕಾರವಾರ ಮತ್ತು ಅಂಕೋಲಾ ಎರಡೂ ತಾಲ್ಲೂಕು ನನ್ನೆರಡು ಕಣ್ಣುಗಳಿದ್ದಂತೆ. ಭೇದ ಮಾಡದೆ ಕ್ಷೇತ್ರದ ಜನರಿಗೆ ಅನುಕೂಲವಾಗುವ ಕಾರ್ಯಗಳನ್ನು ಮಾಡಿದ್ದೇನೆ ಎಂದು ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಹೇಳಿದರು.

ತಾಲ್ಲೂಕಿನ ವಾಸರಕುದ್ರಗಿಯಲ್ಲಿ ಶುಕ್ರವಾರ ಪ್ರಚಾರ ನಡೆಸಿ ಅವರು ಮಾತನಾಡಿ, ನನ್ನ ಕ್ಷೇತ್ರದಲ್ಲಿ ರಸ್ತೆ ಸೇತುವೆ, ದೇವಸ್ಥಾನ, ಶಾಲಾ ಕಾಲೇಜು ಸೇರಿದಂತೆ ವಿವಿಧ ರೀತಿಯ ಅಭಿವೃದ್ಧಿಗಳನ್ನು ಮಾಡಿದ್ದೇನೆ. ಈ ಭಾಗದಲ್ಲಿ ನೀರಿನ ಸಮಸ್ಯೆ ಇರುವುದನ್ನು ಮನಗಂಡು 38 ಕೋಟಿ ರೂ ವೆಚ್ಚದಲ್ಲಿ ಶಿರಗುಂಜಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಕಾಮಗಾರಿಗೆ ಅಡಿಗಲ್ಲು ಸ್ಥಾಪಿಸಲಾಗಿದೆ. ಇದರಿಂದಾಗಿ ಏಳು ಗ್ರಾಮ ಪಂಚಾಯತಿಗಳಿಗೆ ನೀರಿನ ಸಮಸ್ಯೆ ನೀಗಲಿದೆ ಎಂದರು.

300x250 AD

ಪಕ್ಷಪಾತವಿಲ್ಲದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ಎಲ್ಲಿ ರಸ್ತೆ ಕುಡಿಯುವ ನೀರಿನ ಸಮಸ್ಯೆ ಇದೆಯೋ, ಎಲ್ಲಿ ಅಭಿವೃದ್ಧಿ ಕಾರ್ಯಗಳಾಗಬೇಕೋ ಅಲ್ಲಿ ಯಾವುದೇ ಜಾತಿ,ಧರ್ಮ,ಪಕ್ಷ ಬೇಧವಿಲ್ಲದೇ ಕೆಲಸ ಮಾಡಿದ್ದೆನೆ. ಕಾಂಗ್ರೆಸ್ ಸರಕಾರದ ಸಂದರ್ಭದಲ್ಲಿ ಅಭಿವೃದ್ಧಿ ಮಾಡದೇ ದೇಶದ ಮೇಲಿನ ಸಾಲವನ್ನು ಊಹೆಗೂ ನಿಲುಕದಷ್ಟು ಮಾಡಿ ದೇಶವನ್ನು ಅಧೋಗತಿಗೆ ತಳ್ಳುವ ಕೆಲಸ ಮಾಡಿತ್ತು ಆದರೆ ಈಗ ಮೋದಿಜಿ ನೇತ್ರತ್ವದ ಬಿಜೆಪಿ ಸರಕಾರ ದೇಶವನ್ನು ಸಮರ್ಥವಾಗಿ ನಡೆಸಿಕೊಂಡು ಹೊರಟಿದೆ. ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಮಾಡಲು ನಿಮ್ಮೆಲ್ಲರ ಆಶೀರ್ವಾದ ನೀಡಬೇಕು ಎಂದು ಮತಯಾಚಿಸಿದರು.
ವಿಧಾನಪರಿಷತ್ ಸದಸ್ಯರಾದ ಗಣಪತಿ ಉಳ್ವೇಕರ ಮಾತನಾಡಿ, ದೇಶಕ್ಕೆ ಮೋದಿಹಾಗೂ ಕ್ಷೇತ್ರಕ್ಕೆ ರೂಪಾಲಿ ನಾಯ್ಕ ನಮ್ಮೆಲ್ಲರ ಆಯ್ಕೆಯಾಗಬೇಕು. ಹಿಂದೆ0ದೂ ಕಾಣದ ರೀತಿಯಲ್ಲಿ ಅಭಿವೃದ್ಧಿಯಾಗಿದೆ. ಅದನ್ನು ಮುಂದುವರೆಸಲು ರೂಪಾಲಿ ನಾಯ್ಕ ಅವರನ್ನು ಆರಿಸಿ ತರಬೇಕಿದೆ. ಮೇ 10ರಂದು ನಡೆಯುವ ಮತದಾನದಲ್ಲಿ ಕಮಲದ ಗುರುತಿಗೆ ಮತ ನೀಡಿ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಓಬಿಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ರಾಜೇಂದ್ರ ನಾಯ್ಕ, ಶಕ್ತಿಕೇಂದ್ರ ಪ್ರಮುಖರಾದ ಎಂ. ಎನ್. ಭಟ್, ನಗರ ಪ್ರಭಾರಿಯಾದ ಆರತಿ ಗೌಡ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top