Slide
Slide
Slide
previous arrow
next arrow

ಮೀನುಗಾರರಿಗೆ ಒಳ್ಳೆಯದಾಗಬೇಕಾದರೆ ಮೋದಿ ನೇತೃತ್ವದ ಬಿಜೆಪಿ ಗೆಲ್ಲಬೇಕು: ಪ್ರಮೋದ್ ಮಧ್ವರಾಜ್

300x250 AD

ಕಾರವಾರ: ಮೀನುಗಾರರಿಗೆ ಒಳ್ಳೆಯದಾಗಬೇಕಾದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಗೆಲ್ಲಬೇಕು. ಈ ನಿಟ್ಟಿನಲ್ಲಿ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಅವರನ್ನ ಗೆಲ್ಲಿಸಿ ಎಂದು ಮಾಜಿ ಸಚಿವ ಮೀನುಗಾರ ಮುಖಂಡ ಪ್ರಮೋದ್ ಮಧ್ವರಾಜ್ ಹೇಳಿದರು.

ತಾಲೂಕಿನ ಮಾಜಾಳಿಯಲ್ಲಿ ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಪರ ಪ್ರಚಾರ ನಡೆಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ಈ ದೇಶಕ್ಕೆ ಅನಿವಾರ್ಯವಾಗಿದ್ದಾರೆ. ಅವರ ಮೇಲೆ ಪ್ರಭಾವಿತನಾಗಿಯೇ ನಾನು ಬಿಜೆಪಿ ಸೇರಿದ್ದೇನೆ. ಮೋದಿ ಇದ್ದರೆ ಈ ದೇಶದ ಪ್ರಗತಿ ಸಾಧ್ಯ. ಈ ನಿಟ್ಟಿನಲ್ಲಿ ಮೋದಿ ನೇತೃತ್ವದ ಬಿಜೆಪಿಗೆ ಮತ ಹಾಕಿ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು.
ತನ್ನ ಕುಟುಂಬಕ್ಕೂ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರಿಗೂ ಹಿಂದಿನಿoದಲೂ ಉತ್ತಮ ಸಂಬಂಧವಿದೆ. ತಾನು ಮೀನುಗಾರ ಸಮುದಾಯದವನಾಗಿದ್ದು 20 ವರ್ಷದ ಹಿಂದೆಯೇ ಮಾಜಾಳಿ ಭಾಗಕ್ಕೆ ಬಂದಿದ್ದೆ. ಮಾಜಾಳಿಯಲ್ಲಿ ಸದ್ಯ ದೊಡ್ಡ ಮಟ್ಟದಲ್ಲಿ ಬಂದರು ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಮುಂದಾಗಿದೆ. ಒಂದೊಮ್ಮೆ ಬಂದರು ನಿರ್ಮಾಣವಾದರೆ ಇಡೀ ದೇಶದಲ್ಲಿಯೇ ಅತ್ಯುತ್ತಮ ಸರ್ವಖುತು ಬಂದರು ನಿರ್ಮಾಣವಾಗಲಿದೆ.

300x250 AD

ಮಾಜಾಳಿಯಲ್ಲಿ ಬಂದರು ನಿರ್ಮಾಣವಾದರೆ ಮಲ್ಪೆ, ವಾಸ್ಕೋ ಮಾದರಿಯಲ್ಲಿ ಈ ಭಾಗ ಅಭಿವೃದ್ದಿಯಾಗಲಿದ್ದು ಮೀನುಗಾರರು ಸಹ ಆರ್ಥಿಕವಾಗಿ ಪ್ರಗತಿ ಕಾಣಲಿದ್ದಾರೆ. ಮಾಜಾಳಿಯ ಈ ಬಂದರು ಅನುಷ್ಠಾನ ಆಗಬೇಕಾದರೆ ಬಿಜೆಪಿಗೆ ಈ ಬಾರಿ ಮತ ಚಲಾಯಿಸಿ ಎಂದು ಪ್ರಮೋದ್ ಮಧ್ವರಾಜ್ ಮನವಿ ಮಾಡಿಕೊಂಡರು. ರೂಪಾಲಿ ನಾಯ್ಕ ಶಾಸಕರಾದ ನಂತರ ಅಪಾರ ಕೆಲಸವನ್ನ ಕ್ಷೇತ್ರದಲ್ಲಿ ಮಾಡಿದ್ದಾರೆ. ಒರ್ವ ಹೆಣ್ಣು ಮಗಳನ್ನ ಶಾಸಕರನ್ನಾಗಿ ಮಾಡಿದ ಕೀರ್ತಿ ಕ್ಷೇತ್ರದ ಜನರದ್ದು. ಈ ಬಾರಿ ಸಹ ಅವಕಾಶ ಮಾಡಿಕೊಟ್ಟರೇ ಮಂತ್ರಿಯಾಗಿ ಇನ್ನು ಹೆಚ್ಚಿನ ಕೆಲಸ ಮಾಡಲಿದ್ದಾರೆ. ಈ ಬಾರಿ ಬಿಜೆಪಿ ಸರ್ಕಾರ ಮತ್ತೆ ರಾಜ್ಯದಲ್ಲಿ ಬರಲು ಸಹಕರಿಸಿ ಎಂದು ಮನವಿ ಮಾಡಿಕೊಂಡರು.
ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಮಾತನಾಡಿ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರ ಮೀನುಗಾರರ ಅಭಿವೃದ್ದಿಗೆ ಸಾಕಷ್ಟು ಯೋಜನೆಗಳನ್ನ ತಂದಿದೆ. ಕ್ಷೇತ್ರದಲ್ಲಿ ಈ ಬಾರಿ ಮೀನುಗಾರರು ಬಿಜೆಪಿ ಅಭ್ಯರ್ಥಿ ರೂಪಾಲಿ ನಾಯ್ಕ ಕೈ ಹಿಡಿಯಲಿದ್ದಾರೆ ಎಂದರು. ನಗರಸಭಾ ಸದಸ್ಯರಾದ ರೇಷ್ಮಾ ಮಾಳ್ಸೇಕರ್, ನಯನಾ ನಿಲಾವರ್, ಚಂದನ್ ಸಾವಂತ್, ಸುಭಾಶ್ ಗುನಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top