• Slide
    Slide
    Slide
    previous arrow
    next arrow
  • ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಮಹಿಳೆ

    300x250 AD

    ದಾಂಡೇಲಿ: ಮನನೊಂದು ಮಹಿಳೆಯೋರ್ವಳು ನೇಣಿಗೆ ಶರಣಾದ ಘಟನೆ ದಾಂಡೇಲಿ ನಗರದ ಗಾಂಧಿನಗರ ಪ್ರದೇಶದಲ್ಲಿ ಬರುವ ಅರಣ್ಯ ಪ್ರದೇಶದಲ್ಲಿ ನಡೆದಿರುವ ಬಗ್ಗೆೆ ಬೆಳಕಿಗೆ ಬಂದಿದೆ.
    ಸ್ಥಳೀಯ ಗಾಂಧಿನಗರದ ನಿವಾಸಿ ಹಾಗೂ ಮನೆ ಮನೆಗಳ ಕಸ ಸಂಗ್ರಹಣೆ ಮಾಡುತ್ತಿದ್ದ 52 ವರ್ಷ ವಯಸ್ಸಿನ ಮೀನಾಕ್ಷಿ ಕುಮಾರ್ ನಾಯ್ಡು ಎಂಬಾಕೆಯೆ ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾಳೆ. ಈಕೆ ಸಂಬಳದ ಹಣ ತೆಗೆದುಕೊಂಡು ಬರುತ್ತೇನೆಂದು ಕಳೆದ ಮೂರು ದಿನಗಳ ಹಿಂದೆ ಮನೆಯಿಂದ ಹೋದವಳು, ಮನೆಗೆ ಬಂದಿರಲಿಲ್ಲ. ಈ ಹಿಂದೆಯೂ ಸಾಕಷ್ಟು ಬಾರಿ ಈ ರೀತಿ ಮಾಡಿ ಮೂರ್ನಾಲ್ಕು ದಿನಗಳ ನಂತರ ಬರುತ್ತಿದ್ದ ಕಾರಣದಿಂದ ಮನೆಯವರು ನೆಂಟರಿಷ್ಟರ ಅಥವಾ ಆಪ್ತರ ಮನೆಗೆ ಹೋಗಿರಬಹುದೆಂದು ಅಂದಾಜಿಸಿದ್ದರು. ಆದರೆ ಬುಧವಾರ ಗಾಂಧಿನಗರದ ಅರಣ್ಯ ಪ್ರದೇಶದಲ್ಲಿ ಆಡುಗಳನ್ನು ಮೇಯಿಸಲು ಹೋಗಿದ್ದವರಿಗೆ ಮಹಿಳೆಯೊರ್ವಳು ಮರದ ಕೊಂಬೆಗೆ ನೇಣು ಬಿಗಿದು ಸಾವನ್ನಪ್ಪಿರುವುದು ಕಂಡು ಬಂದಿದೆ. ತಕ್ಷಣವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
    ಘಟನಾ ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸೈ ಕೃಷ್ಣೆ ಗೌಡ, ಎಎಸೈಗಳಾದ ವೆಂಕಟೇಶ್ ತೆಗ್ಗಿನ್, ಮಹಾವೀರ ಕಾಂಬಳೆ ಹಾಗೂ ಪೊಲೀಸ್ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಮೃತಪಟ್ಟ ಮಹಿಳೆ ಸೋಮವಾರವೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿರಬಹುದೆಂದು ಶಂಕಿಸಲಾಗಿದೆ. ಮೃತದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಮೃತಳಿಗೆ ಮೂವರು ಹೆಣ್ಣು ಮಕ್ಕಳಿದ್ದು, ಇಬ್ಬರಿಗೆ ಮದುವೆಯಾಗಿದೆ. ಕಿರಿಯ ಪುತ್ರಿ ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದಾಳೆಂದು ತಿಳಿದು ಬಂದಿದೆ. ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆoದು ಅಂದಾಜಿಲಾಗಿದ್ದು, ದಾಂಡೇಲಿ ಗ್ರಾಮೀಣ ಪೊಲೀಸರು ಪ್ರಕರಣವನ್ನು ದಾಖಲಿಸುವ ನಿಟ್ಟಿನಲ್ಲಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top